ಅಕ್ರಮ ಮರಳು ದಂಧೆ ಹಿಂದಿರೋದು ಯಾರು? ರಾತ್ರಿಯಾದ್ರೆ ಜೆಸಿಬಿ,ಟ್ರ್ಯಾಕ್ಟರ್, ಲಾರಿಗಳದ್ದೇ ಸದ್ದು..!

ಭೀಮಾತೀರದಲ್ಲಿ ಅಕ್ರಮ ಮರಳು ದಂಧೆ ಮತ್ತೆ ಶುರುವಾಗಿದೆ. ವಿಜಯಪುರದಲ್ಲಿ ಎಗ್ಗಿಲ್ಲದೆ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ಇದನ್ನು ಪ್ರಶ್ನೆ ಮಾಡಿದ ಪತ್ರಕರ್ತರಿನಿಗೆ ಪೊಲೀಸರು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. 
 

First Published May 29, 2024, 2:15 PM IST | Last Updated May 29, 2024, 2:16 PM IST

ಭೀಮಾತೀರದಲ್ಲಿ (Bheemateera) ಅಕ್ರಮ ಮರಳು ದಂಧೆ (Illegal sand mining) ಮತ್ತೆ ಶುರುವಾಗಿದೆ. ವಿಜಯಪುರದಲ್ಲಿ(Vijayapura) ಎಗ್ಗಿಲ್ಲದೆ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ರಾತ್ರಿಯಾದರೇ ಜೆಸಿಬಿ, ಟ್ರಾಕ್ಟರ್, ಲಾರಿಗಳ ಸದ್ದು ಜೋರಾಗಿದೆ. ಸಿಂದಗಿಯ ಭೀಮಾತೀರದ ಬಗಲೂರು, ಶಂಬೆವಾಡ, ಶಿರಸಗಿ ಸುತ್ತಮುತ್ತ ಎಗ್ಗಿಲ್ಲದೆ ನಡೆಯುತ್ತಿದೆ. ಆದರೆ ಈ ಅಕ್ರಮ ಕಣ್ಣೆದುರಿಗೇ ನಡೆಯುತ್ತಿದ್ರೂ ಪೊಲೀಸರು ಸುಮ್ಮನೆ ಕೂತಿದ್ದಾರೆ ಎನ್ನಲಾಗಿದೆ.

ರಾತ್ರಿ 10 ಗಂಟೆಗೆ ಈ ಅಕ್ರಮ ಮರಳು ದಂಧೆ ಶುರುವಾಗುತ್ತದೆ. ಬೆಳಗ್ಗಿನ ಜಾವ 5 ಗಂಟೆ ವರೆಗೂ ಮರಳು ಸಾಗಾಟ ಪ್ರಕ್ರಿಯೆ ನಡೆಯಲಿದ್ದು, ಬಗಲೂರು, ಶಂಬೆವಾಡಿ, ಶಿರಸಗಿ ಗ್ರಾಮಸ್ಥರುಈ ದಂಧೆಯಿಂದ ಬೇಸತ್ತಿದ್ದಾರೆ. ಇನ್ನು ಈ ಅಕ್ರಮ ಮರಳು ದಂಧೆ ಹಿಂದಿರೋದು ಯಾರು?, ಅಕ್ರಮಕ್ಕೆ‌ ಕುಮ್ಮಕ್ಕು ಕೊಡ್ತಿರೋದು ಯಾರು? ಅನ್ನೋ ಪ್ರಶ್ನೆ ಮಾಡಿದ್ರೆ  ಸಿಂದಗಿ ಪೊಲೀಸರದ್ದೇ ಶ್ರೀರಕ್ಷೆ ಎಂದು ಆರೋಪ ಮಾಡಲಾಗುತ್ತಿದೆ. ಯಾಕೆಂದರೆ ಈ ಅಕ್ರಮ ದಂಧೆಯ ವರದಿ ಮಾಡಿದ ಪತ್ರಕರ್ತನೇ ಕಿಡ್ನಾಪ್ ಮಾಡಿದ್ದಾರೆ. ಸಿಂದಗಿಯ ಸ್ಥಳೀಯ ಪತ್ರಕರ್ತ ಗುಂಡು ಕುಲಕರ್ಣಿ (Gundu Kulkarni) ಕಿಡ್ನಾಪ್ ಆದವರು.

ಸಿಪಿಐ ನಾನಾಗೌಡ ಪಾಟೀಲ್ (CPI Nanagowda Patil), ಸಿಬ್ಬಂದಿ ಸುರೇಶ್ ಕೊಂಡಿಯಿಂದ ಕಿಡ್ನಾಪ್ ಮಾಡಲಾಗಿದೆ ಎನ್ನಲಾಗಿದ್ದು, ಭೀಮಾತೀರದ ಘತ್ತರಗಿ ಬ್ರಿಡ್ಜ್ ಬಳಿ ಕರೆದೊಯ್ದು ಬೆದರಿಕೆ ಹಾಕಿದ್ದಾರೆ. ಅಲ್ಲದೆ ಹಣೆಗೆ ಬಂದೂಕಿಟ್ಟು ಸಿಪಿಐ ನಾನಾಗೌಡ ಪಾಟೀಲ್ ಬೆದರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ವೀಕ್ಷಿಸಿ:  ಲೋಕಸಭಾ ಮಹಾ ಸಂಗ್ರಮದಲ್ಲಿ ಈ ಬಾರಿ ಯಾರಿಗೆ ಗೆಲುವು? ಈ ಪಕ್ಷ ಇಷ್ಟೇ ಸ್ಥಾನ ಗೆಲ್ಲಲಿದೆ ಎಂದ ಸಟ್ಟಾ ಬಜಾರ್!