Neha murder case: ಅದು ಲವ್ ಜಿಹಾದ್ ಅಲ್ಲ ಬ್ರೇಕ್ಅಪ್ ಕಹಾನಿ ಅಂದ ಸರ್ಕಾರ! ನೇಹಾ ಕೊಲೆಗೆ ಫಯಾಜ್ ಕೊಟ್ಟ ಉತ್ತರ?

ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಮಗಳ ಭೀಕರ ಹತ್ಯೆ
BVB ಕಾಲೇಜು ಕ್ಯಾಂಪಸ್‌ನಲ್ಲೇ ರಕ್ತದ ಕೋಡಿ ಹರಿಸಿದ ಪಾಪಿ!
ಹುಬ್ಬಳ್ಳಿ ಕಿಮ್ಸ್‌ಗೆ ಭೇಟಿ ನೀಡಿ ಗಣ್ಯರಿಂದ ಅಂತಿಮ ದರ್ಶನ!
 

Share this Video
  • FB
  • Linkdin
  • Whatsapp

ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣಕ್ಕೆ(Neha murder case) ಟ್ವಿಸ್ಟ್‌ ಸಿಕ್ಕಿದ್ದು, ಇದು ಲವ್‌ ಜಿಹಾದ್‌ ಅಲ್ಲ. ಬ್ರೇಕಪ್‌ ಮಾಡಿಕೊಂಡಿದ್ದಕ್ಕೆ ಈ ಕೊಲೆ(Murder) ಆಗಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಗುರುವಾರ ಸಂಜೆ ನಾಲ್ಕು ಗಂಟೆಗೆ ಬಿವಿಬಿ ಕಾಲೇಜು ಅವರಣದಲ್ಲಿ ನೇಹಾ ಕೊಲೆ ನಡೆದಿದೆ. ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಈಕೆ ಕಾಂಗ್ರೆಸ್‌ನ(Congress) ನಿಷ್ಠಾವಂತ ಕಾರ್ಯಕರ್ತ ನಿರಂಜನ್‌ ಹಿರೇಮಠ ಮಗಳು. ಹಂತಕ ಸುಮಾರು 9 ಬಾರಿ ನೇಹಾಗೆ ಚುಚ್ಚಿ ಅಲ್ಲಿಂದ ಪರಾರಿಯಾಗಿದ್ದ, ಈ ದೃಶ್ಯ ಕಾಲೇಜಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಕೆಯ ಜೊತೆಗೆ ಓದುತ್ತಿದ್ದ ಫಯಾಜ್‌ ನೇಹಾಳನ್ನು ಕೊಲೆ ಮಾಡಿದ್ದಾನೆ.

ಇದನ್ನೂ ವೀಕ್ಷಿಸಿ: ಉತ್ತರದಿಂದ ದಕ್ಷಿಣಕ್ಕೆ ಬಂದ ಗಾಂಧಿ ಕುಟುಂಬದ ಕುಡಿ! ಛಿದ್ರವಾಗಿದ್ದು ಹೇಗೆ ಕಾಂಗ್ರೆಸ್ ಭದ್ರಕೋಟೆ ಅಮೇಥಿ..?

Related Video