ಮನೆ ಬಾಡಿಗೆ ಕೊಡಿ ಅಂದಿದ್ದೇ ತಪ್ಪಾ..?: ಬಾಡಿಗೆ ಕೇಳಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ..!

ಮನೆ ಬಾಡಿಗೆ ಕೇಳಿದ್ದಕ್ಕೆ ವ್ಯಕ್ತಿಯಿಂದ ಮೃಗೀಯ ವರ್ತನೆ
ಕೇರ್ ಟೇಕರ್ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ
ಮಹಿಳೆಯ ರಕ್ಷಣೆಗೆ ನಿಲ್ಲಬೇಕಿದ್ದ ಆರಕ್ಷಕರಿಂದಲೇ ವಸೂಲಿ

First Published Aug 10, 2023, 9:47 AM IST | Last Updated Aug 10, 2023, 9:47 AM IST

ಸಿಲಿಕಾನ್ ಸಿಟಿ ಬೆಂಗಳೂರು ಇಲ್ಲಿ ಮೂಲ ವಾಸಿಗರಿಗಿಂತ ಬೇರೆ ಊರು, ಜಿಲ್ಲೆ, ರಾಜ್ಯದ ಜನರೇ ಹೆಚ್ಚು ವಾಸವಾಗಿದ್ದಾರೆ. ಇಲ್ಲಿ ಅನೇಕರು ಬಾಡಿಗೆ ಮನೆಗಳಲ್ಲೇ ನೆಲೆ ಕಂಡುಕೊಂಡಿರೋದು. ಮನೆ ಬಾಡಿಗೆ ಪಡೆದ್ಮೇಲೆ ಬಾಡಿಗೆ ಕಟ್ಟಲೇಬೇಕು. ಅಕಸ್ಮಾತ್ ಏನೋ ಕಷ್ಟ ಅಂದ್ರೆ ಹೋಗ್ಲಿ ಒಂದು ತಿಂಗಳು ಬಿಟ್ಟು ಕೊಡಿ ಅಂತ ಮಾಲೀಕ ಹೇಳ್ಬೋದು. ಆದ್ರೆ ಇಲ್ಲೊಬ್ಬ ಬಾಡಿಗೆ ಕೇಳಿದ್ದಕ್ಕೆ ಕೇರ್ ಟೇಕರ್ ಮಹಿಳೆ(Woman) ಮೇಲೆ ಚಾಕುವಿನಿಂದ(Knife) ಮುಖವನ್ನೇ ಕೊಯ್ದಿದ್ದಾನೆ. ಬೆಂಗಳೂರಿನಲ್ಲಿ(Bengaluru) ಬಾಡಿಗೆ ಕೇಳೋದೆ ತಪ್ಪಾ ಅನ್ಸತ್ತೆ. ಯಾಕಂದ್ರೆ ಮಹಿಳೆಯೊಬ್ಬರು ಬಾಡಿಗೆ ಕೇಳಿದ್ದಕ್ಕೆ ಆಕೆಯನ್ನ ಮುಖವನ್ನ ಹೇಗೆ ಕುಯ್ದಿದ್ದಾರೆ ನೋಡಿ. ಅಂದಹಾಗೆ ಈಕೆ ಹೆಸರು ಶ್ರೀದೇವಿ. ಫಯಾಜ್ ವಿದೇಶದಲ್ಲಿದ್ದ ಕಾರಣ ಹಲವು ವರ್ಷಗಳಿಂದ ಶ್ರೀದೇವಿಯೇ ಬಿಲ್ಡಿಂಗ್‌ನ 18 ಮನೆ ಬಾಡಿಗೆ ಪಡೆದು ಫಯಾಜ್ಗೆ ನೀಡುತ್ತಿದ್ದಳು. ಇನ್ನೂ ಇದೇ ಬಿಲ್ಡಿಂಗ್‌ನಲ್ಲಿ ನಜೀರ್ ಎಂಬಾತ ಸಹ ಬಾಡಿಗೆಗೆ ಇದ್ದು ಮೂರು ತಿಂಗಳಿಂದ ಬಾಡಿಗೆ ಕೊಡದೆ ಸತಾಯಿಸುತ್ತಿದ್ದ. ಹೀಗಾಗಿ ಶ್ರೀದೇವಿ ಸ್ವಲ್ಪ ಗಟ್ಟಿಯಾಗೇ ಬಾಡಿಗೆ ಕೊಡುವಂತೆ ಕೇಳಿದ್ಲು. ಇದಕ್ಕೆ ರೊಚ್ಚಿಗೆದ್ದ ನಜೀರ್ ತನ್ನ ಮಗನಾದ ಸದ್ದಾಂಗೆ ಹೇಳಿದ್ದಾನೆ. ಸ್ಥಳಕ್ಕೆ ಬಂದ ಸದ್ದಾಂ ಶ್ರೀದೇವಿ ಮೇಲೆ ಜಗಳ ಮಾಡಿ ನಂತರ ಚಾಕುವಿನಿಂದ ಆಕೆಯ ಮುಖವನ್ನೇ ಕುಯ್ದಿದ್ದಾನೆ.ಇನ್ನೂ ಹಲ್ಲೆಗೊಳಗಾದ ಮಹಿಳೆ ಕುಟುಂಬಸ್ಥರು ಬಂಡೆಪಾಳ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ರೆ ಅವರು ಮಾಡಿದ್ದು ವಸೂಲಿ ಕೆಲಸ. ದೂರು ಕೊಟ್ಟರೆ , ಕೋರ್ಟ್ ಗೆ ನಿಮ್ಮ ದೂರನ್ನ ಕಳುಹಿಸೋಕೆ ಹಾಗೂ ಜೆರಾಕ್ಸ್ ಪ್ರತಿಗಳಿಗೆ 6 ಸಾವಿರ ದುಡ್ಡು ಬೇಕು ಅಂತ ವಸೂಲಿ ಮಾಡೋಕೆ ಇಳಿದಿದ್ದಾರೆ.

ಇದನ್ನೂ ವೀಕ್ಷಿಸಿ:  ಗೂಡ್ಸ್‌ ವಾಹನ ಡಿಕ್ಕಿ: ಟ್ಯೂಷನ್‌ ಮುಗಿಸಿ ಮನೆಗೆ ವಾಪಸ್‌ ಆಗುತ್ತಿದ್ದ ಮಕ್ಕಳು, ಇಬ್ಬರ ಸಾವು