ಕೋಟಿ ಬೇಟೆಯಲ್ಲಿ ಡಿಕೆ ಟಾರ್ಗೆಟ್ ಆಗಿದ್ದೇಕೆ..? ಕಾಂಟ್ಯಾಕ್ಟರ್ ಮನೆಯಲ್ಲಿ ಸಿಕ್ಕ ಹಣ ಯಾರದ್ದು..?
2 ಕೋಟಿ ಐಟಿ ಬೇಟೆಯ ಸುತ್ತ 42 ರಹಸ್ಯ..!
ಕೋಟಿ ಬೇಟೆಯಲ್ಲಿ ಡಿಕೆ ಟಾರ್ಗೆಟ್ ಆಗಿದ್ದೇಕೆ..?
42 ಕೋಟಿಗಳ ಕುತ್ತು..ಯಾರಿಗೆ ಕಾದಿದೆ ಆಪತ್ತು..?
ರಾಜ್ಯದಲ್ಲಿ ನಡೆದ ಐಟಿ ದಾಳಿಗಳಲ್ಲೇ ಇದು ಭರ್ಜರಿ ಬೇಟೆ. ಗುತ್ತಿಗೆದಾರನ(Contractors) ಮನೆಯ ಮಂಚದ ಕೆಳಗೆ ಐಟಿ ಅಧಿಕಾರಿಗಳಿಗೆ ಸಿಕ್ಕಿರೋದು ಬರೋಬ್ಬರಿ 42+ ಕೋಟಿ ರೂಪಾಯಿ. 42 ಗಂಟೆಗಳ ಮೆಗಾ ಆಪರೇಷನ್‌ನಲ್ಲಿ ಬಯಲಾಗಿದೆ ಕುರುಡು ಕಾಂಚಾಣ ಮಹಿಮೆ. ಬೆಂಗಳೂರಿನ(Bengaluru) ಗುತ್ತಿಗೆದಾರ ಕಮ್ ಉದ್ಯಮಿ, ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನಾಗಿದ್ದ ಅಂಬಿಕಾಪತಿಯ(Ambikapati) ಕೋಟಿ ಸಾಮ್ರಾಜ್ಯದ ಮೇಲೆ ಗುರುವಾರ ಸಂಜೆ ಆದಾಯ ಇಲಾಖೆ ಅಧಿಕಾರಿಗಳು ದಾಳಿ (It Raid) ನಡೆಸಿದ್ರು. ಬೆಂಗಳೂರಿನ ಕಾವಲ್‌ಭೈರಸಂಧ್ರದ ಗಣೇಶ ಬ್ಲಾಕ್‌ನಲ್ಲಿರುವ ಅಂಬಿಕಾಪತಿ ಮನೆ, ಆರ್.ಟಿ ನಗರದ ವೈಟ್ ಹೌಸ್‌ನಲ್ಲಿರುವ ಪುತ್ರನ ಮನೆ, ಮಾನ್ಯತಾ ಟೆಕ್ ಪಾರ್ಕ್ ಬಳಿ ಇರೋ ಮಗಳ ಮನೆ.ಹೀಗೆ ಅಂಬಿಕಾಪತಿಗೆ ಸೇರಿದ 3 ಸ್ಥಳಗಳಲ್ಲಿ ತಲಾಷ್ ನಡೆಸಿದ ಐಟಿ ಅಧಿಕಾರಿಗಳಿಗೆ ಸಿಕ್ಕಿರೋದು ಸಣ್ಣ ಮೊತ್ತವಲ್ಲ. ಅಂಬಿಕಾಪತಿ ಮಗನ ಮನೆಯ ಮಂಚದ ಕೆಳಗಂತೂ 22 ಬಾಕ್ಸ್‌ಗಳಲ್ಲಿ ತುಂಬಿಡಲಾಗಿದ್ದ ಗರಿ ಗರಿ ನೋಟುಗಳನ್ನು ಐಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಲೆಕ್ಕ ಹಾಕಿ ನೋಡಿದಾಗ ಸಿಕ್ಕಿರೋ ಹಣ 42 ಕೋಟಿಗೂ ಹೆಚ್ಚು. ಆದರೆ ಈ ಐಟಿ ದಾಳಿಗೂ ಗುತ್ತಿಗೆದಾರ ಅಂಬಿಕಾಪತಿಗೂ ಯಾವುದೇ ಸಂಬಂಧ ಇಲ್ಲ ಅಂತಿದ್ದಾರೆ ಪುತ್ರ ಪ್ರದೀಪ್. ಐಟಿ ದಾಳಿ ಹೀಗೆ ಬಾಕ್ಸ್‌ಗಳಲ್ಲಿ ಕೋಟಿ ಕೋಟಿ, ಗರಿಗರಿ ನೋಟುಗಳ ಕಂತೆ ಸಿಕ್ಕಿರೋದು ಇದೇ ಪ್ರದೀಪ್ ಮನೆಯಲ್ಲಿ. ಅಂಬಿಕಾಪತಿ 20 ವರ್ಷಗಳ ಹಿಂದೆಯೇ ಕಾಂಟ್ರಾಕ್ಟರ್ ಕೆಲಸ ಬಿಟ್ಟಿದ್ರಂತೆ. ನಂತ್ರ ಆ ವೃತ್ತಿಯನ್ನು ಪುತ್ರ ಪ್ರದೀಪ್ ಮುಂದುವರಿಸಿದ್ದಾರೆ. ಪ್ರಮೋದ್ ಎಂಬ ಸ್ನೇಹಿತನ ಜೊತೆ ಸೇರಿ ಪ್ರದೀಪ್ ಗುತ್ತಿಗೆದಾರ ಕೆಲಸ ಮಾಡ್ತಾ ಇದ್ರು.
ಇದನ್ನೂ ವೀಕ್ಷಿಸಿ: ಬಸವನಗುಡಿ ವಾರ್ಡ್ ಹೆಸರು ಬದಲಾವಣೆ: ಹೋರಾಟದ ಎಚ್ಚರಿಕೆ ನೀಡಿದ ನಿವಾಸಿಗಳು