Asianet Suvarna News Asianet Suvarna News

ಕರ್ನಾಟಕ ಗದ್ದುಗೆ ಗೆದ್ದ ಕಾಂಗ್ರೆಸ್‌ಗೆ ಅಗ್ನಿ ಪರೀಕ್ಷೆ: ಮೋದಿ ಕಟ್ಟಿ ಹಾಕಲು ಪಂಚಾಶ್ವಮೇಧ ಪ್ರಯೋಗ!

ಒಂದು ಹಿಮಾಚಲ ಪ್ರದೇಶದ ಗೆಲುವು, ಮತ್ತೊಂದು ಕರ್ನಾಟಕ ವಿಧಾನಸಭಾ ಚುನಾವಣೆಯ ಮಹಾವಿಜಯ. ಎರಡು ಗೆಲವು ಕೂಡ ಕಾಂಗ್ರೆಸ್‌ಗೆ  ಆತ್ಮಬಲ ಹೆಚ್ಚಿಸಿದೆ.
 

ಕರ್ನಾಟಕದ ಜನ ಕಾಂಗ್ರೆಸ್ ಪಕ್ಷಕ್ಕೆ ಅತಿದೊಡ್ಡ ದಿಗ್ವಿಜಯವನ್ನೇ ಕೊಟ್ಟಿದ್ದಾರೆ. ಬರೋಬ್ಬರಿ 135 ಕ್ಷೇತ್ರಗಳನ್ನ ಕೈವಶ ಮಾಡಿಕೊಂಡು ಹೊಸ ಇತಿಹಾಸವೊಂದನ್ನ ಕಾಂಗ್ರೆಸ್ ನಿರ್ಮಿಸಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ಡಿಕೆ ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ, ಕರ್ನಾಟಕದಲ್ಲಿ ರಾಜ್ಯಭಾರ ಮಾಡ್ತಿದಾರೆ. ಇನ್ನೈದು ವರ್ಷಗಳ ಕಾಲ, ನಿರ್ಭೀತಿಯಿಂದ, ನಿರಾಂತಕವಾಗಿ ಆಡಳಿತ ನಡೆಸೋ ಅವಕಾಶ ಈಗ ಕಾಂಗ್ರೆಸ್ ಪಾಳಯಕ್ಕಿದೆ. ಕಾಂಗ್ರೆಸ್ ಮುಂದೆ, ಅಸಲಿ ಅಗ್ನಿ ಪರೀಕ್ಷೆ ಇರೋದೇ ಈಗ. ಸತತ ಸೋಲಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್ ಪಾಲಿಗೆ, ಕರ್ನಾಟಕ ಎಲೆಕ್ಷನ್ ಮರುಜೀವ ನೀಡಿದೆ. ಕಳೆದ 10 ವರ್ಷಗಳ ಲೋಕಸಭಾ ಚುನಾವಣೆಯ ಫಲಿತಾಂಶ ನೋಡಿದ್ರೆ, ಅಲ್ಲಿ ಕಾಂಗ್ರೆಸ್ ಗೆಲ್ಲೋದಿರ್ಲಿ, ವಿರೋಧ ಪಕ್ಷದಲ್ಲಿ ಕೂರೋದಕ್ಕೂ, ಮೈತ್ರಿ ಮಾಡ್ಕೊಬೇಕಾದ ದುಸ್ಥಿತಿ ಬಂದಿತ್ತು. ಮೋದಿ ಸುನಾಮಿಗೆ ಪತರಗುಟ್ಟಿದ್ದ ಕಾಂಗ್ರೆಸ್‌ಗೆ ಅಲ್ಲಿ ಇಲ್ಲಿ ಗೆಲುವು ಸಿಕ್ತಾ ಇತ್ತು. ಆದ್ರೆ ಅದರಿಂದ ಬಲ ಹೆಚ್ಚಾಗೋದರ ಬದಲಾಗಿ, ಇದ್ದ ಬಲವನ್ನೆಲ್ಲಾ ಅಲ್ಲೇ ಸುರಿದು ವ್ಯಯ ಮಾಡ್ಕೊಬೇಕಿತ್ತು.

ಇದನ್ನೂ ವೀಕ್ಷಿಸಿ: 5 ವರ್ಷವೂ ಸಿದ್ದರಾಮಯ್ಯ ಸಿಎಂ, ಡಿಕೆಶಿಗಿಲ್ವಾ ರಾಜಪಟ್ಟ?: ಸಿದ್ದು ಆಪ್ತನ ವಿರುದ್ಧ ಕೆರಳಿ ಕೆಂಡವಾದ "ಬಂಡೆ" ಬ್ರದರ್ಸ್!