Asianet Suvarna News Asianet Suvarna News

ಬಾಲ್ಕನಿಯಿಂದ ದೂಡಿ ಕೊಲೆ: ಕರುಳಬಳ್ಳಿಯನ್ನು ಕೊಂದು ನಾಟಕವಾಡಿದ್ಳಾ ತಾಯಿ?

ವಿಲಾಸಿ ಜೀವನಕ್ಕೆ ವಿಕಲ ಚೇತನ ಮಗು ಅಡ್ಡಿ ಬಂತು ಅಂತ ಕೊಲೆ ಮಾಡಿದ ಪಾಪಿ ತಾಯಿ 

Aug 9, 2022, 12:15 PM IST

ಬೆಂಗಳೂರು(ಆ.09):  ಹೆತ್ತು ಹೊತ್ತ ತಾಯಿಯೇ ಕರುಳ ಬಳ್ಳಿಯನ್ನೇ ಕೊಂದ ಕಥೆಗೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಕೆಟ್ಟ ಮಕ್ಕಳು ಇರಬಹುದು, ಆದರೆ ಕೆಟ್ಟ ತಾಯಿ ಇರಲ್ಲ ಎಂಬ ಮಾತು ಕೂಡು ಸುಳ್ಳಾಗಿದೆ. ತನ್ನ ಕಂದನನ್ನೇ ಕೊಂದು ತಾಯಿ ನಾಟಕವಾಡಿದ್ದಾಳೆ ಅಂತ ಹೇಳಲಾಗುತ್ತಿದೆ. ವಿಲಾಸಿ ಜೀವನಕ್ಕೆ ವಿಕಲ ಚೇತನ ಮಗು ಅಡ್ಡಿ ಬಂತು ಅಂತ ತಾಯಿ ಕೊಲೆ ಮಾಡಿದ್ದಾಳೆ. ಸುಖ ಜೀವನಕ್ಕಾಗಿ ಹೆತ್ತ ಮಗುವನ್ನೇ ಪಾಪಿ ತಾಯಿ ಕೊಂದಿದ್ದಾಳೆ. ಮಗುವನ್ನ ಕೊಂದು ಬೇಕಂತಲೇ ತಾಯಿ ಸುಷ್ಮಾ ಖಿನ್ನತೆಯ ನಾಟಕವಾಡಿದ್ದಾಳೆ ಅಂತ ಹೇಳಲಾಗುತ್ತಿದೆ. ಖಿನ್ನತೆಗೆ ಒಳಗಾದಂತೆ ನಾಟಕ ಮಾಡಿದ್ದ ತಾಯಿಗೆ ಯಾವುದೇ ಖಿನ್ನತೆ ಇರಲಿಲ್ಲ ಅನ್ನೋದು ಕೌನ್ಸಿಲಿಂಗ್‌ನಲ್ಲಿ ಸಾಬೀತಾಗಿದೆ.

Praveen Nettaru Murder: ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಆರೋಪಿಗಳು?