ಸುಕ್ಕಾ ಸೂರಿ ಅಡ್ಡಾದಲ್ಲಿ ಜ್ಯೂ.ರೆಬೆಲ್ ಸ್ಟಾರ್ ಅಬ್ಬರ: ಬ್ಯಾಡ್ ಮ್ಯಾನರ್ಸ್ ಗುಡ್ ಮ್ಯಾಟರ್!

ಬ್ಯಾಡ್‌ ಮ್ಯಾನರ್ಸ್ ಸಿನಿಮಾ ಕುರಿತು ನಟ ಅಭಿಷೇಕ್‌ ಅಂಬರೀಶ್‌ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮಾತನಾಡಿದ್ದಾರೆ.
 

First Published Nov 14, 2023, 1:10 PM IST | Last Updated Nov 14, 2023, 1:10 PM IST

ಬ್ಯಾಡ್‌ ಮ್ಯಾನರ್ಸ್‌ ಸಿನಿಮಾದ ಬಗ್ಗೆ ನಟ ಅಭಿಷೇಕ್‌ ಅಂಬರೀಶ್‌ (abhishek ambareesh) ಏಷ್ಯಾನೆಟ್ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ. ಅಭಿಷೇಕ್‌ ಅಂಬರೀಶ್‌ಗೆ ಮದುವೆಯಾದ ಬಳಿಕ ಇದು ಮೊದಲ ದೀಪಾವಳಿಯಾಗಿದೆ. ನವೆಂಬರ್‌ 24 ರಂದು ಬ್ಯಾಡ್‌ ಮ್ಯಾನರ್ಸ್ ಸಿನಿಮಾ ರಿಲೀಸ್‌ (release) ಆಗಲಿದೆ. ಈ ಸಿನಿಮಾದಲ್ಲಿ ಪಕ್ಕಾ ಮಾಸ್ ಆಗಿ ಅಭಿಷೇಕ್‌ ಕಾಣಿಸಿಕೊಂಡಿದ್ದಾರೆ. ಪ್ರೇಕ್ಷಕರಿಗೆ ಈ ಸಿನಿಮಾದಲ್ಲಿ ಹೊಸತನ ಸಿಗಲಿದೆ. ಸೂರಿ ಅವರ ನಿರ್ದೇಶನ ಹಿನ್ನೆಲೆ ಸಿನಿಮಾ ಮಾಡಲು ಒಪ್ಪಿಕೊಂಡೆ ಎಂದು ಅಭಿಷೇಕ್‌ ಅಂಬರೀಶ್‌ ಹೇಳಿದ್ದಾರೆ. 'ಬ್ಯಾಡ್​​ ಮ್ಯಾನರ್ಸ್​'(Bad Manners) ಸುಕ್ಕಾ ಸೂರಿ ನಿರ್ದೇಶನ ಮತ್ತು ಜೂನಿಯರ್​ ಯಂಗ್​ ರೆಬಲ್​ ಅಭಿಷೇಕ್​ ಅಂಬರೀಶ್​ ಕಾಂಬೋದಲ್ಲಿ ಮೂಡಿಬರುತ್ತಿರುವ ಈ ಸಿನಿಮಾವಾಗಿದೆ. 'ಬ್ಯಾಡ್​​ ಮ್ಯಾನರ್ಸ್​' ಚಿತ್ರದ ಟ್ರೇಲರ್​ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಮಾಗಡಿ ರಸ್ತೆಯಲ್ಲಿರುವ ಜಿ.ಟಿ ಮಾಲ್​ನಲ್ಲಿ ನಡೆಯಿತು.

ಇದನ್ನೂ ವೀಕ್ಷಿಸಿ:  ಬಂಜಾರ ಸಮುದಾಯ ವಿಶೇಷ ದೀಪಾವಳಿ ಆಚರಣೆ: ಮನೆ ಮನೆಗೂ ತೆರಳಿ ದೀಪ ಬೆಳಗಿದ ಯುವತಿಯರು