Asianet Suvarna News Asianet Suvarna News
breaking news image

ಮಾಡೆಲಿಂಗ್ ಹುಡುಗಿ ಪಟಾಯಿಸಿ ಪ್ರೀತಿ ನಾಟಕ, ಜಿಮ್ ಟ್ರೈನರ್ ಚೆಲ್ಲಾಟಕ್ಕೆ ಸುಂದರಿ ಬದುಕೇ ಅಂತ್ಯ!

ಅವರಿಬ್ಬರು ಒಂದುವರೆ ವರ್ಷದ ಹಿಂದಷ್ಟೇ ಫೇಸ್ಬುಕ್ ಮುಖಾಂತರ ಪರಿಚಯವಾಗಿದ್ರು.. ಅಕ್ಷಯ್ ಆಕೆಯನ್ನ ನಿಜವಾಗ್ಲು ಪ್ರೀತಿಸಿದ್ನೋ ಇಲ್ವೋ ಗೊತ್ತಿಲ್ಲ ಆದ್ರೆ ವಿದ್ಯಾ ಮಾತ್ರ ಆತನನ್ನ ಇನ್ನಿಲ್ಲದಂತೆ ಪ್ರೀತಿಸಿಬಿಟ್ಟಿದ್ಲು. ಆತನಿಗೆ ಬೆನ್ನೆಲುಬಾಗಿ ನಿಂತಿದ್ದಳು. ಆದರೆ ಆತ ಮಾಡಿದ್ದು ಮಾತ್ರ ಘನಘೋರ ಅನ್ಯಾಯ.

ಅವಳು ಅಪರೂಪದ ಸುಂದರಿ. ಮಾಡೆಲಿಂಗ್ ಅವಳ ಪಾರ್ಟ್ ಟೈಂ ಜಾಬ್. ಮಿಸ್ ಆಂಧ್ರ ಕಾಂಪಿಟಿಷನ್ನಲ್ಲಿ ವಿಜೇತಳಾದವಳು. ಹೀಗೆ ತನ್ನ ಲೈಫ್‌ನಲ್ಲಿ  ಸಕ್ಸಸ್ ಕಂಡಿದ್ದ ಆ ಮುದ್ದು ಹುಡುಗಿ ಇದ್ದಕ್ಕಿದ್ದ ಹಾಗೆ ಬದುಕು ಅಂತ್ಯಮಾಡಿಕೊಂಡಿದ್ದಳು. ಆಕೆಯ ಸಾವಿಗೆ ಕಾರಣ ಲವ್. ಇನಿಯನನ್ನು ಅತೀಯಾಗಿ ನಂಬಿದ್ದ ಆಕೆ ಆತನಿಗಾಗಿ ಏನ್ ಬೇಕಾದ್ರೂ ಮಾಡೋದಕ್ಕೆ ರೆಡಿಯಾಗಿದ್ಲು.. ಆದ್ರೆ ಆತ ಮಾತ್ರ ಇವಳಿಗೆ ಕೈಕೊಟ್ಟುಬಿಟ್ಟ. ಹೀಗೆ ಲೈಫ್‌ನಲ್ಲಿ ಯಶಸ್ವಿ ಆಗಿದ್ದವಳು ಪ್ರೀತಿಯಲ್ಲಿ ಫೇಲ್ ಆಗಿದ್ದಕ್ಕೆ ತನ್ನ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಳು. ಈ ಹುಡುಗಿಯ ದುರಂತ ಕಥೇಯೇ ಇಂದಿನ ಎಫ್ಆಐರ್. 
 

Video Top Stories