Asianet Suvarna News Asianet Suvarna News

ಧಾರವಾಡದಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಿ ಕೊಲೆ...

ಮೇ 25ರ ರಾತ್ರಿ ಧಾರವಾಡ ರಿಯಲ್‌ ಎಸ್ಟೇಟ್‌ ಉದ್ಯಮಿ ಮಹಮ್ಮದ್‌ ಕುಡುಚಿ ಯನ್ನು ಅವನ ಮನೆ ಎದುರೇ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದಾರೆ. 

ಮೊಹಮ್ಮದ್ ಕುಡಚಿ  ರಿಯಲ್ ಎಸ್ಟೇಟ್ ಉದ್ಯಮಿ. ಜಮೀನುಗಳನ್ನ ಖರೀದಿಸಿ ಅದನ್ನ ಸೈಟ್‌ಗಳನ್ನಾಗಿ ಮಾಡಿ ಮಾರಟ ಮಾಡ್ತಿದ್ದ..ಕಳೆದ ಮೇ 25ರ ರಾತ್ರಿ ಧಾರವಾಡ ರಿಯಲ್‌ ಎಸ್ಟೇಟ್‌ ಉದ್ಯಮಿ ಮಹಮ್ಮದ್‌ ಕುಡುಚಿ ಯನ್ನು ಅವನ ಮನೆ ಎದುರೇ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದಾರೆ. ಈ ಗಲಾಟೆಯಲ್ಲಿ ಆರೋಪಿಗಳ ತಂಡದಲ್ಲಿದ್ದ ಗಣೇಶ ಕುಮ್ಮಾರ್‌ ಎಂಬಾತನಿಗೂ ಚಾಕು ಇರಿತವಾಗಿತ್ತು ತೀವ್ರ ರಕ್ತಸ್ರಾವವಾಗಿ ಓಡಿ ಈತ ಕುಡಚಿ ನಿವಾಸದ ಅನತಿ ದೂರದಲ್ಲಿ ನಿದ್ದು ಮೃತಪಟ್ಟಿದ್ದ. ಉಳಿದ ಹಂತಕರು ಪರಾರಿಯಾಗಿದ್ದರು . ಇನ್ನು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಹತ್ಯೆ ನಡೆಸಲಾಗಿದೆ ಎಂದು ಹೇಳಲಾಗಿದೆ