FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!

Bengaluru Kritika Murder Case ರಾಜ್ಯವನ್ನೇ ಬೆಚ್ಚಿಬೀಳಿಸಿದ ಡಾಕ್ಟರ್ ಕೃತಿಕಾ ಕೊಲೆ ಪ್ರಕರಣದ ತನಿಖೆ ಮುಂದುವರೆದಿದ್ದು, ಆರೋಪಿ ಡಾಕ್ಟರ್ ಗಂಡನ ಕರಾಳ ಮುಖ ಬಯಲಾಗುತ್ತಿದೆ. ಆತ ಭಗವದ್ಗೀತೆ ನೀಡಿ ಮಹಿಳೆಯರನ್ನು ಹೇಗೆ ವಶಪಡಿಸಿಕೊಳ್ಳುತ್ತಿದ್ದ ಎಂಬ ಆಘಾತಕಾರಿ ಸತ್ಯಗಳು ತನಿಖೆಯಿಂದ ಹೊರಬರುತ್ತಿವೆ.

Share this Video
  • FB
  • Linkdin
  • Whatsapp

ಬೆಂಗಳೂರು (ನ.8): ಅವನು ಡಾಕ್ಟರ್​​ ಅಲ್ಲ ಕಾಮುಕ. ಬಗೆದಷ್ಟು ಬಯಲಾಗ್ತಿದೆ ಕೃತಿಕ ಮರ್ಡರ್​​ ಕೇಸ್​​​ ರಹಸ್ಯ. ಭಗವದ್ಗೀತೆ ಕೊಟ್ಟು ಹೆಣ್ಣುಮಕ್ಕಳನ್ನ ಹೇಗೆ ಬುಟ್ಟಿಗೆ ಹಾಕಿಕೊಳ್ತಿದ್ದ ಗೊತ್ತಾ ಆ ​ ಡಾಕ್ಟರ್​​. ಅವನು ಲವ್ ಅಂಡ್ ಮರ್ಡರ್ ಸ್ಪೆಷಲಿಸ್ಟ್ ಅಂದ್ರೆ ತಪ್ಪಾಗೋದಿಲ್ಲ..! 

ಬಾಲಿವುಡ್‌ ಸಿನಿಮಾ ರೇಂಜಲ್ಲಿತ್ತು ಕೃತಿಕಾ-ಮಹೇಂದ್ರ ರೆಡ್ಡಿ ಪ್ರೀ ವೆಡ್ಡಿಂಗ್‌ ಫೋಟೋಶೂಟ್‌, ಗಂಡನ ಮಸಲತ್ತು ಆಕೆಗೆ ತಿಳಿಯಲೇ ಇಲ್ಲ!

ಅದು ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮರ್ಡರ್​ ಕೇಸ್​​.ಅವನು ಡಾಕ್ಟರ್​​. ಫೇಮಸ್​​ ಇನ್​ ಸರ್ಜರಿ. ಅವಳು ಚರ್ಮ ರೋಗ ತಜ್ಞೆ. ಇಬ್ಬರೂ ವರ್ಷದ ಹಿಂದಷ್ಟೇ ಸಪ್ತಪದಿ ತುಳಿದಿದ್ದರು. ಆದ್ರೆ ಒಂದು ದಿನ ಡಾಕ್ಟರ್​ ಗಂಡನೇ ಹೆಂಡತಿಯನ್ನ ಕೊಂದು ಮುಗಿಸಿದ್ದ. ತನಿಖೆ ನಡೆಸುತ್ತಿರೋ ಪೊಲೀಸರು ಗಂಡನ ನಿಜಮುಖವನ್ನ ಬಯಲು ಮಾಡ್ತಿದ್ದಾರೆ. ಆದ್ರೆ ಇವತ್ತು ಬಂದಿರೋ ಅಪ್​ಡೇಟ್​​ ಆ ಡಾಕ್ಟರ್​​ ಮನುಷ್ಯನೇ ಆಗಿರಲಿಲ್ಲ ಅನ್ನೋದನ್ನ ನಿಜ ಮಾಡ್ತಿದೆ.

ಸರಿಯಾಗಿ ಎರಡು ವಾರದ ಹಿಂದೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಕೇಸ್​​ ಅದು. ಒಬ್ಬ ಡಾಕ್ಟರ್​​ ಗಂಡ ತನ್ನ ಡಾಕ್ಟರ್​ ಹೆಂಡತಿಯನ್ನೇ ಕೊಂದ ಸ್ಟೋರಿ ಅದು. ಇವತ್ತು ನಾವು ಅದರ ಮುಂದುವರೆದ ಭಾಗವನ್ನ ಹೇಳಲಿದ್ದೇವೆ.

Related Video