
ದೇವರ ಗುಡಿಗೆ ಇನ್ಮುಂದೆ ರೈತ ಬೆಳೆದ ಬೆಳೆ: ಪ್ರಸಾದ, ನೈವೇದ್ಯಕ್ಕೆ ಹಾಪ್ ಕಾಮ್ಸ್ ಹಣ್ಣು, ತರಕಾರಿ !
ರೈತರು ಬೆಳೆದ ಹಣ್ಣು ಮತ್ತು ತರಕಾರಿ ಇನ್ಮುಂದೆ ದೇವರ ಸನ್ನಿಧಾನ ತಲುಪಲಿದೆ. ಹೌದು, ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಲ್ಲಿ ಹಾಪ್ ಕಾಮ್ಸ್‌ನಿಂದ ಹಣ್ಣು, ತರಕಾರಿ ಖರೀದಿಸುವಂತೆ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.
ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಲ್ಲಿ ಪ್ರಸಾದ ಮತ್ತು ನೈವೇದ್ಯಕ್ಕೆ ಇನ್ಮುಂದೆ ಹಾಪ್ ಕಾಮ್ಸ್ ಹಣ್ಣು ಮತ್ತು ತರಕಾರಿ ಬಳಸುವಂತೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ. ಈ ಸಂಬಂಧ ಆದೇಶ ಹೊರಡಿಸಲು ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ. ಹಾಪ್ ಕಾಮ್ಸ್ ಸರ್ಕಾರಿ ಸಂಸ್ಥೆಯಾಗಿದ್ದು, ಇಲ್ಲಿಂದ ಜನ ಹಣ್ಣು, ಹೂ ಖರೀದಿಸುವುದರಿಂದ ರೈತರಿಗೆ ಲಾಭ ಆಗಲಿದೆ. ಈ ಬಗ್ಗೆ ದೇವಸ್ಥಾನಗಳಿಗೂ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: ಸರ್ಕಾರಿ ಕಚೇರಿಗಳಲ್ಲಿ ಕೆಲಸಕ್ಕೆ ಅಧಿಕಾರಿಗಳೇ ಇಲ್ಲ: 2.58 ಲಕ್ಷಕ್ಕೂ ಹೆಚ್ಚು ಹುದ್ದೆ ಖಾಲಿ, ಭರ್ತಿ ಯಾವಾಗ ?