Asianet Suvarna News Asianet Suvarna News

ಹೆಂಡ್ತಿ, ಮಕ್ಕಳು ಸೇರಿ ಐವರನ್ನು ಕೊಂದಿದ್ದ ಕ್ರೂರಿಗೆ ಗಲ್ಲು ಶಿಕ್ಷೆಕೊಟ್ಟ ನ್ಯಾಯಾಲಯ

ಪತ್ನಿ ಹಾಗೂ ಮಕ್ಕಳು ಸೇರಿ ಐವರನ್ನ ಕೊಲೆ ಮಾಡಿದ್ದ ಆರೋಪಿಗೆ ಮರಣ ದಂಡನೆ ಶಿಕ್ಷೆಯನ್ನು ನೀಡಿದ್ದ ಬಳ್ಳಾರಿ ಸೆಷನ್ಸ್ ನ್ಯಾಯಾಲಯದ ತೀರ್ಪನ್ನ, ಧಾರವಾಡದ ವಿಶೇಷ ನ್ಯಾಯಾಲಯ ಎತ್ತಿ ಹಿಡಿದಿದೆ.

Court sentenced to death Bellari accused for murdering his wife and children sat
Author
First Published Jun 10, 2023, 7:10 PM IST

ಬಳ್ಳಾರಿ (ಜೂ.10):  ಪತ್ನಿ ಹಾಗೂ ಸ್ವಂತ ಮಕ್ಕಳು ಸೇರಿ ಐವರನ್ನ ಕೊಲೆ ಮಾಡಿದ್ದ ಆರೋಪಿಗೆ ಮರಣ ದಂಡನೆ ಶಿಕ್ಷೆಯನ್ನು ನೀಡಿದ್ದ ಬಳ್ಳಾರಿ ಸೆಷನ್ಸ್ ನ್ಯಾಯಾಲಯದ ತೀರ್ಪನ್ನ ಎತ್ತಿ ಹಿಡಿದ ಧಾರವಾಡದ ವಿಶೇಷ ನ್ಯಾಯಾಲಯ ಎತ್ತಿ ಹಿಡಿದಿದೆ.

ಕಳೆದ 2017ರ ಫೆಬ್ರವರಿ 25 ರಂದು ತನ್ನ ಹೆಂಡತಿಯ ಶೀಲದ ಬಗ್ಗೆ ಶಂಕಿಸಿ ಹಾಗೂ ಮಕ್ಕಳ ಜನನಕ್ಕೆ ತಂದೆ ಯಾರೆಂಬ ಗೊಂದಲಕ್ಕಿ ಸಿಲುಕಿದ್ದ ಕ್ರೂರಿ ಬೈಲೂರು ತಿಪ್ಪಯ್ಯ ತನ್ನ ಕುಟುಂಬದಲ್ಲಿನ ಪತ್ನಿ ಹಾಗೂ ನಾಲ್ವರು ಮಕ್ಕಳನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದನು. ಈ ಘಟನೆಗಲು ಕಂಪ್ಲಿಯ ಚಪ್ಪರದಳ್ಳಿ ವಡ್ಡರ ತಿಪ್ಪೇಸ್ವಾಮಿ ಮನೆಯಲ್ಲಿ ನಡೆದಿತ್ತು. ಪತ್ನಿಯ ಶೀಲ ಶಂಕಿಸಿದ ಕ್ರೂರಿ ಪತಿರಾಯ ತನ್ನ ಹೆಂಡತಿ, ಹೆಂಡತಿಯ ತಂಗಿ ಹಾಗೂ ತನ್ನ ಮೂವರು ಮಕ್ಕಳು ಸೇರಿ ಒಟ್ಟು ಐವರನ್ನು ಕೊಲೆ ಮಾಡಿದ್ದನು.

ಇನ್ಮೇಲೆ ಶಾಲೇಲಿ ಎಣ್ಣೆ ಹಾಕೊಲ್ಲ ಬಿಟ್ಟುಬಿಡ್ರಪ್ಪಾ ಎಂದು ಬೇಡಿಕೊಂಡ ಸರ್ಕಾರಿ ಶಿಕ್ಷಕ

ಮೃತರನ್ನು ಪತ್ನಿ ಪಕ್ಕೀರಮ್ಮ (36), ಪತ್ನಿಯ ತಂಗಿ ಗಂಗಮ್ಮ (30), ಮಕ್ಕಳಾದ ಬಸಮ್ಮ (9),  ರಾಜಪ್ಪ(8) ಹಾಗೂ ಪವಿತ್ರ(6) ಹತ್ಯೆಯಾಗಿದ್ದ ದುರ್ದೈವಿಗಳು. ಇನ್ನು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಸ್ಥಳೀಯ ಪೊಲೀಸ್‌ ಠಾಣೆಯಿಂದ ವರದಿ ಸಲ್ಲಿಕೆಯಾಗಿತ್ತು. ಈ ವರದಿ ಪರಿಶೀಲನೆ ಅನ್ವಯ 2019ರ ಡಿಸೆಂಬರ್ 3 ರಂದು ಬಳ್ಳಾರಿ ಸೆಷನ್ಸ್ ನ್ಯಾಯಾಲಯವು ಆರೋಪಿ ತಿಪ್ಪಯ್ಯನಿಗೆ ಮರಣ ದಂಡನೆ ಶಿಕ್ಷೆ ವಿಧಿಸಿತ್ತು. ಆದರೆ, ಮರಣದಂಡನೆಯಲ್ಲಿ ಪ್ರಶ್ನಿಸಿದ ಆರೋಪಿ ತಿಪ್ಪಯ್ಯ ಧಾರವಾಡ ಹೈಕೋರ್ಟ್‍ನ ವಿಶೇಷ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಲಾಗಿದ್ದು, ಬಳ್ಳಾರಿ ಸೆಷೆನ್ಸ್ ನ್ಯಾಯಾಲಯದ ತೀರ್ಪನ್ನೇ ಎತ್ತಿ ಹಿಡಿದ ಧಾರವಾಡ ಹೈಕೋರ್ಟ್ ಮರಣದಂಡನೆ ಶಿಕ್ಷೆಯನ್ನು ಊರ್ಜಿತ ಮಾಡಿದೆ.

ಅನೈತಿಕ ಸಂಬಂಧಕ್ಕಾಗಿ ಪತ್ನಿಯಿಂದಲೇ ಪತಿ ಕೊಲೆ ಆರೋಪ:
ದಾವಣಗೆರೆ (ಜೂ.10): ದಾವಣಗೆರೆ ಜಿಲ್ಲೆ ಬಿಸಲೇರಿ ಗ್ರಾಮದಲ್ಲಿ ಕಳೆದ ರಾತ್ರಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ಸಾವಿಗೀಡಾಗಿದ್ದು, ಪತ್ನಿಯೇ ಪತಿಯನ್ನು ಹತ್ಯೆ ಮಾಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಕಾವ್ಯ ಮತ್ತು ಲಿಂಗರಾಜ್ ಕಳೆದ 5 ವರ್ಷಗಳ ಹಿಂದೆ ಮದುವೆ ಆಗಿ ಒಂದು ಮಗು ಇದೆ. ಆದರೆ, ಕಳೆದ ಒಂದು ವರ್ಷದಿಂದ ಕೌಟುಂಬಿಕ ಕಲಹ ಇತ್ತು. ಕಾವ್ಯಗೆ ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಇತ್ತು. ಇದೇ ಕಾರಣಕ್ಕೆ ಕಾವ್ಯ ಕೆಲ ದಿನಗಳ ಹಿಂದೆ ಪತಿಯನ್ನು ತೊರೆದು ಪ್ರಿಯಕರನ ಜೊತೆ ಓಡಿಹೋಗಿದ್ದಳು. ಮಗುವಿನ ಕಾರಣದಿಂದ ಗ್ರಾಮದ ಹಿರಿಯರು ರಾಜೀ ಪಂಚಾಯತಿ ಮಾಡಿ ಕಾವ್ಯ ಲಿಂಗರಾಜ್ ಒಂದುಗೂಡಿಸಿದ್ದರು. ನಿನ್ನೆ ಮನೆಯಲ್ಲಿ ದೇವರ ಕಾರ್ಯ ಇತ್ತ. ಆದರೆ, ರಾತ್ರಿ ಲಿಂಗರಾಜ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದಾನೆ ಎಂದು ಕುಟುಂಬ ಸದಸ್ಯರು ಆರೋಪ ಮಾಡಿದ್ದಾರೆ.

ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಕಾಲೇಜಿನ ಇಂಜಿನಿಯರಿಂಗ್‌ ವಿದ್ಯಾರ್ಥಿ ಆತ್ಮಹತ್ಯೆ

ಗ್ರಾಮಸ್ಥರಿಂದಲೇ ಮಹಿಳೆ ಮೇಲೆ ದೂರು:  ಲಿಂಗರಾಜ್‌ ಸಾವಿನ ಸುದ್ದಿ ಗ್ರಾಮದಲ್ಲಿ ಗೊತ್ತಾಗುತ್ತಿದ್ದಂತೆಯೇ ಕಾವ್ಯ ಹಾಗು  ಪ್ರಿಯಕರ ಲಿಂಗರಾಜುನನ್ನು ಕೊಲೆ ಮಾಡಿದ್ದಾರೆ ಎಂದು ಗ್ರಾಮಸ್ಥರ ಆರೋಪ ಮಾಡಿದ್ದಾರೆ. ದಾವಣಗೆರೆ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಕೊಲೆ ಪ್ರಕರಣದ ಬಗ್ಗೆ ತೀವ್ರಗೊಂಡ ತನಿಖೆ ಕೈಗೊಂಡಿದ್ದಾರೆ. ಕೊಲೆ ಮಾಡಿದವರನ್ನು ಬಂಧಿಸಲು ದಾವಣಗೆರೆಯ ಶವಗಾರದ ಬಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

Follow Us:
Download App:
  • android
  • ios