Asianet Suvarna News Asianet Suvarna News

ನನ್ನ ಮಗ ಮಾಡಿದ ತಪ್ಪಿಗೆ ಕ್ಷಮೆಯಾಚಿಸುವೆ, ಯಾವ ಮಕ್ಕಳು ತಪ್ಪು ಮಾಡಿದ್ರೂ ತಪ್ಪೇ: ಫಯಾಜ್ ತಾಯಿ ಮಮ್ತಾಜ್

ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಫಯಾಜ್ ತಾಯಿ ಮಮ್ತಾಜ್ ಪ್ರತಿಕ್ರಿಯೆ ನೀಡಿ, ನನ್ನ ಮಗನಿಗೆ ಶಿಕ್ಷೆಯಾಗಲಿ ಎಂದಿದ್ದಾರೆ.

ಧಾರವಾಡ: ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ(Neha Hiremath murder case) ಸಂಬಂಧಿಸಿದಂತೆ ಆರೋಪಿ ಫಯಾಜ್(Fayaz) ತಾಯಿ ಮಮ್ತಾಜ್(Mumtaz) ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮಗ ಮಾಡಿದ ತಪ್ಪಿಗೆ ಕ್ಷಮೆಯಾಚಿಸುವೆ. ಯಾವ ಮಕ್ಕಳು ತಪ್ಪು ಮಾಡಿದ್ರೂ ತಪ್ಪೇ, ಕಾನೂನು ಪ್ರಕಾರ ಏನು ಬೇಕಾದರೂ ಶಿಕ್ಷೆ ನೀಡಲಿ. ನೂರಾರು ಮಕ್ಕಳಿಗೆ ನಾನು ಶಿಕ್ಷಣ ಕೊಡುತ್ತೇನೆ. ಫಯಾಜ್ ಮಾಡಿದ ತಪ್ಪಿಗೆ ಶಿಕ್ಷೆ ಆಗಲೇಬೇಕು ಎಂದು ಧಾರವಾಡದಲ್ಲಿ(Dharwad) ಫಯಾಜ್ ತಾಯಿ ಮಮ್ತಾಜ್ ಹೇಳಿದ್ದಾರೆ. ನನ್ನ ಮಗ ಮಾಡಿದ ತಪ್ಪಿಗೆ ನಾನು ಕರ್ನಾಟಕ ಜನತೆಗೆ ಕ್ಷಮೆ‌ ಕೇಳುತ್ತೇನೆ. ಅವಳು ನನ್ನ ಮಗಳು ಇದ್ದ ಹಾಗೆ ನೇಹಾ ತಂದೆಗೆ ಕ್ಷಮೆ ಕೇಳುತ್ತೇನೆ. ಕಾನೂನು ಏನು ಶಿಕ್ಷೆ ಕೊಡುತ್ತೋ ಅದಕ್ಕೆ ನನ್ನ ಸಹಮತ ಇದೆ. ನೇಹಾ ಅನ್ನೋ ಹುಡುಗಿ ನನ್ನ ಲವ್ ಮಾಡ್ತಾಳೆ ಎಂದಿದ್ದ. ನಾನು ಅದಕ್ಕೆ ಬೇಡ ಎಂದು ಹೇಳಿದ್ದೆ, ನಾನು ಅವನನ್ನು ಐಎಎಸ್ ಮಾಡಿಸಬೇಕು ಎಂದು ಕನಸು ಕಂಡಿದ್ದೆ ಎಂದು ಫಯಾಜ್ ತಾಯಿ ಮಮ್ತಾಜ್ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ:  ಬೆಂಗಳೂರು ಗ್ರಾಮಾಂತರದಲ್ಲಿ ಮತದಾರನ ಒಲವು ಯಾರ ಪರ ? ಗೆಲುವು ಯಾರಿಗೆ ?

Video Top Stories