ಆಳಂದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿ ಐಟಿಐ ವಿದ್ಯಾರ್ಥಿಯ ಬಂಧನ

ಕಲಬುರಗಿ ಜಿಲ್ಲೆಯ ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

First Published Nov 3, 2022, 1:34 PM IST | Last Updated Nov 3, 2022, 1:34 PM IST

16 ವರ್ಷದ ಐಟಿಐ ಓದುತ್ತಿದ್ದ ವಿದ್ಯಾರ್ಥಿಯಿಂದ ಈ ಹೀನ ಕೃತ್ಯ ನಡೆದಿದ್ದು, 15 ವರ್ಷದ ಬಾಲಕಿಯು ಬಹಿರ್ದೆಸೆಗೆ ಹೋಗಿದ್ದ ವೇಳೆ ಈ ಕೃತ್ಯವೆಸಗಿದ್ದಾನೆ. ಕಬ್ಬಿನ ಗದ್ದೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಕಲ್ಲಿನಿಂದ ಕುತ್ತಿಗೆಗೆ ಚುಚ್ಚಿ ಕೊಲೆ ಮಾಡಿದ್ದಾನೆ. 24 ಗಂಟೆಯೊಳಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆಳಂದ ಪೋಲಿಸರಿಗೆ 1 ಲಕ್ಷ ಬಹುಮಾನ ಘೋಷಿಸಲಾಗಿದೆ.

ಕನಕಪುರ: ಜೀ ನೆಟ್‌ ವರ್ಕ್‌ಗೆ ಕನ್ನ​ಹಾ​ಕಿದ ನಾಲ್ವರ ವಿರುದ್ಧ ಕೇಸ್‌..!