ಅಶ್ಲೀಲ ವಿಡಿಯೋ ಬೆದರಿಕೆಗೆ ಯುವತಿ ಸೂಸೈಡ್: ಅಪ್ರಾಪ್ತೆ ಬಲಿ ಪಡೆದ ಕಿರಾತಕರು !

ದ್ವೀತಿಯ ಪಿಯುಸಿ ಓದುತ್ತಿದ್ದ ಯುವತಿಯ ಬಾಳಲ್ಲಿ  ಯುವಕರು ಚೆಲ್ಲಾಟವಾಡಿದ್ದಾರೆ. ಪ್ರೀತಿಗೆ ಒಪ್ಪದಿದ್ದ ಯುವತಿಯ ಅಶ್ಲೀಲ ವಿಡಿಯೋ ಮಾಡಿ ಬೆದರಿಕೆ ಒಡ್ಡಿ ಯುವತಿಯನ್ನೇ ಬಲಿ ಪಡೆದಿದ್ದಾರೆ.

Share this Video
  • FB
  • Linkdin
  • Whatsapp

ಆಕೆ ಇನ್ನೂ ಅಪ್ರಾಪ್ತೆ..ಚೆನ್ನಾಗಿ ಓದಿ ತನ್ನ ತಂದೆ ತಾಯಿಯನ್ನು ನೋಡಿಕೊಳ್ಳಬೇಕೆಂಬ ಕನಸೊತ್ತಿದ್ದಳು. ತಾನಾಯ್ತು ತನ್ನ ಓದಾಯ್ತು ಅಂತಾ ಇದ್ದ ಯುವತಿಯ ಬಾಳಲ್ಲಿ ಇಬ್ಬರು ರಾಕ್ಷಕರು ಎಂಟ್ರಿ ಕೊಟ್ಟಿದ್ದರು. ದ್ವಿತೀಯ ಪಿಯುಸಿ ಓದುತ್ತಿದ್ದ ಯುವತಿಯ ಪರಿಚಯ ಮಾಡಿಕೊಂಡು ಮಧು ಎಂಬಾತ ನಿತ್ಯ ಪ್ರೀತಿಸುವಂತೆ ಟಾರ್ಚರ್(Torture) ಮಾಡುತ್ತಿದ್ದ. ಆದ್ರೆ ಇದಕ್ಕೆ ಒಪ್ಪದ ಯುವತಿಯ ಬಾಳಲ್ಲಿ ಮಧು ಚೆಲ್ಲಾಟವಾಡಿದ್ದಾನೆ. ಈ ಆರೋಪಿ ಮಧು, ದಾವಣಗೆರೆಯ(Davanagere) ಜಗಳೂರು ನಿವಾಸಿ. ಬೀದಿ ಬೀದಿಯಲ್ಲಿ ರೋಡ್ ರೋಮಿಯೋ ಆಗಿದ್ದ ಮಧು ಕಾಲೇಜಿಗೆ ಹೋಗುವ ಈ ಅಪ್ರಾಪ್ತೆ(Minor girl) ಹಿಂದೆ ಬಿದ್ದಿದ್ದ. ನಿತ್ಯ ಪ್ರೀತಿ ಮಾಡುವಂತೆ ಯುವತಿಯನ್ನು ಪೀಡಿಸುತ್ತಿದ್ದ. ಆದ್ರೆ, ಈಕೆ ಮಾತ್ರ ಪ್ರೀತಿ ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಸೈಕೋ ಪ್ರೇಮಿ ಮಧು, ತನ್ನ ಸ್ನೇಹಿತ ನಾಗೇಂದ್ರ ಸ್ವಾಮಿ ಜೊತೆಗೂಡಿ ಸ್ಕೆಚ್ ಹಾಕಿದ್ದಾನೆ. ಬೇಕರಿ ಸಿಹಿ ತಿನಿಸಿನಲ್ಲಿ ಮತ್ತು ಬರುವ ಔಷಧಿ ಹಾಕಿ ಯುವತಿಗೆ ನೀಡಿ, ಆಕೆಯ ಅಶ್ಲೀಲ ವಿಡಿಯೋ(Video) ಮಾಡಿಕೊಂಡಿದ್ದಾನೆ. ಬಳಿಕ ಆ ವಿಡಿಯೋ ಹರಿಬಿಡೋದಾಗಿ ಯುವತಿಗೆ ಧಮ್ಕಿ ಹಾಕಿದ್ದಾನೆ.ಯಾವಾಗ ಈ ಇಬ್ಬರು ರಾಕ್ಷಸರ ಟಾರ್ಚರ್ ಜೋರಾಯ್ತೋ ಇದರಿಂದ ಬೇಸತ್ತ ಯುವತಿ ಆತ್ಮಹತ್ಯೆಗೆ(Suicide) ಯತ್ನಿಸಿದ್ದಳು. ಆಗಸ್ಟ್ 28 ರಂದು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಸೂಸೈಡ್‌ಗೆ ಯತ್ನಿಸಿದ್ದಾಳೆ. ತಕ್ಷಣ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಭಾನುವಾರ ಅಸು‌ನೀಗಿದ್ದಾಳೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಪವನ್‌ ಕಲ್ಯಾಣ್ ಬರ್ತ್ ಡೇಗೆ ಪವರ್‌ಫುಲ್ ಗಿಫ್ಟ್..! ಓಜಿ ಟೀಸರ್ ಔಟ್..ಅಭಿಮಾನಿಗಳು ಶಾಕ್..!

Related Video