ಲೋಕಸಭಾ ಮಹಾ ಸಂಗ್ರಮದಲ್ಲಿ ಈ ಬಾರಿ ಯಾರಿಗೆ ಗೆಲುವು? ಈ ಪಕ್ಷ ಇಷ್ಟೇ ಸ್ಥಾನ ಗೆಲ್ಲಲಿದೆ ಎಂದ ಸಟ್ಟಾ ಬಜಾರ್!

ಬಿಜೆಪಿ ಮತ್ತೆ ಅಧಿಕಾರಕ್ಕೆ ಏರಲಿದೆ ಎಂದು ಭವಿಷ್ಯ 
303-306 ಸ್ಥಾನ ಬಿಜೆಪಿ ಗಳಿಸಲಿದೆ ಎಂದು ಭವಿಷ್ಯ
ಕಾಂಗ್ರೆಸ್ 50 ಸ್ಥಾನ ಗೆಲ್ಲಲಿದೆ ಎಂದ ಸಟ್ಟಾ ಬಜಾರ್
 

Share this Video
  • FB
  • Linkdin
  • Whatsapp

ಲೋಕಸಭಾ ಚುನಾವಣೆಗೆ(Lok Sabha elections 2024) ಸಂಬಂಧಿಸಿದಂತೆ ಸಟ್ಟಾ ಬಜಾರ್‌ ಭವಿಷ್ಯವನ್ನು(Satta bazaar prediction) ನುಡಿದಿದ್ದು, ಈ ಪಕ್ಷ ಇಷ್ಟೇ ಸ್ಥಾನ ಗೆಲ್ಲಲಿದೆ ಎಂದು ಹೇಳಿದೆ. ರಾಜಕೀಯ ಪಕ್ಷಗಳ ಬಲಾಬಲವನ್ನು ಬೆಟ್ಟಿಂಗ್ ದುನಿಯಾ ಅಂದಾಜಿಸಿದೆ. ಈಗಾಗಲೇ ಬಹುತೇಕ ಲೋಕಸಭಾ ಸಂಗ್ರಾಮ ಮುಗಿದಿದ್ದು, ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷ ಎಷ್ಟು ಸ್ಥಾನ ಗೆಲ್ಲುತ್ತೆ? ಎಂಬುದರ ಬಗ್ಗೆ ಸಟ್ಟಾ ಬಜಾರ್‌ ಹೇಳಿದೆ. ಬಿಜೆಪಿ(BJP) ಮತ್ತೆ ಅಧಿಕಾರಕ್ಕೆ ಏರಲಿದೆ ಎಂದು ಭವಿಷ್ಯ ನುಡಿದಿದ್ದು, 303-306 ಸ್ಥಾನ ಬಿಜೆಪಿ ಗಳಿಸಲಿದೆಯಂತೆ. ಕಾಂಗ್ರೆಸ್(Congress) 50 ಸ್ಥಾನ ಗೆಲ್ಲಲಿದೆ ಎಂದು ಸಟ್ಟಾ ಬಜಾರ್ ಹೇಳಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ನಿಖರ ಫಲಿತಾಂಶ ಭವಿಷ್ಯವನ್ನು ಸಟ್ಟಾ ಬಜಾರ್‌ ನುಡಿದಿತ್ತು. ಕಾಂಗ್ರೆಸ್ 137 ಸ್ಥಾನ ಗೆಲ್ಲಲಿದೆ ಎಂದಿದ್ದ ಫಲೋಡಿ ಸಟ್ಟಾ ಬಜಾರ್. ಬಿಜೆಪಿ 55 ಸ್ಥಾನ ಗೆಲ್ಲಲಿದೆ ಎಂದು ಭವಿಷ್ಯ ಹೇಳಿದ್ದ ಸಟ್ಟಾ ಬಜಾರ್.

ಇದನ್ನೂ ವೀಕ್ಷಿಸಿ: ಕಾಂಗ್ರೆಸ್‌ನಲ್ಲಿ ವಿಧಾನ ಪರಿಷತ್ ಸ್ಥಾನಕ್ಕಾಗಿ ತೀವ್ರ ಪೈಪೋಟಿ: ಹೈಕಮಾಂಡ್ ಮಾನದಂಡ ಏನು..?

Related Video