ಅಕ್ಕ ಅಕ್ಕ ಅಂದುಕೊಂಡೇ ಅವಳ ಹೆಣ ಹಾಕಿಬಿಟ್ಟಿದ್ದ..! ಅವಳ ಹೆಣ ಸಿಗ್ತಿದ್ದಂತೆ ಅವನೂ ಎಸ್ಕೇಪ್ ..!

ಮೇಲುಕೋಟೆ ಚೆಲುವೆಯ ಮರ್ಡರ್ ಕೇಸ್‌ಗೆ ಟ್ವಿಸ್ಟ್..!
ಬರ್ತಡೇಯಂದು ಬೆಟ್ಟಕ್ಕೆ ಕರೆಸಿಕೊಂಡು ಹೇಳಿದ್ದೇನು..?
ಅವಳ ಕಥೆ ಮುಗಿಸಿ ಅವಳ ತಂದೆಗೆ ಕಾಲ್ ಮಾಡಿದ್ದ..!

Share this Video
  • FB
  • Linkdin
  • Whatsapp

ಮಂಗಳವಾರ ನಾವು ಮೇಲುಕೋಟೆಯ ಚೆಲುವೆಯೊಬ್ಬಳ ಸಾವಿನ ಕಥೆಯನ್ನ ಹೇಳಿದ್ವಿ. ಶಾಲೆಗೆ ಅಂತ ಹೋಗಿದ್ದವಳು ಹೆಣವಾಗಿ ಸಿಕ್ಕಿದ್ದಳು.ಆದ್ರೆ ತನಿಖೆ ನಡೆಸಿದ ಪೊಲೀಸರು(Police) ಚೆಲುವೆಯ ಹಂತಕನ ಹೆಡೆಮುರಿ ಕಟ್ಟಿದ್ದಾರೆ. ದೀಪಿಕಾ ಮೃತದೇಹ(Deadbody) ಸಿಕ್ಕಾಗಿನಿಂದ ಅಪ್ಸ್ಕಾಂಡಿಂಗ್ನಲ್ಲಿದ್ದ ನಿತೀಶ್‌ನನ್ನ ಪೊಲೀಸರು ಕೊನೆಗೂ ಎತ್ತಾಕೊಂಡು ಬಂದಿದ್ದಾರೆ. ಅವನು ಆಕೆಯನ್ನ ಅಕ್ಕ ಅಕ್ಕ ಅಂತಲೇ ಕರೆಯುತ್ತಿದ್ದ. ಆಕೆ ಕೂಡ ತಮ್ಮನಂತೆಯೇ ನೋಡಿದ್ಲು. ಆದ್ರೆ ಅಕ್ಕ ಅಂತ ಮೇಲ್ನೋಟಕ್ಕೆ ಕರೆದರೂ ಒಳಗಡೆ ಅವನ ಕಾಮದ ಕಣ್ಣು ಸದಾ ತೆರದೇ ಇತ್ತು. ಆದ್ರೆ ಇದನ್ನ ಗಮನಿಸಿದ್ದ ದೀಪಿಕಾ(Deepika) ಮನೆಯವರು ಆತನಿಗೆ ವಾರ್ನ್ ಮಾಡಿದ್ರು. ಅಕ್ಕ ತಮ್ಮನ ನಡುವಿನ ಬಾಂಧವ್ಯ ಮುರಿದುಬಿತ್ತು. ಆದ್ರೆ ಆತನಿಗೆ ಮಾತ್ರ ಅವಳು ಬೇಕೇಬೇಕಿತ್ತು. ಹೀಗಾಗಿ ಆವತ್ತು ಅವನ ಬರ್ತಡೇ ದಿನವೇ ಆಕೆಯನ್ನ ಬೆಟ್ಟಕ್ಕೆ ಕರೆಸಿಕೊಂಡಿದ್ದ. ಆಕೆಯ ಬಳಿ ತನ್ನ ಪ್ರೇಮನಿವೇದನೆಯನ್ನ ಹೇಳಿಕೊಂಡಿದ್ದ. ಸದ್ಯ ಅಕ್ಕ ಅಕ್ಕ(Sister) ಅಂತ ಬಾಯಿ ತುಂಬ ಕರೆದು ಅವಳನ್ನೇ ಕೊಂದು ಈಗ ಜೈಲು ಪಾಲಾಗಿದ್ದಾನೆ ಈ ಪಾಪಿ. ಆದ್ರೆ ಅಮ್ಮನನ್ನ ಕಳೆದುಕೊಂಡ ಆಕೆಯ ಮಗು ಮತ್ತು ಹೆಂಡತಿಯನ್ನ ಕಳೆದುಕೊಂಡ ಗಂಡ ದಿಕ್ಕೇ ತೋಚದಂತಾಗಿದ್ದಾರೆ. 

ಇದನ್ನೂ ವೀಕ್ಷಿಸಿ: Bitcoin case: ಬಿಟ್ ಕಾಯಿನ್ ಹಗರಣದಲ್ಲಿ ಭಾರೀ ಬೆಳವಣಿಗೆ: ಎಸ್ಐಟಿ ತಂಡದಿಂದ ಇಬ್ಬರು ಇನ್‌ಸ್ಪೆಕ್ಟರ್‌ಗಳು ವಶಕ್ಕೆ !

Related Video