Asianet Suvarna News Asianet Suvarna News

ಮಗನ ಬರ್ತ್‌ಡೇ ಸಂಭ್ರಮದಲ್ಲಿದ್ದ ಮನೆಯನ್ನು ಸೂತಕದ ಮನೆ ಮಾಡಿದ್ರಾ ಕಾಂಗ್ರೆಸ್ ಕಾರ್ಯಕರ್ತರು..?

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಪರವಾಗಿ ಕೆಲಸ ಮಾಡಿದ್ದ ವ್ಯಕ್ತಿ ಮೊಹಮದ್‌ ಬಾಶಾನನ್ನು ಕಾಂಗ್ರೆಸ್‌ ಕಾರ್ಯಕರ್ತರು ಕೊಂದುಬಿಟ್ಟರಾ? ಮಗನ ಬರ್ತ್‌ಡೇ ಸಂಭ್ರಮದಲ್ಲಿದ್ದ ಮನೆಯಲ್ಲಿ ಅಂದು ಸೂತಕದ ವಾತಾವರಣಕ್ಕೆ ಕಾರಣವಾಗಿದ್ದು ಈ ವ್ಯಕ್ತಿಯ ಸಾವು.

ಬಳ್ಳಾರಿ (ಜ.26): ಮಗನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಮನೆಯಲ್ಲಿ ಸ್ಮಶಾನ ಮೌನ. ಇನ್ನೇನು ಕೇಕ್‌ ಕತ್ತರಿಸಬೇಕು ಎನ್ನುವಷ್ಟರಲ್ಲಿ ಮನೆಯ ಸಮೀಪದಲ್ಲಿಯೇ ಬರ್ಬರ ಹತ್ಯೆಯೊಂದು ನಡೆದಿತ್ತು. ಆದರೆ, ಅದು ಬೇರೆ ಯಾರದ್ದೋ ಹತ್ಯೆ ಆಗಿರಲಿಲ್ಲ. ಬರ್ತ್‌ಡೇ ಆಚರಿಸಿಕೊಳ್ಳುತ್ತಿದ್ದ ಹುಡಗನ ತಂದೆಯದು!

ಮನೆ ಎದುರುಗಡೆ ಶಾಮಿಯಾನ ಹಾಕಿಕೊಂಡು, ಮಗನ ಆರನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುವ ಖುಷಿಯಲ್ಲಿ ಇಡೀ ಮನೆ ಇತ್ತು. ಆದರೆ, ಅದೇ ಮನೆಯ ಎದುರು ನಡೆದ ಘಟನೆ ಆ ಮನೆಯನ್ನು ಮಾತ್ರವಲ್ಲ ಇಡೀ ಪ್ರದೇಶವನ್ನೇ ಬೆಚ್ಚಿ ಬೀಳಿಸಿತ್ತು.

ಹೆಂಡ್ತಿ, ಮಕ್ಕಳು ಸೇರಿ ಐವರನ್ನು ಕೊಂದಿದ್ದ ಕ್ರೂರಿಗೆ ಗಲ್ಲು ಶಿಕ್ಷೆಕೊಟ್ಟ ನ್ಯಾಯಾಲಯ

ರಿಯಲ್‌ ಎಸ್ಟೇಟ್‌ ಉದ್ಯಮಿ ಹಾಗೂ ಜನಾರ್ಧನ ರೆಡ್ಡಿ ಬೆಂಬಲಿಗ ಮೊಹಮದ್‌ ಬಾಶಾ ಕೊಲೆಯಾಗಿದ್ದ. ಮನೆಗೆ ಬಂದು ಕೇಕ್‌ ಇಟ್ಟು ಹೋಗಿದ್ದ ಪಾಶಾನನ್ನು ನಡು ರಸ್ತೆಯಲ್ಲಿ ಕೊಚ್ಚಿ ಕೊಲ್ಲಲಾಗಿತ್ತು. ಇನ್ನು ಈ ಪಾಶಾನನ್ನು ಕೊಲೆ ಮಾಡಿದ್ದು ಕಾಂಗ್ರೆಸ್‌ ಕಾರ್ಯಕರ್ತರು ಎಂದು ಆರೋಪಿಸಲಾಗಿದೆ.