
Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
ಬೆಂಗಳೂರಿನಲ್ಲಿ ಎಂಬಿಎ ಓದುತ್ತಿದ್ದ ಆಂಧ್ರ ಮೂಲದ ದೇವಿಶ್ರೀ ಎಂಬ ವಿದ್ಯಾರ್ಥಿನಿಯನ್ನು, ಬೇರೊಬ್ಬನಿಂದ ಬಂದ ಮೆಸೇಜ್ ನೋಡಿ ಕೋಪಗೊಂಡ ಆಕೆಯ ಪ್ರಿಯಕರ ಪ್ರೇಮವರ್ಧನ್ ದಿಂಬಿನಿಂದ ಉಸಿರುಗಟ್ಟಿಸಿ ಕೊ*ಲೆ ಮಾಡಿದ್ದಾನೆ.
ಅವಳು ಸುಂದರ ಚೆಲುವೆ... ಆಂಧ್ರದವಳಾದ್ರೂ ಓದೋಕೆ ಅಂತ ಬೆಂಗಳೂರಿಗೆ ಬಂದಿದ್ಲು.. ಬಿಕಾಂ ಮುಗಿಸಿ ಎಂ.ಬಿ.ಎ ಓದುತ್ತಿದ್ದಳು.. ಹೆತ್ತವರೂ ಕೂಡ ಮಗಳು ಚೆನ್ನಾಗಿ ಓದಲಿ ಅಂತ ಬೆಂಗಳೂರಿನ ಪ್ರತಿಷ್ಟಿತ ಕಾಲೇಜಿನಲ್ಲಿ ಅಡ್ಮಿಷನ್ ಮಾಡಿಸಿದ್ರು.. ಈಕೆ ಕೂಡ ಚೆನ್ನಾಗೇ ಓದುತ್ತಿದ್ದಳು.. ಆದ್ರೆ ಆವತ್ತು ಸ್ನೇಹಿತೆಯ ಮನೆಗೆ ಹೋದ ಆ ಹೆಣ್ಣುಮಗಳು ಹೆಣವಾಗಿದ್ಲು.. ಹೊರಗೆ ಹೋಗಿದ್ದ ಗೆಳತಿ ವಾಪಸ್ ಬಂದು ನೋಡಿದ್ರೆ ಅವಳು ಸತ್ತು ಮಲಗಿರುತ್ತಾಳೆ..