ಕಲಬುರಗಿಯಲ್ಲಿ ಭ್ರಷ್ಟ ಅಧಿಕಾರಿಗಳದ್ದೇ ದರ್ಬಾರ್: ಪಿಎಂ ಆವಾಸ್ ಯೋಜನೆಯಲ್ಲಿ ಭಾರೀ ಅವ್ಯವಹಾರ !

ನಕಲಿ ಫಲಾನುಭವಿಗಳನ್ನ ಸೃಷ್ಟಿಸಿ ಭಾರೀ ಗೋಲ್ಮಾಲ್
ಮನೆಗಳನ್ನ ನಿರ್ಮಿಸಿದೇ ಕೋಟಿ ಕೋಟಿ ಹಣ ಲೂಟಿ
256 ನಕಲಿ ಫಲಾನುಭವಿಗಳನ್ನ ಸೃಷ್ಟಿಸಿ ಭ್ರಷ್ಟಾಚಾರ
 

First Published Jul 19, 2024, 4:32 PM IST | Last Updated Jul 19, 2024, 4:32 PM IST


ಪಿಎಂ ಆವಾಸ್‌ ಯೋಜನೆಯಲ್ಲಿ(PM Awas project) ಭಾರೀ ಅವ್ಯವಹಾರ ನಡೆದಿರುವ ಘಟನೆ ಕಲಬುರಗಿಯಲ್ಲಿ(Kalaburagi) ನಡೆದಿದೆ. ಜಿಲ್ಲೆಯಲ್ಲಿ ಭ್ರಷ್ಟ ಅಧಿಕಾರಿಗಳದ್ದೇ (Corrupt officials) ದರ್ಬಾರ್‌ ಜೋರಾಗಿದ್ದು, ಅಫಜಲಪುರದಲ್ಲಿ ಪಿಎಂ  ಆವಾಸ್ ಯೋಜನೆ ಹಳ್ಳ ಹಿಡಿದಿದೆ. ನಕಲಿ ಫಲಾನುಭವಿಗಳನ್ನ ಸೃಷ್ಟಿಸಿ ಭಾರೀ ಗೋಲ್‌ಮಾಲ್‌ ಮಾಡಲಾಗಿದೆ. ಮನೆಗಳನ್ನ(Houses) ನಿರ್ಮಿಸಿದೇ ಕೋಟಿ ಕೋಟಿ ಹಣ ಲೂಟಿ ಮಾಡಲಾಗಿದೆ. 256 ನಕಲಿ ಫಲಾನುಭವಿಗಳನ್ನ ಸೃಷ್ಟಿಸಿ ಭ್ರಷ್ಟಾಚಾರ ನಡೆಸಲಾಗಿದೆ. 2019- 20ನೇ ಸಾಲಿನಲ್ಲಿ ನಕಲಿ ಫಲಾನುಭವಿಗಳ ಸೃಷ್ಟಿಸಿದ್ದು, ಒಂದೊಂದು ಮನೆಗೆ 1.5 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಒಟ್ಟು 256 ಫಲಾನುಭವಿಗಳ ಹೆಸರಲ್ಲಿ 2 ಕೋಟಿ 65 ಲಕ್ಷ ಗುಳುಂ ಮಾಡಲಾಗಿದೆ. ಒಂದೇ ಒಂದೂ ಮನೆ ನಿರ್ಮಾಣ ಆಗದೆ ಹಣ ಗುಳುಂ ಮಾಡಲಾಗಿದ್ದು, ಪುರಸಭೆ ಅಧಿಕಾರಿಗಳು, ಮಧ್ಯವರ್ತಿಗಳಿಂದ ಹಣ ಲೂಟಿ ಮಾಡಲಾಗಿದೆ. ಕಲಬುರಗಿಯಲ್ಲಿ ಪಿಎಂ ಆವಾಸ್ ಯೋಜನೆಯೇ ಬುಡಮೇಲಾಗಿದೆ. ಲೋಕಾಯುಕ್ತ ತನಿಖೆಯಿಂದ ಅಕ್ರಮ ಬಯಲಾಗಿದ್ದು, ಮೂವರು ಮಧ್ಯವರ್ತಿಗಳ ವಿರುದ್ದ FIR ದಾಖಲಾಗಿದೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಶೋಕ್ ಭೂತಿ, ನಾಗು ಗುಣಾರಿ , ಮಹಾದೇವಪ್ಪ ವಿರುದ್ಧ FIR ದಾಖಲಿಸಲಾಗಿದೆ. ನಕಲಿ ಫಲಾನುಭವಿಗಳನ್ನ ಸೃಷ್ಟಿಸಿ ಹಣ ಲಪಟಾಯಿಸಿದ ಮೂವರು, ಹಣ ವಾಪಸ್ ಪಡೆಯಲು ಪುರಸಭೆ ಅಧಿಕಾರಿಗಳಿಂದ ಹರಸಾಹಸ ಪಡಲಾಗುತ್ತಿದೆ. 

ಇದನ್ನೂ ವೀಕ್ಷಿಸಿ:  ಹುಬ್ಬಳ್ಳಿ ಧಾರವಾಡ ನಗರದಲ್ಲಿ ಹೆಚ್ಚಾದ ಸೈಬರ್ ಅಪರಾಧ: ದಿನಕ್ಕೊಂದು ವರಸೆ, ಮೋಸ..ಕ್ರಿಮಿನಲ್‌ಗಳ ನಾನಾ ವೇಷ!

Video Top Stories