Hanuman Flag Row : ಹನುಮನಿಗಾಗಿ ಹರಿದೇಬಿಟ್ಟಿತ್ತಲ್ಲ ರಕ್ತ..! ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಧ್ವನಿಸಿದ ಧಿಕ್ಕಾರ..!
ಅವರದ್ದು ಸರಿನಾ..? ಇವರದ್ದು ಸರೀನಾ..?
ಸಕ್ಕರೆ ನಾಡಿನಲ್ಲಿ ಧಗಧಗಿಸಿದ ಕೇಸರಿ ಕಾಳಗ..!
ರಾತ್ರೋ ರಾತ್ರಿ ಹನುಮನ ಧ್ವಜ ಕೆಳಗಿಳಿದಿತ್ತು..!
ಅದೊಂದು ಪುಟ್ಟ ಗ್ರಾಮ. ಅಂದಾಜು ಐದಾರು ಸಾವಿರ ಜನ ವಾಸ ಮಾಡಬಹುದು. ಇಂಥಹ ಒಂದು ಗ್ರಾಮ ಇವತ್ತು ಇಡೀ ದೇಶದಲ್ಲೇ ಸದ್ದು ಮಾಡ್ತಿದೆ. ಮೊನ್ನೆ ಮೊನ್ನೆವರೆಗೂ ಕೆರಗೋಡು(Keragodu) ಅನ್ನೋದು ಮಂಡ್ಯ ಜನಕ್ಕೆ ಮಾತ್ರ ಗೊತ್ತಿತ್ತು. ಆದ್ರೆ ಇವತ್ತು ಇಡೀ ಇಂಡಿಯಾನೇ ಮಾತನ್ನಾಡಿಕೊಳ್ತಿದೆ. ಅದರೆ ಅದಕ್ಕೆ ಕಾರಣ ಹನುಮನ ಧ್ವಜ(Hanuman flag).ಗ್ರಾಮಸ್ಥರು ಹಾರಿಸಿದ್ದ ಕೇಸರಿ ಧ್ವಜವನ್ನ ರಾತ್ರೋ ರಾತ್ರಿ ಕೆಳಗಿಳಿಸಲು ಅಧಿಕಾರಿಗಳು ಆಗಮಿಸಿದ್ರು. ಅಲ್ಲಿಂದ ಶುರುವಾದ ಈ ಧ್ವಜ ದಂಗಲ್ ಈಗ ಇಡೀ ಜಿಲ್ಲೆಯೇ ಬಂದ್ ಆಗುವ ಹಂತಕ್ಕೆ ತಲುಪಿದೆ. ಯಾವಾಗ ಕೆರಗೋಡುವಿಗೆ ರಾಜಕಾರಣಿಗಳು ಎಂಟ್ರಿ ಕೊಟ್ಟರೋ. ಎಲ್ಲವೂ ಬದಲಾಗಿಹೊಯ್ತು. ಅಂದಹಾಗೆ ಭಾನುವಾರ ಸಂಜೆಯಾಗ್ತಿದ್ದಂತೆ ತಣ್ಣಗಾಗಿದ್ದ ಈ ಧ್ವಜ ದಂಗಲ್ ಮತ್ತೆ ಸೋಮವಾರ ಬೆಳಗ್ಗೆ ಕಾವು ಹೆಚ್ಚಿಸಿಕೊಳ್ತು. ಗ್ರಾಮಸ್ಥರ ಜೊತೆಗೆ ಹಿಂದೂ ಕಾರ್ಯಕರ್ತರು, ಬಿಜೆಪಿ(BJP) ಮತ್ತು ಜೆಡಿಎಸ್(JDS) ಕಾರ್ಯಕರ್ತರೆಲ್ಲಾ ಸೇರಿಕೊಂಡ್ರು ಪ್ರತಿಭಟನೆ ನಡೆಸಿದ್ರು. ಫ್ಲೆಕ್ಸ್ಗಳಿಗೆ ಬೆಂಕಿ ಇಡಲಾಯ್ತು.. ಲಾಠಿ ಚಾರ್ಜ್ ಆಯ್ತು. ಸದ್ಯ ಕೆರಗೋಡು ಬೂದಿ ಮುಚ್ಚಿದ ಕೆಂಡದಂತಿದೆ. ಯಾವಾಗ ಏನು ಬೇಕಾದ್ರೂ ಆಗಬಹುದು. ಗ್ರಾಮಸ್ಥರಿಗೆ ಅಲ್ಲಿ ಮತ್ತೆ ಹನುಮನ ಧ್ವಜ ಹಾರಬೇಕಿದೆ. ಆದ್ರೆ ಅದು ಸರ್ಕಾರಿ ಜಾಗ ಅಲ್ಲಿ ಅನುಮತಿ ಕೊಡೋದಕ್ಕೆ ಆಗೋದಿಲ್ಲ ಅಂತ ಜಿಲ್ಲಾಡಳಿತ ಹೇಳ್ತಿದೆ.
ಇದನ್ನೂ ವೀಕ್ಷಿಸಿ: ಕಾಂಗ್ರೆಸ್ ಕುತಂತ್ರದ ಮಾತು ಹೇಳಿದ್ಯಾರು..? ಯಾಕೆ..? ಹೇಗೆ ನಡೆದಿದೆ I.N.D.I.A ಜೋಡೋ ಸರ್ಕಸ್?