11 ಕಡೆ.. 30 ಗಂಟೆ ದಾಳಿ.. ಸಿಕ್ಕಿದ್ದು ಕೋಟಿ ಕೋಟಿ: ಸಂಬಳ ಸಾವಿರ, ಆದ್ರೆ ಈತ ಕೋಟಿ ಕುಳ..!
ಕೆ.ಆರ್. ಪುರಂ ತಹಶೀಲ್ದಾರ್ ಅಜಿತ್ ರೈ ಬಂಧನ
2022, ನವೆಂಬರ್ನಲ್ಲಿ ಸಸ್ಪೆಂಡ್ ಆಗಿದ್ದ ಅಜಿತ್ ರೈ
ರೈಗೆ ಸಂಬಂಧಿಸಿದ 11 ಸ್ಥಳಗಳಲ್ಲಿ ನಡೆದಿದ್ದ ದಾಳಿ
ಅವನು ಬೆಂಗಳೂರಿನ ಕೆ.ಆರ್ ಪುರಂನ ತಹಶೀಲ್ದಾರ್. ಕಷ್ಟ ಪಟ್ಟು ಎಕ್ಸಾಂ ಬರೆದು ಬಂದವನಲ್ಲ. ಅಪ್ಪನ ಕೆಲಸವನ್ನ ಪುಕ್ಕಟ್ಟೆಯಾಗಿ ಗಿಟ್ಟಿಸಿಕೊಂಡು ಆ ಹುದ್ದೆಗೆ ಬಂದವನು. ಅಪ್ಪನ ಹಾಗೆ ನೀನೂ ಜನರ ಸೇವೆ ಮಾಡು ಅಂತ ಸರ್ಕಾರ ಕೆಲಸ ಕೊಟ್ರೆ ಈತ ಜನರನ್ನ ಉದ್ದಾರ ಮಾಡೋದು ಬಿಟ್ಟು ತನ್ನ ಉದ್ದಾರಕ್ಕೆ ನಿಂತುಬಿಟ್ಟಿದ್ದ. ಪರಿಣಾಮ ಇವತ್ತು ಆತ ಕುಬೇರ. ಬಡವರ ರಕ್ತ ಹೀರಿದವನ ಮನೆಯಲ್ಲಿದ್ದಿದ್ದು ಕೋಟಿ ಕೋಟಿ, ಆದ್ರೆ ಅವನ ಪಾಪದ ಕೊಡ ತುಂಬಿತ್ತು. ಬೆಳ್ಳಂಬೆಳಗ್ಗೆಯೇ ತಹಶೀಲ್ದಾರ್‌ಗೆ ಲೋಕಾಯುಕ್ತ ಶಾಕ್ ಕೊಟ್ಟಿತ್ತು. ಆ ಕುಬೇರನ ಮನೆಯಲ್ಲಿ ಸಿಕ್ಕ ದಾಖಲೆಗಳನ್ನ ನೋಡಿ ಸ್ವತಹ ಲೋಕಾಯುಕ್ತವೇ ಥಂಡಾ ಹೊಡೆದಿತ್ತು. ಅಪ್ಪ ತಹಸೀಲ್ದಾರ್, ಕೆಲಸದಲ್ಲಿರುವಾಗ್ಲೇ ಮರಣ ಹೊಂದಿದ್ರಿಂದ ಅಜಿತ್ ರೈಗೆ ಅನುಕಂಪದ ಮೇಲೆ ಸರ್ಕಾರಿ ಕೆಲಸ ಸಿಕ್ಕಿತ್ತು. ಆರಂಭದಲ್ಲಿ ಡಿ ಗ್ರೇಡ್ ಹುದ್ದೆಯಲ್ಲಿದ್ದ ಅಜಿತ್ ರೈ ಬಡ್ತಿ ಮೇಲೆ ಬಡ್ತಿಗಳನ್ನ ಪಡೆದು ತಹಸೀಲ್ದಾರ್ ಹುದ್ದೆ ಗಿಟ್ಟಿಸಿಕೊಂಡಿದ್ದ. ಸತತ 30 ಗಂಟೆಗಳ ಬಳಿಕ ಲೋಕಾಯುಕ್ತ ಅಧಿಕಾರಿಗಳು ಅವನ ಆಸ್ತಿಯ ಲೆಕ್ಕ ನೋಡಿ ಬೆಚ್ಚಿಬಿದ್ದಿದ್ದಾರೆ. ಇದೇ ಕೇಸ್ನಲ್ಲಿ ಈಗ ಅಜಿತ್ ರೈನನ್ನ ಬಂಧಿಸಿದ್ದಾರೆ.
ಇದನ್ನೂ ವೀಕ್ಷಿಸಿ: ವಿವಾದಗಳ ಸುಳಿಯಲ್ಲಿ ಆದಿಪುರುಷ್: ಸಿನಿಮಾದವರು ಕುರಾನ್, ಬೈಬಲ್‌ನಿಂದ ದೂರವಿರಿ ಅಂದಿದ್ದೇಕೆ ಕೋರ್ಟ್ ?