Asianet Suvarna News Asianet Suvarna News

Praveen Nettaru Murder: ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಆರೋಪಿಗಳು?

ಮಸೂದ್‌ ಹತ್ಯೆಯ ಮರುಕ್ಷಣವೇ ಸಿದ್ಧವಾಗಿದ್ದ ಪ್ರತೀಕಾರದ ಪ್ಲ್ಯಾನ್‌

Aug 9, 2022, 11:26 AM IST

ಮಂಗಳೂರು(ಆ.09): ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ. ಪೊಲೀಸರ ವಿಚಾರಣೆ ವೇಳೆ ಸ್ಫೋಟಕ ಸತ್ಯ ಬಯಲಾಗಿದೆ. ಪ್ರವೀಣ್‌ ಹತ್ಯೆಗೆ ಎಚ್ಟು ಬಾರಿ ಸ್ಕೆಚ್‌ ಹಾಕಿದ್ದರು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪ್ರವೀಣ್‌ ಹತ್ಯೆಗೆ ಎರಡು ಬಾರಿ ಪ್ಲ್ಯಾನ್‌ ಮಾಡಲಾಗಿತ್ತಂತೆ, ಮಸೂದ್‌ ಹತ್ಯೆಯ ಮರುಕ್ಷಣವೇ ಪ್ರತೀಕಾರದ ಪ್ಲ್ಯಾನ್‌ ಸಿದ್ಧವಾಗಿತ್ತು, ಜು.19 ರಂದು ಹಲ್ಲೆಗೊಳಗಾಗಿ ಜು.21 ರಂದು ಮಸೂದ್‌ ಮೃತಪಟ್ಟಿದ್ದ. ಜು.22 ರಂದೇ ಪ್ರವೀಣ್‌ ಹತ್ಯೆ ಹೇಗೆ ನಡೆಸಬೇಕೆಂದು ಸ್ಕೆಚ್‌ ಹಾಕಲಾಗಿತ್ತು. ಜು.23 ರಂದು ಕೊಲೆ ಮಾಡಲು ಪ್ರವೀಣ್‌ ಕೋಳಿ ಅಂಗಡಿಗೆ ಹಂತಕರು ಬಂದಿದ್ದರು. ಆದರೆ, ಅಂಗಡಿಯಲ್ಲಿ ಹೆಚ್ಚು ಜನ ಇದ್ದಿದ್ದರಿಂದ ಪ್ರವೀಣ್‌ ಬಚಾವಾಗಿದ್ದರು ಅಂತ ಪೊಲೀಸರು ತನಿಖೆಯಿಂದ ತಿಳಿದು ಬಂದಿದೆ.  

India@75: ಕಾನ್ಪುರದ ಸಿಂಹ ಖ್ಯಾತಿಯ ಪತ್ರಕರ್ತ ಗಣೇಶ ಶಂಕರ ವಿದ್ಯಾರ್ಥಿ ಸಾಹಸಗಾಥೆ