ಹೆಚ್ಚಾಗ್ತಿದೆಯಾ ಮಕ್ಕಳ ಕ್ರೈಂ? ಬಾಲಾಪರಾಧಿಗಳಿಗೆ ಏನು ಶಿಕ್ಷೆ? 6 ಮಕ್ಕಳ ಕ್ರೈಂ..ಒಂದೊಂದು ಪ್ರಕರಣಕ್ಕೂ ರೋಚಕ ತಿರುವು..!

ನಿರ್ಭಯಾದಿಂದ ಪುಣೆ ಪೋರ್ಶೆ ಕಾರು ಅಪಘಾತದವರೆಗಿನ ಕ್ರೈಂ!
ಕಳ್ಳತನ ಪ್ರಶ್ನಿಸಿದ ಸ್ನೇಹಿತನ ಅಕ್ಕನನ್ನೇ ಕೊಂದ 14ರ ಬಾಲಕ..!
ಸಹಪಾಠಿಗೆ 108 ಬಾರಿ ಚುಚ್ಚಿದ್ದ 4ನೇ ಕ್ಲಾಸ್ ವಿದ್ಯಾರ್ಥಿಗಳು..!
 

First Published May 26, 2024, 9:37 AM IST | Last Updated May 26, 2024, 9:37 AM IST

ದೇಶದಲ್ಲಿ ಹೆಚ್ಚಾಯ್ತು ಬಾಲ ಅಪರಾಧ. 14 ವರ್ಷದ ಬಾಲಕ(Minor boy) ತನ್ನ ಸ್ನೇಹಿತನ ಅಕ್ಕನನ್ನೇ(Student Prabuddha) ಕೊಂದ್ರೆ, 17 ವಯಸ್ಸಿನ ಬಾಲಕ ಪೋರ್ಶೆ ಕಾರು(Pune Porsche crash) ಹತ್ತಿಸಿ ಇಬ್ಬರನ್ನು ಕೊಂದಿದ್ದಾನೆ. ಅಲ್ಲದೇ 350 ರೂಪಾಯಿಗಾಗಿ 16 ವರ್ಷದ ಬಾಲಕನೊಬ್ಬ ಯುವಕನನ್ನು 60ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಚುಚ್ಚಿ ಕೊಲೆ(Murder) ಮಾಡಿದ್ದಾನೆ. ಜೊತೆಗೆ ಎಲ್ಲರನ್ನು ಬೆಚ್ಚಿ ಬೀಳಿಸಿದ ಪ್ರಕರಣ ಅಂದ್ರೆ ಅದು 2ನೇ ಕ್ಲಾಸ್ ಮಗು ಸಹಪಾಠಿ ಕತ್ತು ಸೀಳಿ ಕೊಂದಿರುವುದು. ಯಾರೂ ಅಪರಾಧಿಗಳಾಗಿ ಹುಟ್ಟುವುದಿಲ್ಲ. ಆದ್ರೆ ಬೇರೆ ಬೇರೆ ಕಾರಣಗಳು ಅವರನ್ನು ಅಪರಾಧಿಗಳಾಗಿ ಮಾಡಿಬಿಡುತ್ವೆ. ಹೀಗಾಗಿಯೇ ಕಾಲ ಕಳೆದಂತೆ ಜಗತ್ತಿನಾದ್ಯಂತ ಬಾಲ ಅಪರಾಧ(Crime) ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇ ಇದೆ. ಇಬ್ಬರು ಟೆಕ್ಕಿಗಳ ಸಾವಿಗೆ ಕಾರಣವಾದ ಪುಣೆಯ ಪೋರ್ಶೆ ಕಾರು ಅಪಘಾತ ಪ್ರಕರಣವು ಸದ್ಯ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ. ಇದಕ್ಕೆ ಮೊದಲ ಕಾರಣ, ಕಾರು ಚಾಲನೆ ಮಾಡಿದ್ದು, 17 ವರ್ಷದ ಅಪ್ರಾಪ್ತ ಬಾಲಕ ಎಂಬದಾದರೇ, ಎರಡನೇ ಕಾರಣ ಆ ಬಾಲಕನಿಗೆ ನ್ಯಾಯಾಲಯವು ಕೇವಲ 15 ಗಂಟೆಯಲ್ಲಿಯೇ ಜಾಮೀನು ಮಂಜೂರು ಮಾಡಿರುವುದು.

ಇದನ್ನೂ ವೀಕ್ಷಿಸಿ:  ಸಿನಿಮಾ ಇಲ್ಲ..ಪ್ರೇಕ್ಷಕರೂ ಇಲ್ಲ..ಥಿಯೇಟರ್ಸ್ ಬಂದ್..? ರಾಜ್ಯಾದ್ಯಂತ ಬಾಗಿಲು ಮುಚ್ಚಿದ ಟಾಕೀಸ್‌ಗಳೆಷ್ಟು..?