* ಪ್ರಿಯಕರನೊಂದಿಗೆ ಸರಸಕ್ಕೆ ಅಡ್ಡಿಯಾದ ಗಂಡನನ್ನ ಕೊಂದ ಪತ್ನಿ* ಗಂಡನನ್ನೇ ಕೊಂದು ಕತೆ ಕಟ್ಟಿದ್ದ ಹೆಂಡ್ತಿ ಅರೆಸ್ಟ್* ಪೊಲೀಸ್ ತನಿಖೆ ವೇಳೆ ಡೆಲ್ಲಿರಾಣಿ ಬಣ್ಣ ಬಯಲು
ಕಿರಣ್ ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್.ಬೆಂಗಳೂರು
ಬೆಂಗಳೂರು, (ಏ.30): ಪ್ರಿಯಕರನೊಂದಿಗೆ ಸರಸ ಸಲ್ಲಾಪಕ್ಕೆ ಅಡ್ಡಿಯಾಗುತ್ತಾನೆಂದು ಪತಿಯನ್ನೇ ಕೊಂದು ನಾಟಕವಾಡಿದ್ದ ಪತ್ನಿಯನ್ನು ಬೆಂಗಳೂರಿನ ಯಶವಂಪುರ ಪೊಲೀಸರು ಬಂಧಿಸಿದ್ದಾರೆ.
ಪತಿ ಶಂಕರ್ ರೆಡ್ಡಿ ಪತ್ನಿಯಿಂದಲೇ ಕೊಲೆಯಾದ ದುರ್ದೈವಿಯಾಗಿದ್ದು, ಪತಿಯನ್ನು ಕೊಲೆ ಮಾಡಿದ್ದ ಪತ್ನಿ ಡಿಲ್ಲಿರಾಣಿಯನ್ನು ಪೊಲೀಸರು ಬಂಧಿಸಿದ್ದಾರೆ. ಯಶವಂತಪುರ ಠಾಣಾ ವ್ಯಾಪ್ತಿಗೆ ಬರೋ ಜೆ.ಪಿ ಪಾರ್ಕ್ ಮುಖ್ಯರಸ್ತೆಯಲ್ಲಿ ಘಟನೆ ನಡೆದಿತ್ತು.
ವೃತ್ತಿಯಲ್ಲಿ ಅಕೌಂಟೆಂಟ್ ಆಗಿದ್ದ ಶಂಕರ್ ರೆಡ್ಡಿ, ಆಂಧ್ರ ಪ್ರದೇಶದ ಚಿತ್ತೂರು ಮೂಲದ ಪತ್ನಿಯೊಂದಿಗೆ ಯಶವಂತಪುರದ ಮೋಹನ್ ಕುಮಾರ್ ನಗರದಲ್ಲಿ ನೆಲೆಸಿದ್ದರು. ಆದರೆ ಏ.28ರ ರಾತ್ರಿ ಶಂಕರ್ ರೆಡ್ಡಿಯನ್ನು ಕೊಲೆ ಮಾಡಲಾಗಿತ್ತು. ಇದೇ ವೇಳೆ ಪತ್ನಿ ಡಿಲ್ಲಿರಾಣಿ ಕೂಡ ಪತಿಯ ಮೃತದೇಹದ ಪಕ್ಕದಲ್ಲೇ ಮಲಗಿ ಸತ್ತು ಹೋದವಳಂತೆ ನಾಟಕ ಮಾಡಿದ್ದಳಂತೆ. ಕೊಲೆ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಡಿಲ್ಲಿರಾಣಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.
ಅತ್ಯಾಚಾರಕ್ಕೆ ಯತ್ನಿಸಿ 10 ವರ್ಷದ ಬಾಲಕಿಯ ಕೊಲೆ: 14 ರ ಬಾಲಕ ಆರೋಪಿ
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸ್ರಿಗೆ ಆಶ್ಚರ್ಯಕರ ವಿಚಾರ ಗೊತ್ತಾಗಿದ್ದು.. ಗಂಡನನ್ನ ಹೆಂಡ್ತಿ ರಾಣಿ ಎಂಬಾಕೆಯೇ 28ನೇ ತಾರೀಕು ರಾತ್ರಿ ತನ್ನ ಕೈಯ್ಯಾರ ಚೂರಿಯಿಂದ ಇರಿದು ಕೊಲೆ ಮಾಡಿದ್ಳು ಅನ್ನೋದು ಗೊತ್ತಾಗಿದೆ. ಕಾರಣ ಆಕೆಗೆ ತನ್ನೂರಿನ ಓರ್ವ ವ್ಯಕ್ತಿ ಜೊತೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ.
ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದರು. ಪತ್ನಿಯನ್ನು ವಿಚಾರಣೆ ನಡೆಸಿದ ವೇಳೆ ಯಾರೋ ದುಷ್ಕರ್ಮಿಗಳು ಮನೆಗೆ ನುಗ್ಗಿ ಪತಿಯನ್ನ ಹತ್ಯೆಗೈದ್ರು. ನನ್ನ ಚಿನ್ನದ ಸರವನ್ನ ಕಿತ್ತುಕೊಂಡು ಪರಾರಿಯಾದ್ರು ಅಂತ ಹೇಳಿದ್ದಳು. ಅಲ್ಲದೇ ತಾನೂ ಕೈಗೆ ಚಾಕು ಇರಿದುಕೊಂಡು ರಕ್ತ ಬಂದಂತೆ ನಟಿಸಿದ್ದಳು.
ಆದರೆ ಘಟನಾ ಸ್ಥಳಕ್ಕೆ ಶ್ವಾನದಳವನ್ನು ಕರೆತಂದ ವೇಳೆ ಶ್ವಾನಗಳು ಘಟನಾ ಸ್ಥಳದಿಂದ ಆ್ಯಂಬುಲೆನ್ಸ್ ಬಂದಿದ್ದ ಸ್ಥಳದವರೆಗೂ ಮಾತ್ರ ಹಿಂಬಾಲಿಸಿದ್ದವು. ಅಲ್ಲದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಡಿಲ್ಲಿರಾಣಿ ದೇಹ ಮೇಲೆ ಯಾವುದೇ ಗಾಯಗಳು ಆಗಿರಲಿಲ್ಲ. ಇದರಿಂದ ಅನುಮಾನಗೊಂಡು ಡಿಲ್ಲಿರಾಣಿಯನ್ನು ಹೆಚ್ಚಿನ ವಿಚಾರಣೆ ನಡೆಸಿದ ವೇಳೆ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನ ತಾನೇ ಕೊಲೆ ಮಾಡಿದ್ದಾಗಿ ಪೊಲೀಸ್ ತನಿಖೆ ವೇಳೆ ರಾಣಿ ಬಾಯ್ಬಿಟ್ಟಿದ್ದಾಳೆ.
ಆರೋಪಿ ಡಿಲ್ಲಿರಾಣಿಯೇ ಪತಿ ಶಂಕರ್ ಕತ್ತು ಕೊಯ್ದು ಕೊಲೆ ಮಾಡಿ, ಬಳಿಕ ತನ್ನ ಪ್ರಿಯಕರನಿಗೆ ಕರೆ ಮಾಡಿ ಕಥೆ ಮುಗಿತು ಅಂತ ಹೇಳಿದ್ದಳಂತೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾಲ್ ಡೈಯಲ್ನಿಂದ ಆತನ ನಂಬರ್ ಡಿಲೀಟ್ ಮಾಡಿದ್ದಳಂತೆ. ಇದು ಪೊಲೀಸರ ವಿಚಾರಣೆಗೆ ವೇಳೆ ಬೆಳಕಿಗೆ ಬಂದಿದೆ. ಪ್ರಿಯಕರನೊಂದಿಗೆ ಸಂಬಂಧ ಮುಂದುವರಿಸಲು ಪತಿ ಅಡ್ಡ ಬರುತ್ತಿದ್ದ. ಆದ್ದರಿಂದಲೇ ಪತಿಯನ್ನು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳಂತೆ.
