
ಗಂಡ ಇದ್ರು ಗುಟ್ಟಾಗಿ ಸರಸ ಸಲ್ಲಾಪ; ಕಾವಲು ಕಾಯೋಕೆ ನಿಂತ ಗಂಡನಿಗೆ ಚಟ್ಟ ಕಟ್ಟಿದ್ಳು!
ಎರಡನೇ ಮದುವೆಯಾಗಿದ್ದ ಬಾಲಣ್ಣ ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಾನೆ. ಪತ್ನಿ ಮಮತಾ ಮಿಸ್ಸಿಂಗ್ ಕೇಸ್ ದಾಖಲಿಸಿದರೂ, ಗ್ರಾಮಸ್ಥರ ಅನುಮಾನದಿಂದ ಆತನ ಜಮೀನಿನಲ್ಲಿ ಹುಡುಕಾಡಿದಾಗ ಕೊಲೆಯಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗುತ್ತದೆ.
ನಾಲ್ಕು ದಿನ ಏನೂ ಗೊತ್ತಿಲ್ಲದಂತೆ ನಾಟಕವಾಡಿ.. ತಾನೇ ಹೋಗಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದ ಮಮತಾ ಇವತ್ತು ಅಂದರ್ ಆಗಿದ್ದಾಳೆ.. ತನ್ನ ಗಂಡನನ್ನ ತಾನೇ ಕೊಂದು ಮುಗಿಸಿದ್ದಾಳೆ. ಅಷ್ಟಕ್ಕೂ ಮಮತಾ ಇಂತಹ ಕೆಲಸ ಮಾಡಿದ್ದೇಕೆ..? ಆಕೆಯ ಜೊತೆ ಇದ್ದ ಆ ಮೂರ್ತಿ ಯಾರು..?