ಒಂದಲ್ಲ ಎರಡಲ್ಲ..ಅಲ್ಲಿ ಬಿದ್ದಿದ್ದು 4 ಹೆಣಗಳು: ದೀಪಾವಳಿ ದಿನ ರಕ್ತದೋಕುಳಿ ಆಡಿದ್ದ ಹಂತಕ..!


10 ನಿಮಿಷದಲ್ಲಿ ನಾಲ್ವರನ್ನ ಕೊಂದು ಮುಗಿಸಿದ್ದ..!
ಆಟೋ ಡ್ರೈವರ್ ಕೊಟ್ಟಿದ್ದ ಹಂತಕನ ಸುಳಿವು..!
ಆಟ ಆಡೋ ಹುಡುಗನನ್ನೂ ಬಿಡಲಿಲ್ಲ ಹಂತಕ..!

Share this Video
  • FB
  • Linkdin
  • Whatsapp

ಅದೊಂದು ತುಂಬು ಕುಟುಂಬ. ಅಷ್ಟೇ ಅಲ್ಲ ಸುಶಿಕ್ಷಿತ ಕೂಡ. ಮನೆ ಒಡೆಯ ಸೌದಿಯಲ್ಲಿ(Saudi Arabia) ಕೆಲಸ ಮಾಡ್ತಿದ್ರೆ ಮಕ್ಕಳು ಬೆಂಗಳೂರು ಮಂಗಳೂರು ಅಂತ ಮನೆಯಿಂದ ದೂರ ಇದ್ರು. ಆದ್ರೆ ದೀಪಾವಳಿ(Deepavali) ರಜೆ ಇದ್ದಿದ್ರಿಂದ ಇಬ್ಬರು ಮಕ್ಕಳು ವಾಪಸ್ ಬಂದಿದ್ರು. ಮನೆಯಲ್ಲಿ ಕೇವಲ ಹೆಣ್ಣು ಮಕ್ಕಳು ಮಾತ್ರ ಇದ್ರು. ಜೊತೆಗೆ 12 ವರ್ಷದ ಮಗ. ಆದ್ರೆ ರಜೆಯ ಮೋಜಿನಲ್ಲಿರಬೇಕಾದವರಿಗೆ ಜವರಾಯನ ಭೇಟಿಯಾಗಿತ್ತು. ಮನೆಯಲ್ಲಿದ್ದ ನಾಲ್ವರನ್ನ ಹಂತಕನೊಬ್ಬ ಕೊಂದು(Murder) ಮುಗಿಸಿದ್ದಾನೆ. ಬದುಕುಳಿದಿದ್ದ ವೃದ್ಧೆಯನ್ನ ಆಸ್ಪತ್ರೆಗೆ ಸೇರಿಸಲಾಯ್ತು. ಆದ್ರೆ ಹಂತಕನ ಹುಚ್ಚಾಟಕ್ಕೆ ಬಲಿಯಾದವರನ್ನ ಪೋಸ್ಟ್ ಮಾರ್ಟಮ್ಗಾಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಯ್ತು. ಇನ್ನೂ ಇದೇ ಕೇಸ್ನ ತನಿಖೆಗಿಳಿದ ಪೊಲೀಸರಿಗೆ(Police) ಹೆಜ್ಜೆ ಹೆಜ್ಜೆಗೂ ಸವಾಲುಗಳೇ.ಆದ್ರೆ ಒಬ್ಬ ಆಟೋ ಡ್ರೈವರ್ ಪೊಲೀಸರಿಗೆ ಮೇಜರ್ ಮಾಹಿತಿಯೊಂದನ್ನ ಕೊಟ್ಟಿದ್ದಾನೆ. ಅವನು ಕೇವಲ ಹತ್ತೇ ನಿಮಿಷದಲ್ಲಿ 4 ಹೆಣ ಹಾಕಿ ಎಸ್ಕೇಪ್ ಆಗಿದ್ದ. ಇನ್ನೂ ತನಿಖೆ ಆರಂಭಿಸಿದ ಪೊಲೀಸರಿಗೆ ಹಂತಕನ ಬಗ್ಗೆ ಒಂದೇ ಒಂದು ಸುಳಿವು ಕೂಡ ಸಿಕ್ಕಿರಲಿಲ್ಲ. ಆದ್ರೆ ಇದೇ ಟೈಂನಲ್ಲಿ ಒಬ್ಬ ಆಟೋ ಡ್ರೈವರ್ ಪೊಲೀಸರಿಗೆ ಒಂದು ಮಹತ್ವದ ಸುಳಿವು ಕೊಟ್ಟಿದ್ದ. ಅವತ್ತು ಹಂತಕ, ಇದೇ ಆಟೋ ಡ್ರೈವರ್ ಬಳಿ ಆ ಮನೆಯವರೆಗೆ ಡ್ರಾಪ್ ತೆಗೆದುಕೊಂಡಿದ್ದ. ಆದ್ರೆ ಅವನನ್ನ ಆ ಮನೆಯ ಬಳಿ ಬಿಟ್ಟು ಆಟೋ ಸ್ಟ್ಯಾಂಡ್‌ಗೆ ಬಂದ ಆಟೋ ಡ್ರೈವರ್‌ಗೆ 10 ನಿಮಿಷದಲ್ಲೇ ಮತ್ತೆ ಅವನದ್ದೇ ದರ್ಶನವಾಗಿತ್ತು. ಆಗ ಅವನನ್ನ ಆಟೋ ಡ್ರೈವರ್ ಮಾತನ್ನಾಡಿಸಿದ್ದ ಕೂಡ, ಆದ್ರೆ ಅದಾಗಿ ಗಂಟೆಗಳಲ್ಲೇ ತಾನು ಡ್ರಾಪ್ ಮಾಡಿದ್ದು ಒಬ್ಬ ಹಾರ್ಡ್ ಕೋರ್ ಮರ್ಡರರ್ ಅನ್ನೋದು ಗೊತ್ತಾಗಿತ್ತು. 

ಇದನ್ನೂ ವೀಕ್ಷಿಸಿ:  ಸುಕ್ಕಾ ಸೂರಿ ಅಡ್ಡಾದಲ್ಲಿ ಜ್ಯೂ.ರೆಬೆಲ್ ಸ್ಟಾರ್ ಅಬ್ಬರ: ಬ್ಯಾಡ್ ಮ್ಯಾನರ್ಸ್ ಗುಡ್ ಮ್ಯಾಟರ್!

Related Video