ತಲೆಗೆ ರಾಡ್‌ನಿಂದ ಹೊಡೆದು ಆ್ಯಕ್ಸಿಡೆಂಟ್ ಅಂದ್ರು: ಗಾಯಕನ ಕೊಲೆ ಕೇಸ್‌ನಲ್ಲಿ ಹೆಂಡತಿ ಅಂದರ್ !

ಜಾನಪದ ಕಲಾವಿದ ಕೃಷ್ಣಮೂರ್ತಿಯನ್ನು ಕೊಲೆ ಮಾಡಿ ಬಳಿಕ ಆ್ಯಕ್ಸಿಡೆಂಟ್ ಎಂದು ಬಿಂಬಿಸಲಾಗಿತ್ತು. ಈತನ ಕೊಲೆಯನ್ನು ಮಾಡಿಸಿದ್ದು, ಹೆಂಡತಿಯೇ ಎಂಬುದು ತನಿಖೆಯಲ್ಲಿ ಪೊಲೀಸರಿಗೆ ತಿಳಿದುಬಂದಿತ್ತು.

Share this Video
  • FB
  • Linkdin
  • Whatsapp

ಆತ ಜನಪದ ಗೀತೆಗಳ ಹಾಡುಗಾರ, ಕೋಲಾರ ಜಾನಪದ ಕಲಾ ಸಂಘದ ಅಧ್ಯಕ್ಷನಾಗಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಪಡೆದಿದ್ದರು. ತನ್ನ ಗಾಯನದ ಮೂಲಕ ಅದೆಷ್ಟೋ ಜನರ ಮನಸ್ಸು ಗೆದ್ದಿದ್ದಾತ. ಇಂತಹ ಒಬ್ಬ ಕಲಾವಿದ ಅವತ್ತು ಆ್ಯಕ್ಸಿಡೆಂಟ್‌ನಲ್ಲಿ ಮೃತಪಟ್ಟಿದ್ರು. ಅವರ ಅಗಲಿಕೆಗೆ ಇಡೀ ಜಿಲ್ಲೆಯೇ ಕಣ್ಣೀರು ಹಾಕಿತ್ತು. ಒಬ್ಬ ಅದ್ಭುತ ಗಾಯಕನ್ನ ಕಳೆದುಕೊಂಡವಲ್ಲ ಅಂತ ಬೇಸರವಾಗಿದ್ರು. ಆದ್ರೆ ಯಾವಾಗ ಆ ಕಲಾವಿದ ಮೃತಪಟ್ಟನೋ ಪೋಸ್ಟ್ ಮಾರ್ಟಮ್‌ಗೆ ಅಂತ ಆಸ್ಪತ್ರೆಗೆ ಕಂಡೊಯ್ಯಲಾಯ್ತು. ಆದ್ರೆ ಆಸ್ಪತ್ರೆಯಲ್ಲಿ ಪೊಲೀಸರಿಗೆ ಒಂದು ಶಾಕಿಂಗ್ ನ್ಯೂಸ್ ಕೊಟ್ಟಿದ್ರು. ಅದು ಆ್ಯಕ್ಸಿಡೆಂಟ್ ಅಲ್ಲ ಮರ್ಡರ್ ಅಂತ ಡಾಕ್ಟರ್ ಕಡ್ಡಿ ತುಂಡಾಗುವಂತೆ ಹೇಳಿಬಿಟ್ರು.. ಡಾಕ್ಟರ್ ಮಾತು ಕೇಳಿ ಸ್ವತಹ ಪೊಲೀಸರೇ ಥಮಡಾ ಹೊಡೆದಿದ್ರು. ನಂತರ ತನಿಖೆಯನ್ನೂ ಶುರು ಮಾಡಿದ್ರು. ಕೊನೆಗೆ ತಿಳಿದುಬಂದಿದ್ದು ಏನಂದ್ರೆ, ಗಂಡನ ಜೊತೆ ಬಾಳೋದಕ್ಕೆ ಇಷ್ಟವಿಲ್ಲ ಎಂದು ಸೌಮ್ಯ , ಪ್ರಿಯಕರನ ಜೊತೆ ಹೋಗಲು ಪತಿಯನ್ನೇ ಮುಗಿಸಿಬಿಟ್ಟಿದ್ದಾಳೆ.

ಇದನ್ನೂ ವೀಕ್ಷಿಸಿ: ಬ್ರಿಜ್ ಭೂಷಣ್ VS ಕುಸ್ತಿಪಟುಗಳು ಏನಿದು ಕತೆ..? : ಚಾಂಪಿಯನ್ಸ್ ಕಣ್ಣೀರಿನ ಹಿಂದಿರೋ ಕತೆ ಏನು..?

Related Video