Asianet Suvarna News Asianet Suvarna News

ನಡುರಸ್ತೆಯಲ್ಲೇ ಚಿಕ್ಕಪ್ಪನಿಗೆ ಬೆಂಕಿ ಹಚ್ಚಿದ ಮಕ್ಕಳು.. ಪೆಟ್ರೋಲ್ ಹಾಕಿ ಸುಟ್ಟುಹಾಕಿದ ಕ್ರೂರಿಗಳು !

ಬೈಕ್‌ನಲ್ಲಿ ತೆರಳುತ್ತಿದ್ದ ಚಿಕ್ಕಪ್ಪನನ್ನ ಅಡ್ಡಗಟ್ಟಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಜೀವಂತವಾಗಿ ದಹನ ಮಾಡಿದ ಅಣ್ಣ ಹಾಗೂ ಆತನ ಮಗನ ದುಷ್ಕೃತ್ಯವೊಂದು ಶಿವಮೊಗ್ಗದ ಬೆಳಲಕಟ್ಟೆ ಗ್ರಾಮದಲ್ಲಿ ನಡೆದಿದೆ. ಆಸ್ತಿ ವ್ಯಾಜ್ಯದ ಹಿನ್ನೆಲೆಯಲ್ಲಿ ಇಂತಹ ಹೀನ ಕೃತ್ಯ ಎಸಗಿದ ದುಷ್ಟರ ವಿರುದ್ಧ ಸಾರ್ವತ್ರಿಕವಾಗಿ ಆಕ್ರೋಶ ವ್ಯಕ್ತವಾಗಿದೆ.

ಎತ್ತಿ ಆಡಿಸಿದವನನ್ನೇ ಬೆಂಕಿ ಹಚ್ಚಿ ಕೊಂದ ಪಾಪಿಗಲ ಕಥೆ ಇದು. ಸಂಬಂಧಗಳಿಗೆ ಬೆಲೆ ಇಲ್ಲದಂತೆ ಮಾಡಿದ ದುಷ್ಕೃತ್ಯವಿದು. ಮಕ್ಕಳ ಸಮಾನರಾದವರ ದುಷ್ಕೃತ್ಯಕ್ಕೆ ಚಿಕ್ಕಪ್ಪನೊಬ್ಬ ಸಜೀವ ದಹನವಾದ ಘಟನೆ ಶಿವಮೊಗ್ಗ(Shivamogga) ತಾಲೂಕಿನ ಬೆಳಲಕಟ್ಟೆ ಗ್ರಾಮದಲ್ಲಿ ನಡೆದಿದೆ. ಬೆಳಲಕಟ್ಟೆ ಗ್ರಾಮದಿಂದ ಮಗಳ ಮನೆಗೆ ಹೋಗುತ್ತಿದ್ದ ಮಹೇಶಪ್ಪ ಸಜೀವ ದಹನವಾಗಿದ್ದಾರೆ.‌ ದೊಡ್ಡಪ್ಪನ ಮಕ್ಕಳೇ ಪೆಟ್ರೋಲ್ ಹಾಕಿ ಸುಟ್ಟಿರುವ ಘಟನೆಯಿಂದ ಗ್ರಾಮಕ್ಕೆ ಗ್ರಾಮವೇ ದಿಗ್ಭ್ರಮೆಗೊಂಡಿದೆ. ನೀರಿನ ಮೋಟಾರ್ ಕೆಟ್ಟ ಕಾರಣ ನಿನ್ನೆ ಬೆಳಿಗ್ಗೆ ಮೋಟಾರ್ ಬದಲಾಯಿಸಲು ಮಹೇಶಪ್ಪ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಇದೇ ವೇಳೆ ಮನೆಯಿಂದ 50 ಸಾವಿರ ರೂಪಾಯಿಯನ್ನೂ ಇಟ್ಟುಕೊಂಡು ಹೊರಟಿದ್ದರು. ಈ ವೇಳೆ ಮತ್ತೋಡು ಕ್ರಾಸ್ ಬಳಿ ಮಹೇಶಪ್ಪನ ಸ್ವಂತ ಅಣ್ಣ ಕುಮಾರಪ್ಪ, ಆತನ ಮಗ ಕಾರ್ತಿಕ್ ಹಾಡಹಗಲೇ ಅಡ್ಡಗಟ್ಟಿದ್ದಾರೆ.  ಪೆಟ್ರೋಲ್(Petrol) ಎರಚಿ ಬೆಂಕಿ(Fire) ಹಚ್ಚಿ ಮಹೇಶಪ್ಪನನ್ನ ಜೀವಂತವಾಗಿ ಸುಟ್ಟಿದ್ದಾರೆ.ಮಹೇಶಪ್ಪಗೆ ಬೆಳಲಕಟ್ಟೆಯಲ್ಲಿ 3 ಎಕರೆ ಜಮೀನು ಇದೆ. ಈ ಜಮೀನಿನ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಕುಮಾರಪ್ಪ ಅವರ ಮಗ ಕಾರ್ತಿಕ್ ಮತ್ತು ಮಹೇಶಪ್ಪ ನಡುವೆ ಜಮೀನಿನ ವಿಚಾರದಲ್ಲಿ ಮನಸ್ತಾಪವಿತ್ತು. ಈ ಮನಸ್ತಾಪವೇ ಮಹೇಶಪ್ಪನವರನ್ನ ಜೀವಂತ ಸುಡಲು ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸಾಯುವ ಮೊದಲು ಮಹೇಶಪ್ಪ ಹೇಳಿಕೆ ನೀಡಿದ್ದಾರೆ. ಮೊಬೈಲ್ ವಿಡಿಯೋ ಹೇಳಿಕೆಯನ್ನು ಸ್ಥಳೀಯರು ಪೊಲೀಸರಿಗೆ ನೀಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ವೀಕ್ಷಿಸಿ:  ಲೋಕ ಸಮರದ ಲೆಕ್ಕಾಚಾರವನ್ನೇ ಬದಲಿಸಿದ ಮಿನಿ ಫೈಟ್‌ ! ಮೋದಿ ಹ್ಯಾಟ್ರಿಕ್‌ ಗೆಲುವಿನ ಭವಿಷ್ಯ ನುಡಿಯಿತಾ ಫಲಿತಾಂಶ ?