Asianet Suvarna News Asianet Suvarna News

Weekly-Horoscope: ಈ ವಾರದ ವಿಶೇಷವೇನು ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ ?

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..

First Published Feb 11, 2024, 1:45 PM IST | Last Updated Feb 11, 2024, 1:45 PM IST

ಈ ವಾರದ ವಿಶೇಷ ನೋಡುವುದಾದ್ರೆ, ಫೆಬ್ರವರಿ - 11 - ಭಾನುವಾರ - ಮರಕ ರಾಶಿಗೆ ಶುಕ್ರ ಪ್ರವೇಶ ಮಾಡುತ್ತಿದ್ದಾನೆ. ಫೆಬ್ರವರಿ - 13ರಂದು ಮಂಗಳವಾರ - ಕುಂಭ ರಾಶಿಗೆ ಸೂರ್ಯ ಪ್ರವೇಶ ಮಾಡಲಿದ್ದಾನೆ. ಫೆಬ್ರವರಿ - 14ರಂದು ಬುಧವಾರ ಶ್ರೀ ಪಂಚಮೀ ಇದೆ. ಫೆಬ್ರವರಿ - 15 ಗುರುವಾರ  ಕುಮಾರ ಷಷ್ಠೀ ಇದ್ದು, ಫೆಬ್ರವರಿ - 16 ರಂದು ಶುಕ್ರವಾರ - ರಥ ಸಪ್ತಮಿ ಇದೆ. ಮಿಥುನ ರಾಶಿಯವರಿಗೆ ವಾರದ ಆದಿಯಲ್ಲಿ ಆರೋಗ್ಯದಲ್ಲಿ ಏರುಪೇರು ಆಗಲಿದ್ದು, ವೃತ್ತಿಯಲ್ಲಿ ಲಾಭ, ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಹೆಚ್ಚಿನ ವ್ಯಯವಿದೆ. ವಾರ ಮಧ್ಯದಲ್ಲಿದಲ್ಲಿ ಲಾಭದಾಯಕ ಫಲವಿದೆ. ವೃತ್ತಿಯಲ್ಲಿ ಕೊಂಚ ಕಿರಿಕಿರಿ. ಸ್ತ್ರೀಯರಿಗೆ ವೃತ್ತಿಯಲ್ಲಿ ತೊಡಕು. ಆರೋಗ್ಯದ ಬಗ್ಗೆ ಎಚ್ಚರವಹಿಸಿ. ವಾರಾಂತ್ಯದಲ್ಲಿ ಹೆಚ್ಚಿನ ಲಾಭವಿದೆ. ಆಪ್ತರಿಗಾಗಿ, ಕುಟುಂಬದವರಿಗಾಗಿ ವ್ಯಯ ಮಾಡಲಿದ್ದೀರಿ. ವೃತ್ತಿಯಲ್ಲಿ ಕೊಂಚ ಕಿರಿಕಿರಿ. ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ ಬರಲಿದೆ. ಪರಿಹಾರಕ್ಕೆ ನಾಗ ದೇವರ ದರ್ಶನ ಮಾಡಿ.

ಇದನ್ನೂ ವೀಕ್ಷಿಸಿ:  ಮೌಡ್ಯಾಚರಣೆ ಇನ್ನೂ ಜೀವಂತ: ಬಾಣಂತಿ, 1 ತಿಂಗಳ ಮಗು ಊರ ಹೊರಗಿಟ್ಟ ಗ್ರಾಮಸ್ಥರು !

Video Top Stories