ಅಧಿಕಾರಿಗಳ ನಿರ್ಲಕ್ಷ್ಯ..ಅರ್ಧಕ್ಕೆ ನಿಂತ ಮನೆ ಕಾಮಗಾರಿ: ಗುಡಿಸಲುಗಳಲ್ಲೇ ದಿನದೂಡುತ್ತಿರುವ ಆದಿವಾಸಿ ಕುಟುಂಬ
ಇಂದಿಗೂ ಗುಡಿಸಲು, ಶೆಡ್‌ಗಳಲ್ಲಿ ಬದುಕುವ ಬುಡಕಟ್ಟು ಆದಿವಾಸಿಗಳ ಜನರಿಗೆ ವಸತಿ ಕಲ್ಪಿಸುವುದಕ್ಕಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿದೆ. ಆದ್ರೆ ಅವುಗಳನ್ನು ಕಟ್ಟುನಿಟ್ಟಾಗಿ ಕಾರ್ಯಗತಗೊಳಿಸಬೇಕಾಗಿರುವ ಅಧಿಕಾರಿಗಳ ಯಡವಟ್ಟಿನಿಂದಾಗಿ ಆದಿವಾಸಿಗಳು ಶೆಡ್ಡಿಯನಲ್ಲಿಯೇ ಬದುಕುತ್ತಿದ್ದಾರೆ.
ಅರ್ಧಕ್ಕೆ ನಿಂತಿರುವ ಮನೆಗಳ(Houses) ಕಾಮಗಾರಿ.. ಫ್ಲೋರಿಂಗೂ ಇಲ್ಲ. ಕಿಟಕಿ, ಬಾಗಿಲುಗಳೂ ಇಲ್ಲ. ಇದು ಕೊಡಗು(Kodagu) ಜಿಲ್ಲೆ ಕುಶಾಲನಗರ ತಾಲ್ಲೂಕಿನ ಬೆಂಡೆಬೆಟ್ಟ ಗಿರಿಜನ ಹಾಡಿಯಲ್ಲಿನ ಆದಿವಾಸಿ ಬುಡಕಟ್ಟು(Adivasi tribe) ಜನರ ಪರಿಸ್ಥಿತಿ. ಹೌದು ಬುಡಕಟ್ಟು ಆದಿವಾಸಿ ಕುಟುಂಬಗಳ ಅಭಿವೃದ್ಧಿಗಾಗಿ ಸರ್ಕಾರವೇನೋ(Government) ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಆದ್ರೆ ಅವುಗಳನ್ನು ಕಾರ್ಯಗತಗೊಳಿಸಬೇಕಾಗಿರುವ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮನೆಗಳ ಬಿಲ್ಲು ಯಾವುದೋ ಗುತ್ತಿಗೆದಾರನ ಪಾಲಾಗಿದೆ. ಬೆಂಡೆಬೆಟ್ಟ ಹಾಡಿಯಲ್ಲಿ 50 ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು ಮೂರು ವರ್ಷಗಳ ಹಿಂದೆ ಮನೆಗಳನ್ನು ನಿರ್ಮಿಸಿಕೊಳ್ಳಲು 18 ಕುಟುಂಬಗಳಿಗೆ ಹಣ ಮಂಜೂರು ಮಾಡಲಾಗಿತ್ತು. ಈ ವೇಳೆ ಚಂದ್ರ ಎಂಬಾತ ಮನೆ ನಿರ್ಮಿಸಿ ಕೊಡುವುದಾಗಿ ಕಾಮಗಾರಿ ಗುತ್ತಿಗೆ ಪಡೆದಿದ್ರು. ಆದ್ರೆ 18 ಮನೆಗಳಿಗೆ ಅಡಿಪಾಯ ಹಾಕಿ ಗೋಡೆ ಕಟ್ಟಿ ಛಾವಣಿ ಹೊದಿಸಿ ಬಿಲ್ ಪಡೆದಿದ್ದಾನೆ.. ಮೊದಲ ಎರಡು ಬಿಲ್ ಪಡೆದ ಗುತ್ತಿಗೆದಾರ ಮನೆಗಳಿಗೆ ಫ್ಲೋರಿಂಗೂ ಇಲ್ಲ. ಕಿಟಕಿ, ಬಾಗಿಲುಗಳನ್ನೂ ಹಾಕಿಸಿಲ್ಲ.
ಮೊದಲ ಎರಡು ಬಿಲ್ ಪಡೆದ ಗುತ್ತಿಗೆದಾರ ಉಳಿದ ಕೆಲಸ ಮಾಡಿಸಿಲ್ಲ.. ಹೀಗಾಗಿ ಹಳೆಯ ಗುಡಿಸಲುಗಳಲ್ಲೇ ಆದಿವಾಸಿ ಕುಟುಂಬಗಳು ದಿನದೂಡುತ್ತಿವೆ. ಸಾರಣೆ ಮಾಡಿಸಿದ್ರೆ ಮಾತ್ರವೇ ಮೂರನೇ ಬಿಲ್ ಬಿಡುಗಡೆಯಾಗುತ್ತೆ.. ಆದ್ರೆ ಅದನ್ನ ಗುತ್ತಿಗೆದಾರ ಮಾಡಿಸುತ್ತಿಲ್ಲ... ಮತ್ತೊಂದೆಡೆ ಗ್ರಾಮದಲ್ಲಿ ವಿದ್ಯುತ್ ಲೈನ್ ಇದೆಯಾದ್ರೂ ಹಾಡಿಯ ಮನೆಗಳಿಗೆ ಮಾತ್ರ ಕರೆಂಟ್ ಭಾಗ್ಯವಿಲ್ಲ. ಶಾಲಾ ಕಾಲೇಜುಗಳಿಗೆ ಹೋಗುತ್ತಿರುವ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಅವರೆಲ್ಲರೂ ಅನಿವಾರ್ಯವಾಗಿ ದೀಪದ ಬೆಳಕಿನಲ್ಲಿ ಓದಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಇನ್ನು ಸೀಮೆ ಎಣ್ಣೆಯನ್ನೂ ಕೊಡುತ್ತಿಲ್ಲ.. ಹೀಗಾಗಿ ಕತ್ತಲಾಗುವಷ್ಟರಲ್ಲಿ ಊಟ ಮಾಡಿ ಮಲಗುವ ಅನಿವಾರ್ಯತೆ ಇದೆ.
ಇದನ್ನೂ ವೀಕ್ಷಿಸಿ: ಚಾಮರಾಜನಗರ ಕಾರಾಗೃಹದಲ್ಲಿ ಖೈದಿಗಳಿಗೆ ಕಂಪ್ಯೂಟರ್ ತರಬೇತಿ: SSLC, ಮೇಲ್ಪಟ್ಟ ವಿದ್ಯಾರ್ಹತೆಯುಳ್ಳವರು ಆಯ್ಕೆ