ಮಸಣವಾಯ್ತು ಜೇನುಗೂಡು: ಆಸ್ತಿಗಾಗಿ ನಾಲ್ವರ ಕೊಲೆ

ಆಸ್ತಿಯ ವಿಚಾರವಾಗಿ ಒಂದೇ ಕುಟುಂಬದ ನಾಲ್ವರನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಸುಂದರ ತುಂಬು ಕುಟುಂಬ ಇಂದು ಸ್ಮಶಾನವಾಗಿದೆ .

First Published Feb 26, 2023, 2:19 PM IST | Last Updated Feb 26, 2023, 3:27 PM IST

ಅದು ಒಂದು ಸುಂದರ ತುಂಬು ಕುಟುಂಬ, ಅಪ್ಪ ಅಮ್ಮನ ಜೊತೆ ಇಬ್ಬರು ಮಕ್ಕಳು ಮತ್ತು ಸೊಸೆಯಂದಿರು. ಜೇನುಗೂಡಿನಂತಹ ಕುಟುಂಬದ ಮೇಲೆ ಯಾರ ಕಣ್ಣು ಬಿತ್ತೋ ಏನೋ ಅದೇ ಕುಟುಂಬದ ನಾಲ್ವರನ್ನು ಇಬ್ಬರು ಕಿರಾತಕರು ಕೊಂದು ಮುಗಿಸಿದ್ರು. ಸದಾ ಖುಷಿಯಿಂದ ಇದ್ದ ಮನೆ ಮಸಣವಾಗಿಬಿಡ್ತು.‌ ಒಂದೇ ಕುಟುಂಬದಲ್ಲಿ ಒಂದೇ ಕ್ಷಣದಲ್ಲಿ ನಾಲ್ಕು ಕ್ಕು ಹೆಣಗಳು ಉರುಳಿಹೋಗಿದ್ವು. ಇನ್ನೂ ಇದೇ ಕೇಸ್'ನ್ನು ತನಿಖೆ ನಡೆಸಿದ್ದ ಪೊಲೀಸರಿಗೆ ಗೊತ್ತಾಗಿದ್ದು ಆ ಕೊಲೆಗಳನ್ನು ಮಾಡಿದ್ದು ಅದೇ ಕುಟುಂಕ್ಕೆ ಸೇರಿದವರು ಅಂತ. ಏನಿದು ಸ್ಟೋರಿ? ಇಲ್ಲಿದೆ ಡಿಟೇಲ್ಸ್...