ಇಬ್ಬರನ್ನು 'ಲವ್' ಮಾಡಿದ ಪೋರ: ಹುಡುಗಿ ಕರೆದಳು ಅಂತ ಹೋಗಿ ಹೆಣವಾದ

ಬೆಳಗಾವಿಯಲ್ಲಿ ಹುಡುಗಿ ವಿಚಾರಕ್ಕೆ ಯುವಕನೊಬ್ಬ, ಬರ್ಬರವಾಗಿ ಕೊಲೆಯಾಗಿದ್ದಾನೆ. ಕೊಲೆಯ ರಹಸ್ಯ ಪೊಲೀಸರು ಬೇಧಿಸಿದ್ದೇ ಒಂದು ರೋಚಕ.
 

First Published Dec 1, 2022, 12:30 PM IST | Last Updated Dec 1, 2022, 12:31 PM IST

ಅವನು 20ರ ಪೋರ ಚಿಕ್ಕವಯಸ್ಸಿನಲ್ಲೇ ಗೋವಾ ಅನ್ನೋ ಮಾಯನಗರಿಯನ್ನು ಇಂಚಿಂಚು ನೋಡಿ ಬಂದಿದ್ದ. ಆತ ತನ್ನೂರಿಗೆ ವಾಪಸ್ ಆದ್ಮೇಲೆ ಪ್ಲೇ ಬಾಯ್ ಆಗಿ ಬದಲಾಗಿದ್ದ. ವಿಚಿತ್ರ ಮತ್ತು ವಿಭಿನ್ನವಾಗಿ ರೀಲ್ಸ್ ಮಾಡ್ತಿದ್ದ ಆತ ಅವತ್ತು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಹೆತ್ತವರು ಇರೋ ಬರೋ ಕಡೆಯಲ್ಲೆಲ್ಲಾ ಹುಡುಕಾಡಿ ಪೊಲೀಸ್ ಕಂಪ್ಲೆಂಟ್ ಕೊಟ್ರು. ಆದ್ರೆ ಕಂಪ್ಲೆಂಟ್ ದಾಖಲಾಗಿ 4 ದಿನಗಳ ನಂತರ ಆ ಯುವಕ ಸಿಕ್ಕಿದ್ದು ಘಟಪ್ರಭಾ ನದಿಯಲ್ಲಿ. ಒಂದೇ ಟೈಂನಲ್ಲಿ ಎರಡೆರಡು ಹುಡುಗಿಯರನ್ನ ಮೇಂಟೇನ್ ಮಾಡಿಕೊಂಡು ಊರಲ್ಲಿ ಪ್ಲೇಬಾಯ್ ಅಂತ ಕರೆಸಿಕೊಳ್ತಿದ್ದ ಯುವಕನನ್ನ ಕೊಂದಿದ್ಯಾರು?. ಹತ್ಯೆ ಮಾಡಿದ ಹಂತಕರು ಸಾಕ್ಷಿ ನಾಶ ಮಾಡಲು ಮತ್ತು ಕೊಲೆಯನ್ನು ಬೇರೊಬ್ಬರ ಮೇಲೆ ಹಾಕಲು ಮಾಡಿದ ಮಾಸ್ಟರ್ ಪ್ಲ್ಯಾನ್ ಏನು? ಯುವಕನ ಕೊಲೆಯ ರಹಸ್ಯ ಪೊಲೀಸರು ಬೇಧಿಸಿದ್ದು ಹೇಗೆ ಅನ್ನುದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

ಕುಕ್ಕರ್‌ ಬಾಂಬ್‌ ಸ್ಫೋಟ: ಶಂಕಿತ ಉಗ್ರ ಶಾರೀಕ್‌ಗೆ ಬರುತ್ತಿದ್ದ ಹಣದ ಮ ...

Video Top Stories