Asianet Suvarna News Asianet Suvarna News

ದೇವರ ಹೆಸರಿನಲ್ಲಿ ಕಂಟ್ರಿ ಸಾರಾಯಿ ಮಾರಾಟ: ಗಲ್ಲಿ ಗಲ್ಲಿಯಲ್ಲಿ ಕಳ್ಳಬಟ್ಟಿಯದ್ದೇ ಸಾಮ್ರಾಜ್ಯ !

ಕಾಲಜ್ಞಾನಿ ಬಬಲಾದಿ ಮಠದ ಸದಾಶಿವ ಅಜ್ಜನಿಗೆ ಮದ್ಯ ನೈವೇದ್ಯ ಮಾಡುವ ನೆಪದಲ್ಲಿ ಕಳ್ಳಬಟ್ಟಿ ದಂಧೆ ನಡೆಸಲಾಗುತ್ತಿದೆ.
 

First Published Jun 24, 2023, 11:11 AM IST | Last Updated Jun 24, 2023, 11:11 AM IST

ದೇವರ ಹೆಸರಿನಲ್ಲಿ ಕಳಬಟ್ಟಿ ದಂಧೆ ನಡೆಸಲಾಗುತ್ತಿದೆ. ಗಲ್ಲಿ ಗಲ್ಲಿಯಲ್ಲೂ ಕಳಬಟ್ಟಿಯನ್ನೂ ಸರಬರಾಜು ಮಾಡಲಾಗುತ್ತಿದೆ. ದೇವರ ಪೂಜೆಗೆಂದು ಹೇಳಿ, ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ. ಈ ಮೂಲಕ ದೇವರ ಹೆಸರಿನಲ್ಲಿ ಮದ್ಯದ ದಂಧೆ ನಡೆಯುತ್ತಿದೆ. ಕಾಲಜ್ಞಾನಿ ಬಬಲಾದಿ ಮಠದ ಸದಾಶಿವ ಅಜ್ಜನಿಗೆ ನೈವೇದ್ಯ ಮಾಡಬೇಕು ಎಂದು ಹೇಳಿ ಕಳ್ಳಬಟ್ಟಿ ದಂಧೆ ನಡೆಸಲಾಗುತ್ತಿದೆ. ಈ ಅಕ್ರಮ ದಂಧೆಯನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಕವರ್‌ ಸ್ಟೋರಿ ತಂಡ ಬಯಲಿಗೆಳೆದಿದೆ. ಇದಕ್ಕೆ ಶಾಲಾ ಮಕ್ಕಳನ್ನು ಬಳಕೆ ಮಾಡಿಕೊಂಡು, ಹೊರ ರಾಜ್ಯಗಳಿಗೆ ಕಳ್ಳಬಟ್ಟಿಯನ್ನು ಮಾರಾಟ ಮಾಡಲಾಗುತ್ತಿತ್ತು. ಶ್ರೀಮಠದ ವಿರೋಧದ ನಡುವೆಯೂ ಇಲ್ಲಿ ಮದ್ಯವನ್ನು ಮಾರಾಟ ಮಾಡಲಾಗುತ್ತಿತ್ತು. ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಹೊಳೆ ಬಬಲಾದಿ ಎಂಬ ಗ್ರಾಮದಲ್ಲಿ ಈ ಮಠ ಇದೆ.

ಇದನ್ನೂ ವೀಕ್ಷಿಸಿ: ದೇವರ ಗುಡಿಗೆ ಇನ್ಮುಂದೆ ರೈತ ಬೆಳೆದ ಬೆಳೆ: ಪ್ರಸಾದ, ನೈವೇದ್ಯಕ್ಕೆ ಹಾಪ್‌ ಕಾಮ್ಸ್‌ ಹಣ್ಣು, ತರಕಾರಿ !

Video Top Stories