- Home
- Karnataka Districts
- ಬಾಲಿವುಡ್ ಸಿನಿಮಾ ರೇಂಜಲ್ಲಿತ್ತು ಕೃತಿಕಾ-ಮಹೇಂದ್ರ ರೆಡ್ಡಿ ಪ್ರೀ ವೆಡ್ಡಿಂಗ್ ಫೋಟೋಶೂಟ್, ಗಂಡನ ಮಸಲತ್ತು ಆಕೆಗೆ ತಿಳಿಯಲೇ ಇಲ್ಲ!
ಬಾಲಿವುಡ್ ಸಿನಿಮಾ ರೇಂಜಲ್ಲಿತ್ತು ಕೃತಿಕಾ-ಮಹೇಂದ್ರ ರೆಡ್ಡಿ ಪ್ರೀ ವೆಡ್ಡಿಂಗ್ ಫೋಟೋಶೂಟ್, ಗಂಡನ ಮಸಲತ್ತು ಆಕೆಗೆ ತಿಳಿಯಲೇ ಇಲ್ಲ!
Kashmir Pre Wedding Shoot Surfaces After Mahendra Reddy Arrest ಬೆಂಗಳೂರಿನ ವೈದ್ಯೆ ಕೃತಿಕಾ ರೆಡ್ಡಿ ಅವರದ್ದು ಅಸಹಜ ಸಾವಲ್ಲ, ಬದಲಾಗಿ ಕೊಲೆ ಎಂದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ. ಈ ನಡುವೆ, ಕಾಶ್ಮೀರದಲ್ಲಿ ನಡೆದಿದ್ದ ಈ ಜೋಡಿಯ ಅದ್ದೂರಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ವೈರಲ್ ಆಗಿದೆ.

ಇಂದು ಇಡೀ ಬೆಂಗಳೂರೇ ಬೆಚ್ಚಿಬೀಳಲು ಕಾರಣವಾಗಿರುವುದು ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್. ಕಳೆದ ಏಪ್ರಿಲ್‌ನಲ್ಲಿ ಕೃತಿಕಾ ಸಾವು ಕಂಡಿದ್ದರೂ, ಆಕೆಯ ಸಾವಿನ ರಹಸ್ಯ ಈಗ ಬಯಲಾಗಿದೆ.
ಆಕೆಯದ್ದು ಅಸಹಜ ಸಾವಲ್ಲ.ಬದಲಾಗಿ ಕೊಲೆ ಎಂದು ಪೊಲೀಸರ ಅನುಮಾನ ನಿಜವಾಗಿದೆ. ಮರಣೋತ್ತರ ಪರೀಕ್ಷೆ ಹಾಗೂ ಎಫ್‌ಎಸ್‌ಎಲ್ ವರದಿಯ ಬೆನ್ನಲ್ಲಿಯೇ ಆಕೆಯ ಪತಿ ಮಹೇಂದ್ರ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಗೆ ನಿಖರ ಕಾರಣ ಏನು ಅನ್ನೋದು ಇನ್ನಷ್ಟೇ ತಿಳಿದುಬರಬೇಕಿದೆ. ಕೆಲವು ವರದಿಗಳ ಪ್ರಕಾರ ಆಕೆಗೆ ಅನಾರೋಗ್ಯದ ಸಮಸ್ಯೆ ಇತ್ತು ಅದರಿಂದ ಬೇಸತ್ತಿದ್ದ ಮಹೇಂದ್ರ ರೆಡ್ಡಿ ಈ ಕೃತ್ಯ ಮಾಡಿದ್ದಾನೆ ಎನ್ನಲಾಗಿದೆ.
ಇನ್ನೂ ಕೆಲವಡೆ ಆಸ್ಪತ್ರೆ ಕಟ್ಟಬೇಕು ಎನ್ನುವ ಕನಸಿನಲ್ಲಿದ್ದ ಮಹೇಂದ್ರ ರೆಡ್ಡಿಗೆ ಕೃತಿಕಾ ರೆಡ್ಡಿಯ ಕುಟುಂಬದಿಂದ ಯಾವುದೇ ಸಹಾಯ ಸಿಗದ ಕಾರಣಕ್ಕೆ ಈ ಕೃತ್ಯ ಮಾಡಿದ್ದಾನೆ ಎನ್ನಲಾಗಿದೆ.
ಇದೆಲ್ಲದರ ನಡುವೆ ಕೃತಿಕಾ ರೆಡ್ಡಿ ಹಾಗೂ ಮಹೇಂದ್ರ ರೆಡ್ಡಿ ಅವರ ಪ್ರೀ ವೆಡ್ಡಿಂಗ್ ಫೋಟೋಶೂಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಮದುವೆಯಾಗ ಬಯಸುವ ಯಾವುದೇ ವಧು-ವರರು ಕನಸು ಕಾಣುವಂಥ ರೀತಿಯಲ್ಲಿ ಅದ್ಭುತವಾಗಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ನಡೆದಿತ್ತು.
ಹಾಗಂಥ ಅವರ ಫೋಟೋಶೂಟ್ ನಡೆದಿದ್ದು ಕರ್ನಾಟಕದಲ್ಲಲ್ಲ. ಮದುವೆಯಾದಾಗ ಹನಿಮೂನ್ ಕನಸು ಕಾಣುವ ಕಾಶ್ಮೀರದಲ್ಲಿ ಅವರ ಪ್ರೀವೆಡ್ಡಿಂಗ್ ಫೋಟೋಶೂಟ್ ನಡೆದಿತ್ತು.
2024ರ ಫೆಬ್ರವರಿ 14 ರಂದು ಕಾಶ್ಮೀರ್‌ಲಾಗ್ಸ್ ಎನ್ನುವ ಯೂಟ್ಯೂಬ್ ಪೇಜ್ ಇದನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದೆ. 2024ರ ಮೇ 26 ರಂದು ಇವರ ವಿವಾಹ ಅದ್ದೂರಿಯಾಗಿ ನಡೆದಿತ್ತು.
ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಬಾಲಿವುಡ್ ರೇಂಜ್‌ನಲ್ಲಿ ಇವರ ಫೋಟೋಶೂಟ್ ನಡೆದಿತ್ತು. ಜೋಡಿ ಕೂಡ ಮುದ್ದಾಗಿ ಫೋಟೋಶೂಟ್‌ನಲ್ಲಿ ಕಾಣಿಸಿಕೊಂಡಿತ್ತು.
ಜಮ್ಮು ಕಾಶ್ಮೀರದ ದಾಲ್ ಲೇಕ್, ಸೋನ್‌ಮಾರ್ಗ್, ಗುಲ್ಮಾರ್ಗ್, ಡ್ರಂಗ್ ವಾಟರ್‌ಫಾಲ್, ಶಂಕರಾಚಾರ್ಯ ದೇವಸ್ಥಾನ ಹಾಗೂ ದರ್ಗಾ ಹಜರತ್‌ಬಾಲ್‌ನಲ್ಲಿ ಫೋಟೋಶೂಟ್ ನಡೆದಿತ್ತು.
ದೇಶಿ ಹಾಗೂ ವಿದೇಶಿ ಕಾಸ್ಟ್ಯೂಮ್‌ನಲ್ಲಿ ಫೋಟೋಶೂಟ್‌ಅನ್ನು ಈ ಜೋಡಿ ಮಾಡಿಸಿಕೊಂಡಿತ್ತು. ಶಂಕರಾಚಾರ್ಯ ದೇವಸ್ಥಾನಕ್ಕೆ ಸಾಂಪ್ರದಾಯಿಕ ಧರಿಸಿನಲ್ಲಿ ಹೋಗಿ ದರ್ಶನ ಮಾಡಿ ಬಂದಿದ್ದರು.
ಆದರೆ, ಫೋಟೋಶೂಟ್‌ನ ಯಾವುದೇ ಹಂತದಲ್ಕೂ ಕೃತಿಕಾ ರೆಡ್ಡಿಯ ಗಂಡನ ಅಸಲಿ ಮುಖ ಕಾಣಿಸಿಲಿಲ್ಲ. ಕೊಲೆ ಮಾಡುವ ಹಂತದವರೆಗೆ ಆತ ಹೋಗಿದ್ದಾದೂ ಏಕೆ ಎನ್ನುವ ಪ್ರಶ್ನೆಗಳು ಉದ್ಭವಿಸಿದೆ.
2025ರ ಏಪ್ರಿಲ್ 24 ರಂದು, ಕೃತಿಕಾ ತನ್ನ ಕೋಣೆಯಲ್ಲಿ ಯಾವುದೇ ಪ್ರಜ್ಞೆ ಇಲ್ಲದೆ ಬಿದ್ದಿದ್ದಾಗ ಆಕೆಯ ಪೋಷಕರು ಆಕೆಯನ್ನು ಕಾವೇರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ, ಆ ವೇಳೆಗಾಗಲೇ ಆಕೆ ಸಾವು ಕಂಡಿದ್ದಳು.
ಸಾವಿಗೂ ಮೂರು ದಿನದ ಹಿಂದೆ ಆಕೆ ಗ್ಯಾಸ್ಟ್ರಿಕ್ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದಳು ಎಂದು ಕುಟುಂಬದವರು ತಿಳಿಸಿದ್ದಾರೆ. ಆಕೆಯ ಪತಿ ಜನರಲ್ ಸರ್ಜನ್ 31 ವರ್ಷದ ಡಾ. ಮಹೇಂದ್ರ ರೆಡ್ಡಿ ಜಿಎಸ್ ಆಕೆಗೆ ಚಿಕಿತ್ಸೆ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕುಟುಂಬವು ಸಹಜ ಸಾವು ಎಂದು ಭಾವಿಸಿದ್ದರೂ, ಕೃತಿಕಾ ಅವರ ಸಹೋದರಿ ಡಾ. ನಿಕಿತಾ ಎಂ ರೆಡ್ಡಿ ಅವರು ಸಾವಿಗೆ ಕಾರಣ ತಿಳಿದುಕೊಳ್ಳಬೇಕೆಂದು ಒತ್ತಾಯಿಸಿದರು, ಇದು ಪೊಲೀಸರನ್ನು ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಲು ಕಾರಣವಾಯಿತು.
ಆರು ತಿಂಗಳ ನಂತರ, ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ವರದಿಗಳು ಆಕೆಗೆ ಆಪರೇಷನ್ ಥಿಯೇಟರ್ ಬಳಕೆಗೆ ಮಾತ್ರ ಸೀಮಿತವಾದ ಅರಿವಳಿಕೆ ಔಷಧವಾದ ಪ್ರೊಪೋಫೊಲ್‌ನ ಹೆಚ್ಚಿನ ಪ್ರಮಾಣವನ್ನು ನೀಡಲಾಗಿತ್ತು ಎಂದು ಸೂಚಿಸಿವೆ.