Bitcoin case: ಬಿಟ್ ಕಾಯಿನ್ ಹಗರಣದಲ್ಲಿ ಭಾರೀ ಬೆಳವಣಿಗೆ: ಎಸ್ಐಟಿ ತಂಡದಿಂದ ಇಬ್ಬರು ಇನ್‌ಸ್ಪೆಕ್ಟರ್‌ಗಳು ವಶಕ್ಕೆ !
ತನಿಖೆಗಿಳಿದಿದ್ದ ಎಸ್ಐಟಿ ತಂಡದ ಮೆಗಾ ಆಪರೇಷನ್..!
ಬಿಟ್ ಕಾಯಿನ್ ಹಗರಣದಲ್ಲಿ ಪೊಲೀಸರು ಭಾಗಿ ಆರೋಪ
ಸುವರ್ಣ ನ್ಯೂಸ್‌ನಲ್ಲಿ ಬಿಟ್ ಕಾಯಿನ್ ಹಗರಣದ ಸೀಕ್ರೆಟ್
ರಾಜ್ಯ ಮಾತ್ರವಲ್ಲ ದೇಶದಲ್ಲೂ ಭಾರೀ ಸಂಚಲನ ಸೃಷ್ಟಿಸಿದ್ದ ಬಿಟ್ಕಾಯಿನ್ ಕೇಸ್‌ಗೆ (Bitcoin case) ಮಹಾ ಟ್ವಿಸ್ಟ್ ಸಿಕ್ಕಿದೆ. ಬಿಟ್ಕಾಯಿನ್ ಕೇಸ್‌ನಲ್ಲಿ ಐವರು ಇನ್‌ಸ್ಪೆಕ್ಟರ್‌ಗಳಿಗೆ ಶಾಕ್ ಎದುರಾಗಿದೆ. ಅಲ್ದೇ, ಇಬ್ಬರು ಪೊಲೀಸರನ್ನ(Police) ವಶಕ್ಕೆ ಪಡೆಯಲಾಗಿದ್ದು, ಮೂವರು ಇನ್‌ಸ್ಪೆಕ್ಟರ್‌ಗಳನ್ನ(Inspectors) ವಿಚಾರಣೆಗೆ ಹಾಜರ್ ಆಗುವಂತೆ SIT ಸೂಚನೆ ನೀಡಿದೆ. ಒಟ್ಟಾರೆ ಐವರು ಇನ್‌ಸ್ಪೆಕ್ಟರ್‌ಗಳ ಮೇಲೆ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಸಿಸಿಬಿ ಸೈಬರ್ ಇನ್‌ಸ್ಪೆಕ್ಟರ್ ಪ್ರಶಾಂತ್ ಬಾಬು ಅವರನ್ನು ಎಸ್ಐಟಿ ವಶಕ್ಕೆ ಪಡೆದಿದೆ. ಶ್ರೀಧರ್ ಪೂಜಾರಿ, ಚಂಧ್ರಾಧರ್ ಸೇರಿ ಮೂವರು ಇನ್‌ಸ್ಪೆಕ್ಟರ್‌ಗಳಿಗೆ ನೋಟಿಸ್(Notice) ನೀಡಲಾಗಿದೆ. ಖಾಸಗಿ ಟೆಕ್ನಿಕ್ ಲ್ಯಾಬ್‌ನ ಎಕ್ಸ್‌ಪರ್ಟ್ ಸಂತೋಷ್‌ನನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ವೀಕ್ಷಿಸಿ: News Hour: ಲೋಕಸಭೆ ಚುನಾವಣೆಗೂ ಮುನ್ನವೇ ಮುರಿದು ಬೀಳಲಿದೆಯೇ ಇಂಡಿಯಾ ಮೈತ್ರಿ?