Asianet Suvarna News Asianet Suvarna News

Sadananda Gowda on Vokkaliga: ಟೇಕನ್ ಫಾರ್ ಗ್ರ್ಯಾಂಟೆಡ್ ರೀತಿಯಲ್ಲಿ ಒಕ್ಕಲಿಗರನ್ನು ನಡೆಸಿಕೊಳ್ತಿದ್ದಾರೆ: ಸದಾನಂದಗೌಡ

ಯಾವುದೇ ರಾಜಕೀಯದಲ್ಲಿ ತೊಡಗಿಸಿಕೊಳ್ಳದೇ, ಅದ್ಬುತ ಮಠ ಚುನಾವಣೆ ಸಂದರ್ಭದಲ್ಲಿ ಚರ್ಚೆಗೆ ಬಂದಿದ್ದು ನೋವಿನ ಸಂಗತಿ ಎಂದು ಸಂಸದ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
 

ಸುಮಾರು ನಾಲ್ಕೈದು ದಿನಗಳಿಂದ ಒಕ್ಕಲಿಗರ(Vokkaligas) ಬಗ್ಗೆ ಬಹಳ ದೊಡ್ಡ ಚರ್ಚೆ ನಡೀತಿದೆ. ಒಕ್ಕಲಿಗರ‌ ಮಠದ ಬಗ್ಗೆ ಚರ್ಚೆ ಆಗ್ತಿರುವುದು ಬೇಸರ ಸಂಗತಿಯಾಗಿದೆ. ಯಾವುದೇ ರಾಜಕೀಯದಲ್ಲಿ ತೊಡಗಿಸಿಕೊಳ್ಳದೇ, ಅದ್ಬುತ ಮಠ ಚುನಾವಣೆ ಸಂದರ್ಭದಲ್ಲಿ ಚರ್ಚೆಗೆ ಬಂದಿದ್ದು ನೋವಿನ ಸಂಗತಿ ಎಂದು ಸಂಸದ ಡಿ.ವಿ.ಸದಾನಂದಗೌಡ(DV Sadananda Gowda) ಹೇಳಿದ್ದಾರೆ. ಒಕ್ಕಲಿಗ ಸಮುದಾಯದ ಬಗ್ಗೆ ಯಾರೇ ಮಾತನಾಡಿದ್ರು ತಪ್ಪು. ನಾನು ಇದನ್ನು ಸುತಾರಂ ಒಪ್ಪುವುದಿಲ್ಲ. ನಾನು ಸಮುದಾಯದ ವ್ಯಕ್ತಿಯಾಗಿ ಒಪ್ಪುವುದಿಲ್ಲ. ದಕ್ಷಿಣ ಕರ್ನಾಟಕದ ಸುಮಾರು 10 ಜಿಲ್ಲೆಯಲ್ಲಿ ತನ್ನದೇ ಆದ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಪ್ರಧಾನ ಮಂತ್ರಿ ಆಗಿದ್ದಾರೆ, ಮಂತ್ರಿಗಳಾಗಿದ್ದಾರೆ. ಯಾವುದೇ ರಾಜಕಾರಣಿ ಕೆಂಪೇಗೌಡರ ಹೆಸರು ಹೇಳದೇ ರಾಜಕಾರಣ ಮಾಡಲ್ಲ. ಆದಿಚುಂಚನಗಿರಿ ಮಹಾಸಂಸ್ಥಾನದ(Adichunchanagiri math) ಬಗ್ಗೆ ಮಾತನಾಡಲು ಯಾರಿಗೂ ಹಕ್ಕಿಲ್ಲ. ಸದಾನಂದಗೌಡರೇ‌ ನೀವು ಯಾಕ್ ಮಾತಾಡ್ತಿಲ್ಲ ಅಂತ ನನ್ನ ಕೇಳಿದ್ರು. ಒಂದು ವರ್ಷದ ಆಡಳಿತದಲ್ಲಿ ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಇದು ನಮ್ಮ‌ ಒಕ್ಕಲಿಗರ ಸಮುದಾಯಕ್ಕೆ ಗೌರವವಿದೆ. ಬಾಲಗಂಗಾಧರ ಸ್ವಾಮೀಜಿ(Balgangadhar Nath Swamiji) ಅವರು ಹಿಂದೆ ಯಾವುದೇ ಸಮುದಾಯದಕ್ಕೆ ಸೀಮಿತ ಆಗಿರಲಿಲ್ಲ. ಒಕ್ಕಲಿಗರು ಸ್ವಾಭಿಮಾನಿಯಾಗಿ ನಿಲ್ಲಬೇಕು ಎಂದು ಹೇಳಿದರು.

ಮೊನ್ನೆ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ವಿಚಾರವಾಗಿ ಮಾತನಾಡಿದ ಅವರು, ಬನ್ನಿ ಅಂತ ನನಗೆ ಆಹ್ವಾನ ಇರಲಿಲ್ಲ. ನಾನು ಹೋದರೆ ಅಲ್ಲಿ ಏನಾದರೂ ಹೇಳ್ತಿದ್ನೇನೋ. ನನಗೆ ಬೇಸರ ಇರುವುದು ಎಲ್ಲಾ ಪಕ್ಷದ ನಾಯಕರ ಮೇಲೆ. ಟೇಕನ್ ಫಾರ್ ಗ್ರ್ಯಾಂಟೆಡ್ ರೀತಿಯಲ್ಲಿ ಒಕ್ಕಲಿಗರನ್ನು ನಡೆಸಿಕೊಳ್ತಿದ್ದಾರೆ. ಒಂದು ವರ್ಷ ಆಯ್ತಲ್ವಾ? ಏನ್ ಮಾಡ್ತಿದ್ದಾರೆ? ಒಕ್ಕಲಿಗರ ಮೇಲೆ ಆರೋಪ ಮಾಡಿದವರು ಸಮಾಜದ್ರೋಹಿಗಳು ಎಂದರು ಯಡಿಯೂರಪ್ಪ ಒಕ್ಕಲಿಗ ಸಮುದಾಯಕ್ಕೆ ಮೋಸ ಮಾಡಿದ್ದಾರೆ ಎಂಬ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಾನು ಇವತ್ತು ಮಾತಾಡಿದ್ರೆ, ಸದಾನಂದಗೌಡರಿಗೆ ಟಿಕೆಟ್ ಸಿಗದಿದಕ್ಕೆ ಮಾತಾಡಿದ್ರು ಅಂತಾರೆ. ಆದರೆ ಇವತ್ತು ನನ್ನ ಸಮುದಾಯ ಹಾಗೂ ಮಠದ ಮೇಲೆ ಆರೋಪ ಮಾಡಿದ್ರೆ ನಾನು ಸುಮ್ಮನೆ ಇರಲ್ಲ. ಮಾತಾಡಲೇ ಬೇಕು‌ ಅಂತ ಬಂದೆ ಎಂದು ಸದಾನಂದಗೌಡ ಹೇಳಿದರು.

Video Top Stories