Hubli: 11 ಜನರ ಮೇಲೆ ಪೊಲೀಸರಿಂದ ದೌರ್ಜನ್ಯ ಆರೋಪ: ಹಣಕ್ಕಾಗಿ ಕಾಯುವ ರಕ್ಷಕರೇ ರೌಡಿಗಳಂತೆ ವರ್ತಿಸಿದ್ರಾ ?

ಕಲಘಟಗಿ ಪೊಲೀಸರು ಇಸ್ಪೀಟ್‌ ಆಟ ಆಡುತ್ತಿದ್ದ 11 ಜನರನ್ನು ಬಂಧಿಸಿ, ಹಣಕ್ಕಾಗಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

First Published Feb 11, 2024, 1:50 PM IST | Last Updated Feb 11, 2024, 1:51 PM IST

ಹುಬ್ಬಳ್ಳಿ: ಫೆಬ್ರವರಿ 4 ರಂದು ಕಲಘಟಗಿ ಪೊಲೀಸರು ಇಸ್ಪೀಟ್‌(Ispeet) ಆಟ ಆಡುತ್ತಿದ್ದ 11 ಜನರನ್ನು ಬಂಧಿಸಿದ್ದರು. ಇವರೆಲ್ಲಾ ಹೊಲದಲ್ಲಿ ಇಸ್ಪೀಟ್‌ ಆಡುವಾಗ ಏಕಾಏಕಿ ದಾಳಿ(Attack) ಮಾಡಿದ ಪೊಲೀಸರು, ಅವರನ್ನು ಬಂಧಿಸಿದ್ದಾರೆ. ಬಳಿಕ ಅವರನ್ನು ಮನಬಂದಂತೆ ಥಳಿಸಿ, ಅವರಿಂದ ಸುಮಾರು 49 ಸಾವಿರ ರೂಪಾಯಿ ಹಣವನ್ನು ಕಸಿದುಕೊಳ್ತಾರೆ. ನಿಮ್ಮನ್ನು ಬಿಟ್ಟು ಕಳಿಸಬೇಕು ಎಂದ್ರೆ ಹಣಕೊಡಿ ಎಂದು ಪೊಲೀಸರು(Police) ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಹಾಂತೇಶ್‌ ಎಂಬುವರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗ್ತಿದೆ. ಫೋನ್‌ ಪೇ(Phone Pay) ಮೂಲಕ ಹಣ ಹಾಕಿಸಿಕೊಂಡಿದ್ದು, ಕೊಡುವುದು ತಡವಾದ ಹಿನ್ನೆಲೆ ರಾತ್ರಿಯಿಡೀ ಪೊಲೀಸ್ ಠಾಣೆಯಲ್ಲೇ ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ ಎನ್ನಲಾಗ್ತಿದೆ. ಹಲ್ಲೆಗೊಳಗಾದ ಉಮೇಶ್ ಕೊರವಾರ ಈ ಸಂಬಂಧ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಇನ್ನೂ ಆರೋಪಿ ಉಮೇಶ್‌ ಮಾನವ ಹಕ್ಕು ಆಯೋಗಕ್ಕೆ ಪೊಲೀಸರ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ. 

ಇದನ್ನೂ ವೀಕ್ಷಿಸಿ:  Weekly-Horoscope: ಈ ವಾರದ ವಿಶೇಷವೇನು ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ ?