Crime News: ಹೆಂಡತಿಯನ್ನ ಕೊಂದು..ಮಗುವನ್ನ ಎಸೆದು ಮನೆಗೆ ಬಂದಿದ್ದ..! ಹುಟ್ಟಿಸಿದ ಅಪ್ಪನಿಗೆ ಮಗು ಬೇಡವಾಗಿದ್ದೇಕೆ ?

ಹೆಂಡತಿ ಮಕ್ಕಳಿದ್ದರೂ ಮತ್ತೊಬ್ಬಳ ಸಹವಾಸ ಮಾಡಿದ್ದ..!
ಅವನಿಂದ ಮಗು ಪಡೆದವಳು ಮದುವೆಯಾಗು ಅಂದಿದ್ದಳು.!
ಪ್ರೀತಿಸಿದವಳಿಗೆ ಬೆಂಕಿ ಇಟ್ಟು ಮಗುವನ್ನ ಎಸೆದು ಹೋಗಿದ್ದ..!

Share this Video
  • FB
  • Linkdin
  • Whatsapp

ಅವಳು ಬಡ ಕುಟುಂಬದ ಹೆಣ್ಣು ಮಗಳು. 10ನೇ ಕ್ಲಾಸ್ ಮುಗಿಸಿ ಕುಟುಂಬಕ್ಕೆ ನೆರವಾಗಲಿ ಅಂತ ಕೆಲಸಕ್ಕೆ ಸೇರಿದ್ದಳು. ಆವತ್ತೊಂದು ದಿನ ಕೆಲಸಕ್ಕೆ ಅಂತ ಮನೆಯಿಂದ ಹೋದವಳು ವಾಪಸ್ ಬರಲೇ ಇಲ್ಲ. ಎಲ್ಲಿ ಹುಡುಕಾಡಿದ್ರೂ ಅವಳ ಸುಳಿವು ಸಿಗದಿದ್ದಾಗ ಮಿಸ್ಸಿಂಗ್(Missing) ಕಂಪ್ಲೆಂಟ್ ಕೊಟ್ಟರು. ಆದ್ರೂ ಆ ಯುವತಿ 2 ತಿಂಗಳಾದ್ರೂ ಪತ್ತೆಯಾಗಲೇ ಇಲ್ಲ. ಆದ್ರೆ 2 ತಿಂಗಳ ನಂತರ ಆಕೆ ಹೆಣವಾಗಿ(Murder) ಸಿಕ್ಕಿದ್ಲು. ಆಕೆಯನ್ನ ಯಾರೋ ಉಸಿರುಗಟ್ಟಿಸಿ ಕೊಂದು ನಂತರ ಪೆಟ್ರೋಲ್ ಹಾಕಿ ಸುಟ್ಟಿಬಿಟ್ಟಿದ್ದರು. ಹುಟ್ಟಿಸಿದವನೇ ಒಂದು ತಿಂಗಳ ಹಸುಗೂಸನ್ನ ಎಸೆದಿದ್ದ ಹೆಂಡತಿಯನ್ನ ಸುಟ್ಟಿದ್ದಾನೆ ಅಂದ್ರೆ ಯಾವುದೇ ಆಶ್ಚರ್ಯವಿಲ್ಲ. ಒಟ್ಟಿಗೆ ಕೆಲಸ ಮಾಡುವಾಗ ಪರಿಚಯವಾದವರು ಪ್ರೀತಿಯಲ್ಲಿ ಬಿದ್ದಿದ್ರು. ಆದ್ರೆ ಅವನಿಗೆ ಅದಾಗಲೇ ಮದುವೆಯಾಗಿ ಮಗು ಕೂಡ ಇತ್ತು. ಆದ್ರೂ ರುಕ್ಸಾನಾಳನ್ನ ತಲೆಕೆಡಿಸಿ ಅವಳನ್ನ ಗರ್ಭಿಣಿ ಮಾಡಿದ್ದ. 8 ತಿಂಗಳ ಗರ್ಭಿಣಿಯಾದ್ರೂ ರುಕ್ಸಾನಾ ಕುಟುಂಬಕ್ಕೆ ವಿಷಯವೇ ಗೊತ್ತಿರಲಿಲ್ಲ. ಆದರೆ ಇನ್ನೇನು ಡೆಲಿವರಿ ಡೇಟ್ ಹತ್ತಿರ ಬಂತೋ ಆಕೆ ಮದುವೆಯಾಗಲು ದುಂಬಾಲು ಬಿದ್ದಳು. ಬೇರೆ ದಾರಿ ಕಾಣದೆ ಆತ ದೂರದ ಊರಲ್ಲಿ ಮನೆ ಮಾಡಿ ಇಟ್ಟಿದ್ದ. ಆದ್ರೆ ಮಗು(Child) ಆದ ನಂತರ ರುಕ್ಸಾನ ಅವನಿಗೆ ಬೇಡವಾದಳು. ಅವಳನ್ನ ಮುಗಿಸೋ ನಿರ್ಧಾರ ಮಾಡಿದ. ಬೆಂಗಳೂರಿಗೆ(Bengaluru) ಹೋಗೋಣ ಅಂತ ಹೇಳಿ ಮಾರ್ಗ ಮಧ್ಯೆಯೇ ಅವಳ ಕಥೆ ಮುಗಿಸಿ ಮಗುವನ್ನೂ ಎಸೆದು ಎಸ್ಕೇಪ್ ಆಗಿದ್ದ. ಆದ್ರೆ ಇದ್ಯಾವುದೂ ಗೊತ್ತಿರದೇ ರಕ್ಸಾನಾ ಕುಟುಂಬದವರು ಮಿಸ್ಸಿಂಗ್ ಕೇಸ್ ದಾಖಲಿಸಿದ್ರು. ಆದ್ರೆ ಈಗ ಇದ್ದೊಬ್ಬಳನ್ನ ಕಳೆದುಕೊಂಡು ಕಂಗಾಲಾಗಿದ್ದಾರೆ. ಮದುವೆಯಾದರೂ ಲವ್ ಮಾಡಿ ಹಿಂದೆ ಬಿದ್ದು ರುಕ್ಸಾನ ಹುಚ್ಚು ಪ್ರೀತಿಗೆ ಪ್ರೀಯಕರಿನಿಂದ ಕೊಲೆಯಾಗಿದ್ದಾಳೆ. 

ಇದನ್ನೂ ವೀಕ್ಷಿಸಿ:  Sadananda Gowda on Vokkaliga: ಟೇಕನ್ ಫಾರ್ ಗ್ರ್ಯಾಂಟೆಡ್ ರೀತಿಯಲ್ಲಿ ಒಕ್ಕಲಿಗರನ್ನು ನಡೆಸಿಕೊಳ್ತಿದ್ದಾರೆ: ಸದಾನಂದಗೌಡ

Related Video