Asianet Suvarna News Asianet Suvarna News

Kalaburgi: ಮದುವೆಯಾಗುವುದಾಗಿ ನಂಬಿಸಿ, ಲಾಡ್ಜ್‌ಗೆ ಕರೆದೊಯ್ದು, ದೋಖಾ ಎಸಗಿದ್ರಾ IAS ಅಧಿಕಾರಿ?

Nov 27, 2021, 12:19 PM IST
  • facebook-logo
  • twitter-logo
  • whatsapp-logo

ಕಲಬುರಗಿ (ನ. 27): ಐಎಎಸ್ ಅಧಿಕಾರಿ ಸ್ನೇಹಲ್ ಲೋಖಂಡೆ (Snehal Lokhande) ವಿರುದ್ಧ ಲವ್ ಸೆಕ್ಸ್ ದೋಖಾ (Love, Sex, Cheat) ಆರೋಪ ಕೇಳಿ ಬಂದಿದೆ. ದೆಹಲಿ ಮೂಲದ ಯುವತಿಯೊಬ್ಬಳು ಲೋಖಂಡೆ ವಿರುದ್ಧ ಆರೋಪ ಮಾಡಿದ್ದಾಳೆ. 

Kalaburgi: ಲವ್-ಸೆಕ್ಸ್‌- ದೋಖಾ ಆರೋಪ; ಕಾನೂನು ಹೋರಾಟಕ್ಕೆ ಮುಂದಾದ IAS ಅಧಿಕಾರಿ

 

'2019 ರಲ್ಲಿ ಸ್ನೇಹಲ್ -ನನಗೆ ಪರಿಚಯವಾಯಿತು. ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾರೆ. ಲಾಡ್ಜ್‌, ರೂಂಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಐಪಿಲ್ ಮಾತ್ರೆ ನುಂಗಲು ಹೇಳಿದ್ದಾರೆ' ಎಂದು ಯುವತಿ ಆರೋಪಿಸಿದ್ದಾಳೆ. ಜೊತೆಗೆ ಅಶ್ಲೀಲ ಚಾಟ್‌ ಲಿಸ್ಟನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾಳೆ. ಈ ಸಂಬಂಧ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸ್ಮೃತಿ ಇರಾನಿ,  ಸಿಎಂ ಬೊಮ್ಮಾಯಿ, ಕಲಬುರಗಿ ಉಸ್ತುವಾರಿ ನಿರಾಣಿಗೆ ದೂರು ನೀಡಿದ್ದಾಳೆ. ದೂರು ನೀಡಿ ವಾರ ಕಳೆದರೂ ಲೋಖಂಡೆ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಆರೋಪವನ್ನು ನಿರಾಕರಿಸಿರುವ ಸ್ನೇಹಲ್ ಲೋಖಂಡೆ, ಮಾನನಷ್ಟ ಮೊಕದ್ದಮೆ ಹಾಕಲು ಚಿಂತನೆ ನಡೆಸಿದ್ದಾರೆ. 

 

Video Top Stories