ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಸಿಬ್ಬಂದಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಸಿಬ್ಬಂದಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದ್ದು, ಸಾವು ಬದುಕಿನ ಮದ್ಯ ಹೋರಾಟ ಮಾಡುತ್ತಿದ್ದಾರೆ.

Share this Video
  • FB
  • Linkdin
  • Whatsapp

ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಸಿಬ್ಬಂದಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದ್ದು, ಸಾವು ಬದುಕಿನ ಮದ್ಯ ಹೋರಾಟ ಮಾಡುತ್ತಿದ್ದಾರೆ. ಚುನಾವಣಾ ಅಧಿಕಾರಿ ಸವಣೂರ ಇವರಿಂದ ಕಿರುಕುಳದ ಆರೋಪ ಇದ್ದು, ಚುನಾವಣೆಗೆ ಬಿಎಲ್ಓ ಆಗಿ ನೇಮಕ ಮಾಡಿ ಮಾನಸಿಕ ಹಿಂಸೆ, ದಬ್ಬಾಳಿಕೆ, ಅಮಾನತು ಮಾಡುವ ಬೆದರಿಕೆ ಹಾಕಿದ್ದಾರೆ. ಬೆದರಿಕೆಗೆ ಅಂಜಿ ವಿಷ ಸೇವಿಸಿ ಆತ್ಮಾನಂದ ಬಡಿಗೇರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಕಳೆದ ಐದು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾಲೇಜು ಸಿಬ್ಬಂದಿಗಳನ್ನ ಚುಣಾವಣಾ ಕರ್ತವ್ಯಕ್ಕೆ ತೆಗೆದುಕ್ಕೊಳ್ಳಬೇಡಿ ಎಂದು ಮನವಿ ಮಾಡಿದ್ದರೂ ಚುಣಾವಣಾ ಅಧಿಕಾರಿಗಳು ಕೆಲಸಕ್ಕೆ‌ ನೇಮಕ ಮಾಡಿದ್ದಾರೆ. ಚುಣಾವಣಾಧಿಕಾರಿ ಸವಣೂರ ಎಂಬುವರನ್ನ ಅಮಾನತು ಮಾಡಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಸರ್ವಾಂಗೀಣ ಟ್ರಸ್ಟ್ ವತಿಯಿಂದ ಒತ್ತಾಯ ಮಾಡಲಾಗಿದೆ.

Related Video