ಬರ್ತಡೇ ಪಾರ್ಟಿಗೆ ಬಂದವನ ಮರ್ಡರ್: ಅವನ ಕೊಲೆಗೆ ಕಾರಣವಾಗಿದ್ದು ಯುಗಾದಿ ಹಬ್ಬ..!

ಮಂಜಾ, ಸ್ಪಾಟ್ ನಾಗ ಸೇರಿದಂತೆ ಎಲ್ಲರ ದುಡ್ಡನ್ನ ರವಿ ಗೆದ್ದುಬಿಟ್ಟಿದ್ದ. ಇದನ್ನು ಇವರು ಸಾಲವಾಗಿ ಪಡೆದು, ಕೊಡದೇ ಸತಾಯಿಸುತ್ತಿದ್ದರು. ಬರ್ತಡೇ ಪಾರ್ಟಿಯಲ್ಲಿ ಸಿಕ್ಕಾಗಲು ರವಿ ದುಡ್ಡು ಕೊಡುವಂತೆ ಕೇಳಿದ್ದಾನೆ. ಇದ್ರಿಂದ ಸಿಟ್ಟಾದ ಮಂಜಾ ಮತ್ತು ಸ್ಪಾಟ್ ನಾಗ ರವಿಯನ್ನ ಮುಗಿಸಿದ್ದಾರೆ.

Share this Video
  • FB
  • Linkdin
  • Whatsapp

ಅವತ್ತು ಕಾಂಗ್ರೆಸ್ ಕಾರ್ಯಕರ್ತನೊಬ್ಬನ ಬರ್ತಡೇ ಇತ್ತು. ಆ ಏರಿಯಾದಲ್ಲಿ ಆತ ಒಳ್ಳೆ ಹವಾ ಮೆಂಟೇನ್ ಮಾಡಿದ್ದ. ಸೋ ಬರ್ತಡೇ ಪಾರ್ಟಿಗೆ ತನ್ನ ಹುಡುಗರನ್ನ ಮತ್ತು ಕಾಂಗ್ರೆಸ್ ಕಾರ್ಯಕರ್ತರನ್ನೆಲ್ಲಾ ಆಹ್ವಾನ ಮಾಡಿದ್ದ. ಅದ್ದೂರಿಯಾಗಿ ನಡೆದ ಬರ್ತಡೇ ಕಾರ್ಯಕ್ರಮದಲ್ಲಿ ಗುಂಡು ತುಂಡು ಎಲ್ಲಾ ಇತ್ತು. ಬಂದವರು ಎಣ್ಣೆ ಪಾರ್ಟಿ ಮಾಡಿ ಬಿರಿಯಾನಿ ತಿಂದು ಮನೆಗೆ ವಾಪಸ್ ಆಗ್ತಿದ್ರು. ಆದ್ರೆ ಇನ್ನೇನು ಪಾರ್ಟಿ ಮುಗಿಬೇಕು ಅಷ್ಟರಲ್ಲೇ ಒಂದು ಹೆಣ ಬಿದ್ದಿತ್ತು. ಪಾರ್ಟಿಗೆ ಬಂದವರೇ ಕಿತ್ತಾಡಿಕೊಂಡು ಕೊನೆಗೆ ಮರ್ಡರ್ ಕೂಡ ಮಾಡಿಬಿಟ್ಟಿದ್ರು. ಇನ್ನೂ ಸ್ಪಾಟ್‌ಗೆ ಬಂದ ಪೊಲೀಸರು ತನಿಖೆ ಆರಂಭಿಸಿದ್ದು, ಆ ಮರ್ಡರ್ ಯಾಕಾಯ್ತು.. ಹೇಗಾಯ್ತು ಅನ್ನೋದನ್ನ ಪತ್ತೆಹಚ್ಚೋಕೆ ಮುಂದಾದ್ರು. ತನಿಖೆಯಲ್ಲಿ ತಿಳಿದು ಬಂದಿದ್ದು ಏನಂದ್ರೆ, 20 ವರ್ಷದ ಗೆಳೆಯರೇ ಅವತ್ತು ಮತ್ತಿ ರವಿಯನ್ನು ಸಾಯಿಸಿದ್ದಾರೆ.

ಇದನ್ನೂ ವೀಕ್ಷಿಸಿ: Today's Horoscope: ಇಂದಿನ ರಾಶಿ ಭವಿಷ್ಯ: ಇಂದು ದಶಪಾಪಹರ ದಶಮಿ ಇದ್ದು, ಕೃಷ್ಣನ ಪ್ರಾರ್ಥನೆ ಮಾಡಿ

Related Video