Asianet Suvarna News Asianet Suvarna News

ಪತ್ನಿಗೆ ಚಾಕು ಇರಿದು ನೇಣಿಗೆ ಶರಣಾದ ಪಾಪಿ ಪತಿ: ಆಸ್ಪತ್ರೆಯಲ್ಲಿ ಹೆಂಡತಿ ಸಾವು-ಬದುಕಿನ ಮಧ್ಯೆ ಹೋರಾಟ

ಮೈಸೂರಿನಲ್ಲಿ ಪತಿಯೊಬ್ಬ ಹೆಂಡತಿಗೆ ಕಿರುಕುಳ ನೀಡಿ, ಬಳಿಕ ಆಕೆಗೆ ಚಾಕುವಿನಿಂದ ಐದು ಬಾರಿ ಇರಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
 

ಹೆಂಡತಿಗೆ ಚಾಕುವಿನಿಂದ ಇರಿದ ಬಳಿಕ ಗಂಡ ಆತ್ಮಹತ್ಯೆ (suicide) ಮಾಡಿಕೊಂಡಿರುವ ಘಟನೆ ಮೈಸೂರಿನ(Mysore) ಪಿರಿಯಾಪಟ್ಟಣ ತಾಲೂಕಿನ ಮುತ್ತಿನ ಮುಳ್ಳುಸೋಗೆ ಗ್ರಾಮದಲ್ಲಿ ನಡೆದಿದೆ. ಆದ್ರೆ ಪತ್ನಿ(Wife) ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಆರೋಪಿ ಪ್ರಸನ್ನ ಮತ್ತು ಶ್ವೇತಾ ಒಂದು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆದ್ರೆ ಇತ್ತೀಚೆಗೆ ಶ್ವೇತಾ ಪತಿಗೆ ಆಕೆಯ ತಂಗಿ ಮೇಲೆ ಮನಸ್ಸಾಗಿತಂತೆ. ಈ ಬಗ್ಗೆ ಆತ ಶ್ವೇತಾಗೆ ಹೇಳಿ, ಕಿರುಕುಳ ನೀಡುತ್ತಿದ್ದನಂತೆ. ಬಳಿಕ ಶ್ವೇತಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾಳೆ. ಆಗ ಐದು ಬಾರಿ ಆಕೆಗೆ ಚಾಕುವಿನಿಂದ ಇರಿದು, ಬಳಿಕ ಕೋಣೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಂದು ತಿಂಗಳ ಹಿಂದೆ ಶ್ವೇತಾ ಗಂಡನ ಮನೆ ತೊರೆದು ತಾಯಿ ಮನೆಗೆ ಹೋಗಿದ್ದಳು. ಯಾರೂ ಇಲ್ಲದ ಸಮಯ ನೋಡಿಕೊಂಡು ಪ್ರಸನ್ನ ಈ ಕೆಲಸ ಮಾಡಿದ್ದಾನೆ. 

ಇದನ್ನೂ ವೀಕ್ಷಿಸಿ:  ಹಾಸನದಲ್ಲಿ ಶಿಕ್ಷಕಿ ಅಪಹರಣ ಪ್ರಕರಣ ಸುಖಾಂತ್ಯ: ಬೆಳಗ್ಗೆ ಕಿಡ್ನಾಪ್, ರಾತ್ರಿ ಹೊತ್ತಿಗೆ ಆರೋಪಿಗಳು ಅಂದರ್

Video Top Stories