ಗೂಡ್ಸ್‌ ವಾಹನ ಡಿಕ್ಕಿ: ಟ್ಯೂಷನ್‌ ಮುಗಿಸಿ ಮನೆಗೆ ವಾಪಸ್‌ ಆಗುತ್ತಿದ್ದ ಮಕ್ಕಳು, ಇಬ್ಬರ ಸಾವು

ಟ್ಯೂಷನ್ ಮುಗಿಸಿ ಮನೆಗೆ ಹೋಗುತ್ತಿದ್ದ ಮಕ್ಕಳು
ಮಕ್ಕಳಿಗೆ ಗೂಡ್ಸ್ ವಾಹನ ಡಿಕ್ಕಿ, ಇಬ್ಬರು ಸಾವು
ರಾಮನಗರದ ಗೊಲ್ಲರದೊಡ್ಡಿ ಗ್ರಾಮದಲ್ಲಿ ಘಟನೆ

Share this Video
  • FB
  • Linkdin
  • Whatsapp

ರಾಮನಗರ: ಗೂಡ್ಸ್‌ ವಾಹನ ಡಿಕ್ಕಿಯಾಗಿ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ರಾಮನಗರ(Ramanagara) ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದಲ್ಲಿ ನಡೆದಿದೆ. ಟ್ಯೂಷನ್ ಮುಗಿಸಿ ಮನೆಗೆ ಹೋಗುತ್ತಿರುವಾಗ ಬಾಲಕಿಯರಿಗೆ ವಾಹನ ಡಿಕ್ಕಿ(Accident) ಹೊಡೆದಿದೆ. ಆರು ಮಕ್ಕಳಿಗೆ ಗೂಡ್ಸ್‌ ವಾಹನ(goods vehicle) ಡಿಕ್ಕಿ ಹೊಡೆದಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ. ನಾಲ್ವರು ಮಕ್ಕಳಿಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್‌ ಮಾಡಲಾಗಿದೆ. ಸುಚಿತ್‌, ಗೌತಮಿ, ಲೇಖನ, ಜ್ಞಾನೇಶ್ವರಿಗೆ ಗಂಭೀರ ಗಾಯವಾಗಿದೆ. ಓರ್ವ ಗಾಯಾಳು ಬಾಲಕಿಯನ್ನು ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಬಾಲಕಿ ಮೂರನೇ ತರಗತಿ ಓದುತ್ತಿದ್ದು, ಚಿಕಿತ್ಸೆಗಾಗಿ ನಿಮ್ಹಾನ್ಸ್‌ಗೆ ದಾಖಲಿಸಲಾಗಿದೆ.

ಇದನ್ನೂ ವೀಕ್ಷಿಸಿ: Today Rashibhavishy: ಸಿಂಹ ರಾಶಿಯವರಿಗೆ ಈ ದಿನ ವೃತ್ತಿಯಲ್ಲಿ ಅನುಕೂಲ..ಸುಬ್ರಹ್ಮಣ್ಯ ಸ್ವಾಮಿ ಆರಾಧನೆ ಮಾಡಿ

Related Video