ಪ್ರಿಯಕರನೊಂದಿಗೆ ಸರಸಕ್ಕೆ ಅಡ್ಡಿಯಾಗಿದ್ದ ಗಂಡನ ಮರ್ಡರ್: ಕೊಲೆ ಮಾಡಿ ನಾಟಕ ಮಾಡಿದ್ದಳು ದಿಲ್ಲಿ ರಾಣಿ
ಮನೆಯ ಮಗ ಕೊಟ್ಟ ಒಂದು ಹೇಳಿಕೆಯಿಂದ ದಿಲ್ಲಿರಾಣಿಯ ನಿಜ ಬಣ್ಣ ಬಯಲಾಗಿತ್ತು. ಆದ್ರೆ ಗಂಡನನ್ನೇ ಕೊಲ್ಲುವ ಮನಸ್ಸು ಯಾಕೆ ಮಾಡಿದೆ ಅಂದ್ರೆ ಆಕೆ ಕೊಟ್ಟಿದ್ದು ಬಾಯ್ ಫ್ರೆಂಡ್ ರೀಸನ್.
ಬೆಂಗಳೂರು (ಮೇ. 3): ನಮ್ಮ ದೇಶದಲ್ಲಿ ಹೇಗೆಲ್ಲಾ ಕ್ರೈಂ (Crime)ನಡೆಯುತ್ತೆ ಅನ್ನೋದನ್ನ ವಿಶೇಷವಾಗಿ ಹೇಳಬೇಕಾಗಿಲ್ಲ. ಅದರೆ, ಈ ಕಥೆ, ಈ ಮರ್ಡರ್ ಡಿಫರೆಂಟ್. ಇದರ ಇನ್ವೆಷ್ಟಿಗೇಷನ್ ರೋಚಕ. ಈ ಸ್ಟೋರಿ ನೋಡಿದ ಮೇಲೆ ನೀವೇ ಜಗತ್ತಿನಲ್ಲಿ ಇಂಥವರೂ ಇದ್ದಾರಾ ಅಂತ ಖಂಡಿತ ಬೇಸರ ಪಟ್ಟುಕೊಳ್ತೀರಿ.
ಕೊಲೆಯಾಗಿದ್ದ ಮನೆಯಲ್ಲೇ ರೂಮ್ ನಲ್ಲಿ ಮಲಗಿದ್ದ 6 ವರ್ಷದ ಮಗ, ಕೇಸ್ ಗೆ ಬಿಗ್ ಟ್ವಿಸ್ಟ್ ಕೊಟ್ಟುಬಿಟ್ಟಿದ್ದ. ದಿಲ್ಲಿರಾಣಿ ಮೇಲಿನ ಅನುಮಾನದಿಂದಲೇ ಆಕೆಯ ಮಗನನ್ನ ಪ್ರಶ್ನಿಸಿದ್ದ ಪೊಲೀಸರಿಗೆ ಶಾಕಿಂಗ್ ಉತ್ತರ ಸಿಕ್ಕಿತ್ತು. ಅಷ್ಟಕ್ಕೂ ಆ ಹುಡುಗ ಕೊಟ್ಟ ಹೇಳಿಕೆ ಏನಾಗಿತ್ತು..?
ಆರಂಭದಲ್ಲಿ ಮರ್ಡರ್ ಫಾರ್ ಗೇನ್ ಅಂತಲೇ ಅಂದುಕೊಂಡಿದ್ದ ಪೊಲೀಸರಿಗೆ (Police) ಸ್ಪಾಟ್ ನೋಡಿದ ಮೇಲೆ ಕೊಂಚ ಅನುಮಾನ ಬರೋದಕ್ಕೆ ಶುರುವಾಗಿತ್ತು. ಹೆಂಡತಿ (Wife) ಕೊಟ್ಟ ಮೊದಲ ಹೇಳಿಕೆಯೂ ಯಾಕೋ ಪೊಲೀಸರಿಗೆ ಸಮಂಜಸ ಅಂತ ಅನಿಸಿರಲಿಲ್ಲ, ಇನ್ನೂ ಅಕ್ಕಪಕ್ಕದ ಮನೆಯವರು ಮೊದಲು ನೋಡಿದ್ದು ಅವರ ಮಗನೇ ಅಂದಿದ್ದರಿಂದ ಮಗುವಿಗೆ ನೈಸಾಗಿ ಪ್ರಶ್ನೆಗಳನ್ನ ಹಾಕಿದ್ದಾರೆ.
ಪ್ರಿಯಕರನೊಂದಿಗೆ ಸರಸಕ್ಕೆ ಅಡ್ಡಿಯಾಗಿದ್ದ ಗಂಡನನ್ನ ಪತ್ನಿ ಮಾಡಿದ್ದು... ಅಬ್ಬಬ್ಬಾ...!
ಬೆಂಗಳೂರಿಗೆ ಬರುವಾಗ್ಲೇ ದಿಲ್ಲಿ ರಾಣಿ ಒಂದು ನಿರ್ಧಾರ ಮಾಡಿಬಿಟ್ಟಿದ್ಲು. ತನ್ನ ಬಾಯ್ ಫ್ರೆಂಡ್ ಬಳಿ ಒಂದು ಮಾತು ಪಡೆದು ಗಂಡನ ಜೊತೆ ಯಶವಂತಪುರಕ್ಕೆ ಬಂದುಬಿಟ್ಟಿದ್ಲು. ಅಷ್ಟಕ್ಕೂ ಬೆಂಗಳೂರಿಗೆ ಬರೋದಕ್ಕೂ ಮುನ್ನ ಆಕೆ ತೆಗೆದುಕೊಂಡಿದ್ದ ಆ ನಿರ್ಧಾರ ಏನು..? ಘಟನೆಯ ದಿನ ಆ ಮನೆಯಲ್ಲಿ ನಡೆದಿದ್ದೇನು..?