Asianet Suvarna News Asianet Suvarna News

ದರ್ಶನ್ ರಕ್ತ ಚರಿತ್ರೆ ಬಿಚ್ಚಿಟ್ಟ ಎಸ್‌ಪಿಪಿ ಪ್ರಸನ್ನಕುಮಾರ್: ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ ದಾಸನ ಬೇಲ್‌ ಭವಿಷ್ಯ

ವಕೀಲ ವೃತ್ತಿಯ ಎರಡು ಮದಗಜಗಳು ದರ್ಶನ್​​ ಜಾಮೀನು ಅರ್ಜಿಯಲ್ಲಿ ವಾದ ಪ್ರತಿವಾದ ಮಂಡಿಸುತ್ತಿವೆ. ಖ್ಯಾತ ಕ್ರಿಮಿನಲ್​​ ಲಾಯರ್​​ ಸಿವಿ ನಾಗೇಶ್​​​ ದರ್ಶನ್​​ ಪರ ನಿಂತರೆ. ಸರ್ಕಾರಿ ವಕೀಲ ಪ್ರಸನ್ನ ಕುಮಾರ್ ದರ್ಶನ್​ಗೆ ಬೇಲ್​​ ಕೊಡಬಾರದು ಅಂತ ವಾದ ಮಂಡಿಸಿದ್ದಾರೆ. ಅದ್ರೆ ಈ ಇಬ್ಬರಲ್ಲಿ ಯಾರಿಗೆ ಜಯ ಸಿಗುತ್ತೆ ಅನ್ನೋದು ಸೋಮವಾರ ಗೊತ್ತಾಗಲಿದೆ. 

First Published Oct 12, 2024, 12:38 PM IST | Last Updated Oct 12, 2024, 12:38 PM IST

ಬೆಂಗಳೂರು(ಅ.12):  ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಜೈಲು ಪಾಲಾಗಿ ಇವತ್ತಿಗೆ 111ನೇ ದಿನ.. ಆವತ್ತು ಮೈಸೂರಿನ ಜಿಮ್​ನಿಂದ ಡೈರೆಕ್ಟ್​​ ಪೊಲೀಸ್​​ ಠಾಣೆಗೆ ಹೋದ ದಾಸ ಇವತ್ತಿನವರೆಗೂ ಜೈಲು ಹಕ್ಕಿ.. ಆದ್ರೆ ಚಾರ್ಜ್​ಶೀಟ್​ ಎಲ್ಲಾ ಸಲ್ಲಿಕೆಯಾದ್ಮೇಲೆ ಜಾಮೀನು ಅರ್ಜಿ ಹಾಕಿ ದಸರಾ ಹಬ್ಬವನ್ನ ಮನೆಯಲ್ಲೆ ಆಚರಿಸೋ ಪ್ಲಾನ್​ ಮಾಡಿದ್ರು ದರ್ಶನ್​​ ಆದ್ರೆ ದಾಸ ಈ ಬಾರಿಯ ವಿಜಯದಶಮಿಯನ್ನ ಜೈಲಿನಲ್ಲೇ ಆಚರಿಸಬೇಕಿದೆ.

ವಕೀಲ ವೃತ್ತಿಯ ಎರಡು ಮದಗಜಗಳು ದರ್ಶನ್​​ ಜಾಮೀನು ಅರ್ಜಿಯಲ್ಲಿ ವಾದ ಪ್ರತಿವಾದ ಮಂಡಿಸುತ್ತಿವೆ. ಖ್ಯಾತ ಕ್ರಿಮಿನಲ್​​ ಲಾಯರ್​​ ಸಿವಿ ನಾಗೇಶ್​​​ ದರ್ಶನ್​​ ಪರ ನಿಂತರೆ. ಸರ್ಕಾರಿ ವಕೀಲ ಪ್ರಸನ್ನ ಕುಮಾರ್ ದರ್ಶನ್​ಗೆ ಬೇಲ್​​ ಕೊಡಬಾರದು ಅಂತ ವಾದ ಮಂಡಿಸಿದ್ದಾರೆ. ಅದ್ರೆ ಈ ಇಬ್ಬರಲ್ಲಿ ಯಾರಿಗೆ ಜಯ ಸಿಗುತ್ತೆ ಅನ್ನೋದು ಸೋಮವಾರ ಗೊತ್ತಾಗಲಿದೆ. ಹಾಗಾದ್ರೆ ದರ್ಶನ್​ ಹಬ್ಬ ಮುಗಿದ ಮೇಲಾದ್ರೂ ಹೊರಗೆ ಬರ್ತಾರಾ..? ಜಾಮೀನು ಅರ್ಜಿಯ ವಾದ ಪ್ರತಿವಾದ ಹೇಗೆ ನಡೆಯಿತು ಅನ್ನೋ ಕಂಪ್ಲೀಟ್​​ ಡಿಟೇಲ್ಸ್​​ ಇವತ್ತಿನ ಎಫ್​.ಐ.ಆರ್​​. 

ಅವಮಾನಿಸಿದವರ ಮಾನ ಉಳಿಸಿದ್ದ ಹೃದಯವಂತ ರತನ್: ಟಾಟಾ ಸಾಮ್ರಾಟ ತನ್ನ ಸಾಮ್ರಾಜ್ಯ ವಿಸ್ತರಿಸಿದ್ದು ಹೇಗೆ?

ಸಿವಿ ನಾಗೇಶ್​ ಅವರ ಮೊದಲ ದಿನದವಾದ ಕೇಳಿ ಬಾಯಿಯ ಮೇಲೆ ಬೆರಳು ಇಟ್ಟುಕೊಂಡಿದ್ದ ಜನ ಅದೇ ಪ್ರಸನ್ನ ಕುಮಾರ್​ ಅವರ ಡೈನಮಿಕ್​ ಪ್ರತಿವಾದ ಕೇಳಿ ಥಂಡ ಹೊಡೆದಿದ್ರು.. ಇದೆಲ್ಲಾ ನಿನ್ನೆಯ ಕಥೆ.. ಇವತ್ತು ಮತ್ತೆ ಸಿವಿ ನಾಗೇಶ್​​ ಮತ್ತು ಪ್ರಸನ್ನ ಕುಮಾರ್​​ ಅವರ ಹೈವೋಲ್ಟೇಜ್ ವಾದ ಪ್ರತಿವಾದ ನಡೀತು.

2 ದಿನ ಚಾರ್ಜಶೀಟ್​​ ಲೋಪದೋಷಗಳ ಮೇಲೆ ವಾದ ಪ್ರತಿವಾದ ನಡೆದಿತ್ತು.. ಆದ್ರೆ ಇವತ್ತು ಟೆಕ್ನಿಕಲ್​​ ಎವಿಡೆನ್ಸ್​​​ ಮೇಲೆ ಸಿವಿ ನಾಗೇಶ್​ ಮತ್ತು ಪ್ರಸನ್ನ ಕುಮಾರ್​​ ವಾದ ಮಂಡಿಸಿದ್ರು.. ಇನ್ನೂ ಇವತ್ತು ಸುದೀರ್ಘ 5 ಗಂಟೆಗಳ ಕಾಲ ನಡೆದ ಜಾಮೀನು ಅರ್ಜಿ ವಿಚಾರಣೆ ನಡೆದು ಕೊನೆಗೆ ನ್ಯಾಯಾಲಯ ತೀರ್ಪನ್ನ ಸೋಮವಾರಕ್ಕೆ ಮುಂದೂಡಲಾಗಿದೆ.. ಈ ಮೂಲಕ ಈ ವರ್ಷದ ವಿಜಯದಶಮಿ ಹಬ್ಬವನ್ನ ದರ್ಶನ್​​​ ಜೈಲಿನಲ್ಲೇ ಆಚರಿಸಬೇಕಿದೆ.. ಅದ್ರೆ ದೀಪಾವಳಿ ಕಥೆ ಏನು ಅನ್ನೋದು ಸೋಮವಾರ ಗೊತ್ತಾಗಲಿದೆ. 

ಬರೊಬ್ಬರಿ 111 ದಿನಗಳನ್ನ ಜೈಲಿನಲ್ಲಿ ಕಳೆದಿರುವ ದಾಸ.ಈಗ ಕೊಂಚ ರಿಲ್ಯಾಕ್ಸ್​​ ಆಗಿದ್ದಾರೆ ಸೋಮವಾರ ಹೊರಗೆ ಬಂದೇ ಬಿಡ್ತೀನಿ ಅನ್ನೋ ಕಾನ್ಫಿಡೆಂಟ್​​ನಲ್ಲಿದ್ದಾರೆ.. ಅದ್ರೆ ನ್ಯಾಯಾಲಯದ ತೀರ್ಪು ಏನಿರಲಿದೆ ಅನ್ನೋದು ಎಲ್ಲರ ಕುತೂಹಲ. 

Video Top Stories