Crime News: ಸೊಸೆ ಮೇಲೆ ಕಣ್ಣು ಹಾಕಿದ್ದ ಮಾವ: ಕೊಂದು ಕೆರೆಗೆ ಬಿಸಾಕಿದ ಸುಪಾರಿ ಕಿಲ್ಲರ್ಸ್

ತನ್ನ ಸೊಸೆಯ ಮೇಲೆಯೇ ಕಣ್ಣು ಹಾಕಿದ್ದ ಮಾವ ಕೊಲೆಯಾಗಿದ್ದಾನೆ. ಮಗಳಿಗೆ ಕಿರುಕುಳ ನೀಡ್ತಿದ್ದ ಬೀಗನನ್ನು ಸುಪಾರಿ ಕೊಟ್ಟು ಮರ್ಡರ್ ಮಾಡಿಸಲಾಗಿದೆ.
 

Share this Video
  • FB
  • Linkdin
  • Whatsapp

ಅದೊಂದು ಪುಟ್ಟ ಗ್ರಾಮ. ಆ ಗ್ರಾಮದ ಹೊರಗಡೆಯೊಂದು ಒಂಟಿ ಮನೆ. ಮನೆಯಲ್ಲಿ ಅಪ್ಪ ಅಮ್ಮ, ಮಗ ಸೊಸೆ. ಆ ಕುಟುಂಬದ ಬಗ್ಗೆ ಗ್ರಾಮಸ್ಥರಿಗೆ ಒಳ್ಳೆಯ ಆಬಿಪ್ರಾಯವೇ ಇತ್ತು. ಆದ್ರೆ 2 ವರ್ಷದ ಹಿಂದೆ ಮನೆಯ ಒಡತಿ ಪರಲೋಕ ಸೇರಿಬಿಡ್ತಾಳೆ. ಮನೆಯಲ್ಲಿ ಮಗ ಸೊಸೆ ಜೊತೆ ತಂದೆ ಆರಾಮಾಗಿ ಕಾಲ ಕಳೆಯುತ್ತಿರುತ್ತಾನೆ. ಆದ್ರೆ ಅವತ್ತೊಂದು ದಿನ ಮಗ ಮತ್ತು ಸೊಸೆ ಊರಿಗೆ ಹೋಗಿದ್ದಾಗ ಒಂಟಿಯಾಗಿದ್ದ ವೃದ್ಧ ರಾತ್ರಿಯಾಗಿ ಬೆಳಗಾಗೋದ್ರಲ್ಲಿ ಹೆಣವಾಗಿದ್ದ. ರಾತ್ರಿ ಮನೆಯಲ್ಲಿ ಮಲಗಿದ್ದವನು ಬೆಳಗೆ ಊರ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ. ಇನ್ನೂ ಈ ಕೇಸ್'ನ ಬೆನ್ನುಬಿದ್ದ ಪೊಲೀಸರಿಗೆ ಒಂದೇ ಒಂದು ಸುಳಿವು ಸಿಗದೇ ಪರದಾಡಿಬಿಟ್ರು. ಆದ್ರೆ ಘಟನೆ ನಡೆದು ಕೆಲವೇ ದಿನಗಳಲ್ಲಿ ಪೊಲೀಸರು ಆ ಕೇಸ್'ನ್ನು ಭೇದಿಸಿದ್ರು. ಅಷ್ಟಕ್ಕೂ ಆ ರಾತ್ರಿ ಏನಾಯ್ತು.? ಮನೆಯಲ್ಲಿ ಒಬ್ಬಂಟಿಯಾಗಿದ್ದ ವೃದ್ಧನನ್ನು ಕೊಂದಿದ್ಯಾರು..? ಕೆರೆಯಲ್ಲಿ ಬಿಸಾಡಿದ್ದು ಯಾರು..? ಇದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

Related Video