Asianet Suvarna News Asianet Suvarna News

Chamarajanagar Crime: ಕರಿಮಣಿ ಮಾಲೀಕ ನೀನಲ್ಲ..! ಪತ್ನಿ ರೀಲ್ಸ್ ಹುಚ್ಚಿಗೆ ನೇಣಿಗೆ ಶರಣಾದ ಪತಿ..!

ಚಾಮರಾಜನಗರದಲ್ಲಿ ಪತ್ನಿಯ ರೀಲ್ಸ್‌ ಹುಚ್ಚಿಗೆ ಪತಿ ನೇಣಿಗೆ ಶರಣಾಗಿದ್ದಾನೆ ಎಂದು ಹೇಳಲಾಗ್ತಿದೆ.
 

ಈಗೇನಿದ್ರೂ ಸೋಷಿಯಲ್ ಮೀಡಿಯಾ ಜಮಾನ. ಮನುಷ್ಯ ಅಪ್ ಡೇಟ್ ಆಗ್ತಾ ಇದ್ದಂತೆ ತಂತ್ರಜ್ಞಾನ ಕೂಡ ಅಪ್ ಡೇಟ್ ಆಗ್ತಾನೆ ಇದೆ. ಉಂಡ್ರು, ತಿಂದ್ರೂ ಏನ್ ಮಾಡಿದ್ರು ಧೀಡಿರ್ ಅಂತ ಸೋಷಿಯಲ್ ಮೀಡಿಯಾದಲ್ಲಿ(Social Media) ಶೇರ್ ಮಾಡ್ತಾರೆ ಈಗಿನ್ ಮಂದಿ. ಈ ಸೋಷಿಯಲ್ ಮೀಡಿಯಾ ಟೈಮ್ ಪಾಸ್‌ಗೆ ಎಂಜಾಯ್ ಮೆಂಟ್‌ಗೆ ಇಟ್ಕೊಂಡ್ರೆ ಓಕೆ. ಆದ್ರೆ ಅತಿರೇಕ ಆದ್ರೆ ದುರಂತಗಳೇ ಸೃಷ್ಟಿ ಆಗ್ತಾವೆ. ಓ ನಲ್ಲ ನೀನಲ್ಲ ಕರಿಮಣಿ ಮಾಲೀಕ ನೀನಲ್ಲ.. ಅಬ್ಬಬ್ಬಾ ಈ ಸಾಂಗ್ ಇತ್ತೀಚೆಗೆ ದೊಡ್ಡ ಟ್ರೆಂಡ್ ಅನ್ನೇ ಸೃಷ್ಟಿ ಮಾಡಿದೆ. ಯಾರ ಮೊಬೈಲ್ ನೋಡಿದ್ರೂ ಇದೆ, ಯಾವ ಸೋಷಿಯಲ್ ಮೀಡಿಯಾ ನೋಡುದ್ರು ಇದೆ. ಕಳೆದ 25 ವರ್ಷದ ಹಿಂದೆ ರಿಲೀಸ್ ಆಗಿದ್ದ ಉಪೇಂದ್ರ ಸಿನಿಮಾದ ಈ ಹಾಡು ಇಂದು ಒಂದು ಜೀವವನ್ನೇ ತೆಗೆದು ಬಿಟ್ಟಿದೆ. ಕೇವಲ ಕರಿಮಣಿ ಮಾಲೀಕ  ನೀನಲ್ಲ ರೀಲ್ಸ್ ಗೆ(Reels) ಬೇಸತ್ತು ಕುಮಾರ ಆತ್ಮಹತ್ಯೆ(Suicide) ಮಾಡ್ಕೊಂಡ್ನಾ ಅನ್ನೋದನ್ನ ಪೊಲೀಸರಿಗೂ(Police) ನಂಬೋಕೆ ಆಗ್ತಿಲ್ಲ. ರೀಲ್ಸ್ ಅಲ್ಲದೇ ಬೇರೆ ಬೇರೆ ಕಾರಣಗಳು ಸಹ ಇದ್ವು.  ಕುಮಾರನ ಸಾವಿಗೆ ಆತನ ಹೆಂಡತಿ ಹೇಳೋದೆ ಬೇರೆ. ಸಿಕ್ಕಾಪಟ್ಟೆ ಸಾಲ ಮಾಡ್ಕೊಂಡಿದ್ದ. ವಿಪರೀತಿ ಕುಡಿತದ ಚಟ ಸಹ ಇತ್ತು. ಅಲ್ಲದೆ ಇಸ್ಪೀಟ್ ನಲ್ಲೂ ಸೋತಿದ್ದ.. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡ್ಕೊಂಡಿರ್ಬೋದು ಅಂತಾಳೆ. ಈ ಕುಮಾರ ತನ್ನ ಪತ್ನಿ ರೂಪಾಳ ರೀಲ್ಸ್ ನಿಂದ ಸಾವಿಗೀಡಾದ್ನೋ.. ಅಥವಾ ಸಾಲಬಾಧೆಯಿಂದ ಸತ್ನೋ ಅನ್ನೋದನ್ನು ಪೊಲೀಸರು(Police) ತನಿಖೆ ಮಾಡ್ತಾರೆ. ಆದ್ರೆ ಅತಿಯಾದ್ರೆ ಅಮೃತ ಕೂಡ ವಿಷವಾಗುತ್ತೆ ಅನ್ನೋದಕ್ಕೆ ಇವತ್ತಿನ್ ಸ್ಟೋರಿಗೆ ಸಾಕ್ಷಿ.

ಇದನ್ನೂ ವೀಕ್ಷಿಸಿ:  ಈಗ ಕಣಿವೆ ರಾಜ್ಯದಲ್ಲೂ ಮೈತ್ರಿ ಬಿರುಕು..! I.N.D.I.A ಕ್ಕೆ ಫಾರೂಕ್ ವಿದಾಯ..!