ಚಾಕೊಲೇಟ್ ಪ್ರಿಯರೇ ಎಚ್ಚರ..ಎಚ್ಚರ..!: ಕರಾವಳಿ ಚಾಕೋಲೇಟ್ ಪ್ರಿಯರಿಗೆ ಶಾಕಿಂಗ್ ನ್ಯೂಸ್..!
ಅಳುವ ಮಕ್ಕಳನ್ನ ಚಾಕೋಲೇಟ್ ಕೊಟ್ಟು ಸಮಾಧಾನ ಮಾಡೋದು ವಾಡಿಕೆ. ಆದ್ರೆ ಮಕ್ಕಳ ಮುಖದಲ್ಲಿ ನಗು ತರಿಸೋ ಚಾಕೋಲೇಟ್ ಈಗ ಜೀವಕ್ಕೆ ಕುತ್ತು ತರ್ತಿದೆ .
ಚಾಕೋಲೇಟ್ ಅಂದ್ರೆ ಯಾರಿಗೆ ಇಷ್ಟ ಆಗಲ್ಲ ಹೇಳಿ. ಪುಟ್ಟ ಮಕ್ಕಳಿಂದ ವಯಸ್ಕರವರೆಗೂ ಎಲ್ಲರಿಗೂ ಚಾಕೋಲೇಟ್ ಇಷ್ಟ. ಅದರಲ್ಲೂ ಮಕ್ಕಳಂತೂ ಚಾಕೋಲೇಟ್ ಕೊಡ್ತೀವಿ ಅಂದ್ರೆ ಹೇಳಿದ ಮತನ್ನೆಲ್ಲಾ ಕೇಳ್ತಾರೆ. ಆದ್ರೆ ಈ ಚಾಕೋಲೇಟ್(chocolate) ಗೀಳೆ ಮಕ್ಕಳ ಪಾಲಿಗೆ ಶಾಪವಾದಂತಾಗಿದೆ. ಕರಾವಳಿ ಭಾಗದ ಮಕ್ಕಳಿಗೆ ಚಾಕೋಲೇಟೆ ಜೀವ ಹಿಂಡೋ ವಿಷವಾಗ್ತಿದೆ. ಜುಲೈ 19ರಂದು ಮಂಗಳೂರಿನ ರಥಬೀದಿ ಮತ್ತು ಹೈಲ್ಯಾಂಡ್ ಬಳಿ ಪೊಲೀಸರು ದಾಳಿ ನಡೆಸಿದ್ದರು. ವೈಭವ ಪೂಜಾ ಸೇಲ್ಸ್‌ನಲ್ಲಿ ಬಾಂಗ್ ಚಾಕೋಲೇಟ್ ಪತ್ತೆಯಾಗಿತ್ತು. ಚಾಕೋಲೇಟ್ಗಳನ್ನ ಸೀಜ್ ಮಾಡಿದ್ದ ಪೊಲೀಸರು, ಮಂಗಳೂರಿನ(mangalore) ಮನೋಹರ್ ಶೇಟ್ ಮತ್ತು ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ನರ್ ಎಂಬುವವರನ್ನು ವಶಕ್ಕೆ ಪಡೆದಿದ್ದರು. ಬಾಂಗ್ನಲ್ಲಿ ಯಾವುದೇ ಗಾಂಜಾ ಅಂಶವಿಲ್ಲ, ಹಲವು ರಾಜ್ಯಗಳಲ್ಲಿ ಬಾಂಗ್ ಮಾರಾಟ ಕಾನೂನು ಬದ್ಧ ಎಂದು ವಾದಿಸಿದ್ರು, ಯಾವುದೇ ಸಾಕ್ಷಿ ಇಲ್ಲದೆ ಇಬ್ಬರು ಆರೋಪಿಗಳನ್ನು ಬಿಡುಗಡೆ ಮಾಡಲಾಗಿತ್ತು. ಆದ್ರೀಗ ಅದೇ ಬಾಂಗ್ ಚಾಕೋಲೇಟ್ನಲ್ಲಿ(bang chocolate) ಗಾಂಜಾ (Marijuana) ಅಂಶ ಪತ್ತೆಯಾಗಿದೆ. ಬಾಂಗ್ ಚಾಕೋಲೇಟ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. FSL ವರದಿ ಪ್ರಕಾರ ಬಾಂಗ್ ಚಾಕೋಲೇಟ್ನಲ್ಲಿ ಗಾಂಜಾ ಅಂಶ ಪತ್ತೆಯಾಗಿದೆ. ಈ ಹಿನ್ನೆಲೆ NDPS ಕಾಯ್ದೆಯಡಿ ಮನೋಹರ್ ಶೇಟ್ ಮತ್ತು ಬೆಚನ್ ಸೋನ್ನರ್ ಇಬ್ಬರನ್ನೂ ಬಂಧಿಸಲಾಗಿದೆ. ಮನೋಹರ್ ಶೇಟ್ ಬಳಿ 48 ಸಾವಿರ ಮೌಲ್ಯದ, ತಲಾ 40 ಬಾಂಗ್ ಚಾಕೋಲೇಟ್ ತುಂಬಿರುವ 300 ಪಾಕೆಟ್, 592 ಬಿಡಿ ಚಾಕೋಲೇಟ್ ಸೇರಿ 12,592 ಚಾಕೋಲೇಟ್ ವಶಕ್ಕೆ ಪಡೆಯಲಾಗಿದೆ. ಬೆಚನ್ ಸೋನ್ನರ್ ಬಳಿ . 5500 ಮೌಲ್ಯದ ಬಾಂಗ್ ಚಾಕೋಲೇಟ್ ವಶಕ್ಕೆ ಪಡೆಯಲಾಗಿದೆ.
ಇದನ್ನೂ ವೀಕ್ಷಿಸಿ: ವಕೀಲರ ಸಮ್ಮೇಳನಕ್ಕೆ ಡಿಕೆಶಿಗೆ ಆಹ್ವಾನ ವಿವಾದ: ಡಿಸಿಎಂ ಹೆಸರು ಕೈಬಿಟ್ಟ ವಕೀಲರ ಸಂಘ