ಒರಿಸ್ಸಾದಲ್ಲಿ ಬಿರುಗಾಳಿ ಎಬ್ಬಿಸಿದ ಹನಿ ಟ್ರ್ಯಾಪ್: ತುಪ್ಪಕ್ಕಾಗಿ ಜಾರಿ ಹಳ್ಳದಲ್ಲಿ ಬಿದ್ದವರೆಷ್ಟು?
ಇತ್ತೀಚಿಗೆ ಹನಿ ಟ್ರ್ಯಾಪ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜಕೀಯ ಹಾಗೂ ಸಿನಿಮಾ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೆಚ್ಚಾಗಿ ಇಂತಹ ಪ್ರಪಕರಣಗಳು ಬೆಳಕಿಗೆ ಬರುತ್ತಿವೆ. ಆದರೆ ಒರಿಸ್ಸಾದಲ್ಲಿ ನಡೆದ ಈ ಬ್ಲ್ಯಾಕ್‌ಮೇಲ್ ದೇಶವನ್ನೇ ಬೆಚ್ಚಿ ಬೀಳಿಸಿದೆ.
ಒರಿಸ್ಸಾದಲ್ಲಿ ಮಹಿಳೆಯೊಬ್ಬರು ಹನಿ ಟ್ರ್ಯಾಪ್ ಮೂಲಕ 18 ಶಾಸಕರು ಸೇರಿ 25ಕ್ಕೂ ಹೆಚ್ಚು ಪ್ರಭಾವಿ ವ್ಯಕ್ತಿಗಳನ್ನು ಖೆಡ್ಡಾಕ್ಕೆ ಕೆಡವಿದ್ದಾಳೆ. ಅರ್ಚನಾ ನಾಗ್ ಎಂಬ ಮಹಿಳೆ ಹನಿಟ್ರ್ಯಾಪ್ ಹಾಗೂ ಬ್ಲ್ಯಾಕ್ ಮೇಲ್ ಸೂತ್ರದಾರಿಯಾಗಿದ್ದು, ಆಕೆಯ ಗಂಡನು ಸಹ ಈ ಕೃತ್ಯಕ್ಕೆ ಕೈ ಜೋಡಿಸಿದ್ದಾನೆ. ಈ ದಂಪತಿ ಐಷಾರಾಮಿ ಜೀವನಕ್ಕೋಸ್ಕರ ಹನಿಟ್ರ್ಯಾಪ್ ಹಾಗೂ ಬ್ಲ್ಯಾಕ್‌ಮೇಲ್ ಮಾರ್ಗ ಹಿಡಿದು, ಇದೀಗ ಒಡಿಶಾದ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ.